ಕರೋನಾ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಮುಖಿಯಾಗಿತ್ತು. ಕರೋನಾ ಮತ್ತು ಲಾಕ್ಡೌನ್ ಗಳು ಒಂದು ರೀತಿಯಲ್ಲಿ ದೇಶದ ಆರ್ಥಿಕತೆಗೆ ಆಗಿದ್ದ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಈ ಹಿನ್ನೆಲೆಯಲ್ಲಿ ಕರೊನಾ ನಂತರದ ಎರಡನೇ ಬಜೆಟ್ ಬಗ್ಗೆ ಎಲ್ಲಾ ವರ್ಗದ ಜನರೂ ಒಂದಲ್ಲ ಒಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಜೊತೆಗೀಗ ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ, ಪಂಜಾಬ್ ಮತ್ತು ಮಣಿಪುರಗಳಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ‘ಇದು ಚುನಾವಣಾ ಬಜೆಟ್ ಆಗಿಬಿಡಬಹುದು’ ಎಂಬ ಆತಂಕವೂ ಇದೆ.
ಈ ಬಾರಿಯ ಬಜೆಟ್ ಹೇಗೆ ರೂಪುಗೊಂಡಿದೆ? ಆರ್ಥಿಕತೆಯ ಪುನಶ್ಚೇತನಕ್ಕೆ ಏನೇನು ಕ್ರಮ ಕೈಗೊಳ್ಳಲಾಗಿದೆ? ಎಂಬ ಪ್ರಶ್ನೆಗಳಿವೆ. ಹಾಗೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೂಡಿ ಈ ಬಹುನಿರೀಕ್ಷಿತ, ಬಹು ಚರ್ಚಿತ ಬಜೆಟ್ ರೂಪಿಸಿರುವ ಪ್ರಮುಖ ಅಧಿಕಾರಿಗಳು ಯಾರು ಎಂಬ ಕುತೂಹಲವೂ ಇದೆ. ಈ ಹಿನ್ನೆಲೆಯಲ್ಲಿ ‘ಪ್ರತಿಧ್ವನಿ’ ಈ ಬಾರಿಯ ಬಜೆಟ್ ರೂಪಿಸಿದ ಐವರು ಪ್ರಮುಖ ಅಧಿಕಾರಿಗಳನ್ನು ಗುರುತಿಸಿ ನಿಮ್ಮ ಮುಂದೆ ಇಡುತ್ತಿದೆ.
ನಂ. 1: ಟಿ.ವಿ. ಸೋಮನಾಥನ್
ಟಿ.ವಿ. ಸೋಮನಾಥನ್ ಅವರು ತಮಿಳುನಾಡು ಕೇಡರ್‌ನ 1987ರ ಬ್ಯಾಚ್ ಐಎಎಸ್ ಅಧಿಕಾರಿ. ಈ ಹಿಂದೆ 2015ರಲ್ಲಿ ಪ್ರಧಾನ ಮಂತ್ರಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಸಕ್ತ ಸಾಲಿನ ಬಜೆಟ್ ರೂಪಿಸಿದ ಐವರಲ್ಲಿ ಹಿರಿಯ ಅಧಿಕಾರಿಯಾಗಿದ್ದಾರೆ.
ನಂ. 2: ತರುಣ್ ಬಜಾಜ್
ತರುಣ್ ಬಜಾಜ್ ಅವರು ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಕಾರ್ಯದರ್ಶಿ. ಪ್ರಧಾನ ಮಂತ್ರಿ ಕಚೇರಿಯಿಂದ ನೇಮಕಗೊಂಡ ಮತ್ತೊಬ್ಬ ಅಧಿಕಾರಿ. 2022ರ ಬಜೆಟ್ ನಲ್ಲಿ ಅವರು ತೆರಿಗೆ ಅನುಸರಣೆಗಳನ್ನು ಸರಾಗಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಿದ್ದಾರೆ.
ನಂ. 3: ಅಜಯ್ ಸೇಠ್
ಅಜಯ್ ಸೇಠ್ ಅವರು 20121ರ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇರುವ ಮೊದಲು ಬೆಂಗಳೂರು ಮೆಟ್ರೋದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣಗಳನ್ನು ರಚಿಸುವ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ನಂ. 4: ದೇಬಶಿಶ್ ಪಾಂಡಾ
ದೇಬಶಿಶ್ ಪಾಂಡಾ 1987ರ ಬ್ಯಾಚ್‌ನ ಐಎಎಸ್ ಅಧಿಕಾರಿ. ದೇಬಶೀಶ್ ಪಾಂಡಾ ಅವರು ಹಣಕಾಸು ಸೇವೆಗಳ ಇಲಾಖೆಯ ಮುಖ್ಯಸ್ಥರಾಗಿ ಸಾರ್ವಜನಿಕ ವಲಯದ ಕಚೇರಿಗಳ ಪುನರುಜ್ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ನಂ. 5: ತುಹಿನ್ ಕಾಂತಾ ಪಾಂಡೆ
ತುಹಿನ್ ಕಾಂತಾ ಪಾಂಡೆ ಅವರು ಈ ವರ್ಷ ಕೇಂದ್ರ ಸರ್ಕಾರವು ತನ್ನ ಹೂಡಿಕೆಯ ಗುರಿಗಳನ್ನು ತಲುಪದಿರಬಹುದು, ಆದರೆ ಏರ್ ಇಂಡಿಯಾ ಹಿಂತೆಗೆದುಕೊಳ್ಳುವಲ್ಲಿ ತುಹಿನ್ ಕಾಂತಾ ಪಾಂಡೆ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಬಜೆಟ್ 2022ರ ನಂತರ ಹೆಚ್ಚಿನ ಯೋಜನೆಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.