ಪಕ್ಷದೊಳಗಿನ ಹಲವಾರು ನಾಯಕರ ಭಿನ್ನಮತವನ್ನು ಎದುರಿಸುತ್ತಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಶುಕ್ರವಾರ ಸಂಜೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭೇಟಿಯಾಗಿ ಅನಾರೋಗ್ಯದ ಕಾರಣವೊಡ್ಡಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಅವರನ್ನು ಬದಲಿಸಲು ಪಕ್ಷ ನಿರ್ಧರಿಸಿದರೆ, ಜುಲೈ 26 ರೊಳಗೆ ನಾಯಕತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿಗಳು ಜುಲೈ 26ಕ್ಕೆ ಎರಡು ವರ್ಷಗಳ ಅವಧಿ ಸಂಪೂರ್ಣವಾಗುತ್ತದೆ. ತದನಂತರ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಗಳು ಬದಲಾವಣೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ತಮ್ಮ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯ ಪಕ್ಷದ ಘಟಕದಲ್ಲಿ ಉತ್ತಮ ಸ್ಥಾನ ಸಿಗಬೇಕು ಎಂಬ ಷರತ್ತಿನ ಮೇಲೆ ಮುಖ್ಯಮಂತ್ರಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ನಾಯಕರಾದ ರಾಜನಾಥ್ ಸಿಂಗ್, ಜೆಪಿ ನಡ್ಡಾ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
“ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಮತ್ತು ಲೋಕಸಭಾ ಚುನಾವಣೆಯಲ್ಲಿ ನಾವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು” ಎಂದು ಅವರು ಹೇಳೀದ್ದಾರೆ ಎಂಬುದಾಗಿ ಬಿ.ಎಸ್. ಯಡಿಯೂರಪ್ಪ ಅವರು ಗೃಹ ಸಚಿವ ಅಮಿತ್ ಶಾ ಅವರ ನಿವಾಸದಿಂದ ಹೊರಡುವಾಗ ಸುದ್ದಿಗಾರರೊಂದಿಗೆ ಮಾತಾಡಿದ್ಧಾರೆ ಎಂದು NDTV ವರದಿ ಮಾಡಿದೆ.
ಬಿಜೆಪಿ ನಾಯಕತ್ವದ ಸಭೆಗಳಿಗಾಗಿ ತನ್ನ ಮಗನೊಂದಿಗೆ ಚಾರ್ಟರ್ಡ್ ವಿಮಾನದಲ್ಲಿ ದೆಹಲಿಗೆ ಹಾರಿದ ಯಡಿಯೂರಪ್ಪ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಯಾವುದೇ ಪ್ರಶ್ನೆಯನ್ನು ಅಧಿಕೃತವಾಗಿ ಬದಿಗೊತ್ತಿದ್ದಾರೆ.
ನಿನ್ನೆ, ಪ್ರಧಾನ ಮಂತ್ರಿಯ ಭೇಟಿಯ ನಂತರ, ವರದಿಗಾರರ ಪ್ರಶ್ನೆಗಳಿಗೆ ನಗುತ್ತಾ “ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ವದಂತಿಯ ಬಗ್ಗೆ ನನಗೆ ತಿಳಿದಿಲ್ಲ. ನೀವು ಹೇಳಿ?” ಎಂದು ವರದಿಗಾರಿಗೆ ಪ್ರಶ್ನಿಸಿ ಮುಂದೆ ಸಾಗಿದ್ದರು.
78 ವರ್ಷದ ಮುಖ್ಯಮಂತ್ರಿ ಕಚೇರಿಯ ಹೇಳಿಕೆಯಲ್ಲಿ ಉಭಯ ನಾಯಕರು ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ಯೋಜನೆ ಮತ್ತು ಮೆಕೆಡಾಟು ಯೋಜನೆ ಸೇರಿದಂತೆ ಹಲವಾರು ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿಸಿದೆ.
ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಎಂ ಯಡಿಯೂರಪ್ಪ.
2023ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಕರ್ನಾಟಕದಲ್ಲಿ ಪಕ್ಷದ ಭವಿಷ್ಯವನ್ನು ಇನ್ನಷ್ಟು ಬಲಪಡಿಸುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ “ಎಂದು ಜೆ.ಪಿ.ನಡ್ಡಾ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವು ತಿಂಗಳುಗಳಿಂದ ನಡೆಯುತ್ತಲೇ ಇವೆ, ಹಲವಾರು ನಾಯಕರು ಮುಖ್ಯಮಂತ್ರಿ ವಿರುದ್ದ ಬಹಿರಂಗವಾಗಿ ಸವಾಲು ಹಾಕುತ್ತಿದ್ದಾರೆ .
ಶಿಸ್ತು ಕ್ರಮದ ಎಚ್ಚರಿಕೆಗಳನ್ನು ಧಿಕ್ಕರಿಸಿ, ಅಸಮಾಧಾನಗೊಂಡ ಬಿಜೆಪಿ ನಾಯಕರಾದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯಟ್ನಾಲ್, ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ಮತ್ತು ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಅವರು ಸಿಎಂ ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮತ್ತು ಅವರ ಪುತ್ರ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದರು.
ಶಾಸಕರ ಪ್ರತಿಕ್ರಿಯೆ ಪಡೆಯಲು ಬಿಜೆಪಿ ತಂಡವನ್ನು ಕರ್ನಾಟಕಕ್ಕೆ ಕಳುಹಿಸಿತು.
ಸಭೆಗಳ ನಂತರ, ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿಗೆ ಪಕ್ಷದ ನಾಯಕತ್ವದ ಬೆಂಬಲವಿದೆ ಎಂದು ಒತ್ತಿ ಹೇಳಿದ್ದರು ಮತ್ತು ಶ್ರೀ ಯಡಿಯೂರಪ್ಪ ಮತ್ತವರ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು.
ಕೆಲವೇ ಕೆಲವು ದಿನ ಸುಮ್ಮನಿದ್ದ ನಾಯಕರು, ಇತ್ತೀಚಿನ ವಾರಗಳಲ್ಲಿ, ಭಿನ್ನಮತೀಯರು ಮುಖ್ಯಮಂತ್ರಿಯ ಮೇಲಿನ ಟೀಕೆಗಳನ್ನು ಪುನರಾರಂಭಿಸಿದ್ದಾರೆ. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕತ್ವವು ” ಭಿನ್ನಮತೀಯರಿಗೆ” ಅವಕಾಶ ಕಲ್ಪಿಸಲು ಕ್ಯಾಬಿನೆಟ್ ವಿಸ್ತರಣೆಯ ಮಾಡಲು ಸಾಧ್ಯತೆಗಳಿದೆಯೇ ಎಂಬುದನ್ನು ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.