ಮಾಜಿ ಸಿಎಂ ಬಿಎಸ್ ವೈ (Bsy)ವಿರುದ್ಧ ಪೊಕ್ಸೊ (Pocso)ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 1 ನೇ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆನಡೆದಿದೆ.ಕೋರ್ಟ್ ಗೆ ಸಲ್ಲಿಸಿದ್ದ ಆರೋಪಪಟ್ಟಿ ವಿಚಾರಣೆಗೆ ಪರಿಗಣಿಸಿದ ಕೋರ್ಟ್,ಜುಲೈ 15 ರಂದು ಖುದ್ದಾಗಿ ಹಾಜರಾಗುವಂತೆ ಬಿ ಎಸ್ ವೈಗೆ ಸಮನ್ಸ್ ನೀಡಿದೆ.ಬಿ ಎಸ್ ಯಡಿಯೂರಪ್ಪ & ಇತರೆ ಆರೋಪಿಗಳಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.
![](https://pratidhvani.com/wp-content/uploads/2024/04/BSY-Gram-panchayat-987x1024.jpg)
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಲಾಗಿದೆ ಎಂಬ ಆರೋಪ ಪ್ರಕರಣದಲ್ಲಿ ಈ ಹಿಂದೆ ತನಿಖಾಧಿಕಾರಿ ಪ್ರಥ್ವಿ ಎದುರು ಮಾಜಿ ಸಿಎಂ ಬಿಎಸ್ ವೈ (BSY) ಹಾಜರಾಗಲಿದ್ದರು. ಆ ಮೂಲಕ ದೂರು ದಾಖಲಾದ ಮೂರು ತಿಂಗಳ ಬಳಿಕ ಬಿಎಸ್ ವೈ ತನಿಖೆಗೆ ಹಾಜರಾಗಲಿದ್ದರು. ಈ ಮುಂಚೆ ಪ್ರಕರಣದಲ್ಲಿ ಮೊದಲ ಬಾರಿ ವಿಚಾರಣೆಗೆ ಹಾಜರ್ ಆಗಿ ವಾಯ್ಸ್ ಸ್ಯಾಂಪಲ್ (Voice sample) ಕೊಟ್ಟು ಹೋಗಿದ್ದ ಬಿಎಸ್ ಯಡಿಯೂರಪ್ಪ, ನಂತರ ಎರಡನೇ ಬಾರಿ ಹಾಜರಾಗಿದ್ದರು.
ಬಿಎಸ್ ಯಡಿಯೂರಪ್ಪ (B S yediyurappa)ವಿರುದ್ಧ ಮಾರ್ಚ್ 14 ರಂದು ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಹೈಕೋರ್ಟ್ ನಲ್ಲಿ ಇತ್ತೀಚೆಗೆ, ಬಿಎಸ್ ವೈ ರನ್ನ ಬಂಧಿಸಬಾರದು ಎಂಬ ಆದೇಶ ಬಂದಿತ್ತು.