ಬೆಂಗಳೂರು: ಸಿ.ಎಂ ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್, ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಬಜೆಟ್ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಟೀಕಿಸಿದ್ದಾರೆ.
ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಈ ಬಜೆಟ್’ನಲ್ಲಿ ಯಾವುದೇ ತಿರುಳು ಇಲ್ಲ. ಏಕೆಂದರೆ ರೈತರ ಆದಾಯ ಹೆಚ್ಚಿಸುವ ಯಾವುದೇ ಕಾರ್ಯಗಳಿಲ್ಲ ಕೃಷಿ ಉತ್ಪನ್ನಗಳ ಖರೀದಿಗೆ ಆವರ್ತ ನಿಧಿ ಮೀಸಲಿಟ್ಟಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೂನ್ಯ ಬಡ್ಡಿತರದ ಸಾಲದ ಮೊತ್ತವನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದು ಸ್ವಾಗತಾರ್ಹ. ಆದರೆ, ಇದು ಕರ್ನಾಟಕದಲ್ಲಿರುವ ಶೇ87ರಷ್ಟು ಸಣ್ಣ ಇಳುವಳಿದಾರರಿಗೆ ಇದು ಉಪಯೋಗವಾಗುವುದಿಲ್ಲ ಎಂದು ತಿಳಿದಿದ್ದಾರೆ.
ಒಟ್ಟು ಬಜೆಟ್ 3.07 ಲಕ್ಷ ಕೋಟಿಯಲ್ಲಿ ನೀರಾವರಿಗೆ ಕೇವಲ 6.5% ಅನ್ನು ಮೀಸಲಿಡಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ 14-15% ವರೆಗೆ ಬಜೆಟ್ ಹಣ ಮೀಸಲಿಡುತ್ತಿವೆ. ಕೃಷಿ ತೋಟಗಾರಿಕೆಗೆ ಕೇವಲ 11% ಮೀಸಲಿಡಲಾಗಿದೆ. ಈ ಅಂಕಿ – ಅಂಶಗಳು ಕೃಷಿಕರ ಪರವಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಕೃಷಿಕರು ಸಾಲದ ಹೊರೆಯಿಂದ ಹೊರಬರಲು ಯಾವುದೇ ಕ್ರಮಗಳು ಈ ಬಜೆಟ್‌ನಲ್ಲಿ ಪ್ರಸ್ತಾಪ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.