ಚನ್ನಪಟ್ಟಣ ಬಿಜೆಪಿ ಟಿಕೆಟ್ (Channapattana Bjp ticket) ಸಿಗದ ಕಾರಣ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾದ ಸಿ.ಪಿ.ಯೋಗೇಶ್ವರ್ (Cp yogeshwar) ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Bs yediyurappa)ಗರಂ ಆಗಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಿಪಿವೈ, ಟಿಕೆಟ್ ಸಿಗದ ಕಾರಣ ನಿರಾಸೆಯಾಗಿ ಬಿಜೆಪಿ ಬಿಟ್ಟು ಕಾಂಗ್ರೆಸ್ಸೇರಿದ್ದಾರೆ. ಈ ಮೂಲಕ ಮೈತ್ರಿಗೆ ಶಾಕ್ ನೀಡಿದ್ದು, ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಮತದಾರರೇ ಪಾಠ ಕಲಿಸ್ತಾರೆ ಎಂದು ಬಿ.ಎಸ್.ಯಡಿರೂರಪ್ಪ ಹೇಳಿದ್ದಾರೆ.
ಈ ಪಕ್ಷ ಆ ಪಕ್ಷ ಅಂತ ಪಕ್ಷಾಂತರ ಮಾಡೋರ ವಿರುದ್ಧ ನಮ್ಮ ಆಕ್ರೋಶವಿದೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯೇ (Nikhil kumaraswamy) ಗೆಲ್ಲುತ್ತಾರೆ ಅಂತ ಸಿಪಿವೈ ವಿರುದ್ಧ ಬಿಎಸ್ವೈ ಕಿಡಿ ಕಾರಿದ್ದಾರೆ.