ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ವಿರುದ್ಧದ ಪೋಕ್ಸೊ ಕೇಸ್ ಗೆ ಸಂಬಂಧಪಟ್ಟಂತೆ, ಈ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಪರವಾಗಿ ಸಲ್ಲಿಸಿದ್ದ ಅರ್ಜಿ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.
ಈ ಪ್ರಕರಣದಲ್ಲಿ ಇದುವರೆಗೂ ವಿಚಾರಣಾ ನ್ಯಾಯಾಲಯಕ್ಕೆ ಬಿಎಸ್ ವೈ ಹಾಜರಾತಿಗೆ ಹೈಕೋರ್ಟ್ (Highcourt) ವಿನಾಯಿತಿ ನೀಡಿತ್ತು.ಆದ್ರೆ ವಿನಾಯಿತಿ ರದ್ದುಪಡಿಸಿರುವಂತೆ ಕೋರ್ಟ್ ಗೆ ಸಿಐಡಿ ಮಧ್ಯಂತರ ಅರ್ಜಿ ಸಲ್ಲಿಸಿದೆ.
ಇಂದು ಮಧ್ಯಾಹ್ನ 2.30ಕ್ಕೆ ಈ ಅರ್ಜಿಯ ವಿಚಾರಣೆ ನಡೆಯಲಿದೆ.ನ್ಯಾ.ಎಂ.ನಾಗಪ್ರಸನ್ನ (M nagaprasanna) ಅವರ ಪೀಠದಲ್ಲಿ ವಿಚಾರಣೆ ನಡೆಯಲಿದ್ದು ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದಿಸಲಿದ್ದಾರೆ.ಸಿಐಡಿ ಪರ ಹಿರಿಯ ವಕೀಲ ಪ್ರೋ.ರವಿವರ್ಮಕುಮಾರ್ ವಾದ ಮಂಡಿಸುವ ಸಾಧ್ಯತೆಯಿದೆ.