• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪತ್ನಿ ಅಕ್ಷತಾ ಜೊತೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ

ಪ್ರತಿಧ್ವನಿ by ಪ್ರತಿಧ್ವನಿ
September 10, 2023
in Top Story, ಇದೀಗ, ದೇಶ, ರಾಜಕೀಯ
0
ರಿಷಿ ಸುನಕ್‌

ರಿಷಿ ಸುನಕ್‌ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅಕ್ಷರಧಾಮಕ್ಕೆ ಭೇಟಿ

Share on WhatsAppShare on FacebookShare on Telegram

ಜಿ 20 ಶೃಂಗಸಭೆಗಾಗಿ ಎರಡು ದಿನ ದೆಹಲಿಗೆ ಆಗಮಿಸಿರುವ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಎರಡನೇ ದಿನವಾದ ಭಾನುವಾರ (ಸೆಪ್ಟೆಂಬರ್ 10) ಮುಂಜಾನೆ ಸಭೆ ಆರಂಭಕ್ಕೂ ಮುನ್ನ ಪತ್ನಿ ಅಕ್ಷತಾ ಮೂರ್ತಿ ಜೊತೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ADVERTISEMENT

ದೇವಾಲಯದಲ್ಲಿ ಪ್ರಾರ್ಥನೆ, ಪೂಜೆ ಸಲ್ಲಿಸಿದ ನಂತರ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಸುನಕ್ ಅವರ ಭೇಟಿಯ ಹಿನ್ನೆಲೆಯಲ್ಲಿ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ರಿಷಿ ಸುನಕ್‌
ರಿಷಿ ಸುನಕ್‌ ಹಾಗೂ ಪತ್ನಿ ಅಕ್ಷತಾ ಅಕ್ಷರಧಾಮದಲ್ಲಿ ಪೂಜೆ ಸಲ್ಲಿಕೆ

ಎರಡು ದಿನಗಳ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಭಾರತಕ್ಕೆ ಬಂದಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಇಂಗ್ಲೆಂಡ್ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ರಿಷಿ ಸುನಕ್ ಅವರು ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.

ರಿಷಿ ಸುನಕ್‌
ರಿಷಿ ಸುನಕ್‌ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅಕ್ಷರಧಾಮ ದೇವಸ್ಥಾನದೊಳಗೆ ಪ್ರಾರ್ಥನೆ ಸಲ್ಲಿಸಿದರು

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ಕುರಿತು ಅಕ್ಷರಧಾಮ ದೇವಾಲಯದ ನಿರ್ದೇಶಕ ಜ್ಯೋತಿಂದ್ರ ದವೆ ಸುದ್ದಿಗಾರರೊಂದಿಗೆ ಮಾತನಾಡಿ, ಅವರ ಅನುಭವ ಅಸಾಧಾರಣವಾಗಿತ್ತು. ಅವರು ಬಹಳ ನಂಬಿಕೆಯಿಂದ ಪೂಜೆ ಮತ್ತು ಆರತಿಯನ್ನು ಮಾಡಿದರು. ನಾವು ಅವರಿಗೆ ದೇವಾಲಯವನ್ನು ತೋರಿಸಿದ್ದೇವೆ. ನಂತರ ದೇವಸ್ಥಾನದ ಮಾದರಿಯನ್ನು ಉಡುಗೊರೆಯಾಗಿ ನೀಡಿದೆವು. ಅವರು ಇಲ್ಲಿ ಪ್ರತಿ ನಿಮಿಷವನ್ನು ಆನಂದಿಸಿದರು. ಅವರ ಪತ್ನಿ ಅಕ್ಷತಾ ಮೂರ್ತಿ ಸಹ ಖುಷಿಪಟ್ಟರು ಎಂದರು.

ರಿಷಿ ಸುನಕ್‌
ಅಕ್ಷರಧಾಮದಲ್ಲಿ ರಿಷಿ ಸುನಕ್‌ ಹಾಗೂ ಪತ್ನಿ ಅಕ್ಷತಾ

G 20 in India | United Kingdom Prime Minister Rishi Sunak and his wife Akshata Murthy at Delhi's Akshardham temple.

(Source: Akshardham temple) pic.twitter.com/yvIc8CXdhI

— ANI (@ANI) September 10, 2023

ಜಿ 20 ಶೃಂಸಭೆಗೂ ಮುನ್ನ, ರಿಷಿ ಸುನಕ್ ಅವರು ಜಿ 20 ಶೃಂಗಸಭೆಗೆ ಭಾರತಕ್ಕೆ ಬಂದಿಳಿದ ಸಂದರ್ಭದಲ್ಲಿ, ನಾನೊಬ್ಬ ಹೆಮ್ಮೆಯ ಹಿಂದೂ. ನಾನು ಹೇಗೆ ಬೆಳೆದೆ, ನಾನು ಹಾಗೇ ಇದ್ದೇನೆ. ಮುಂದಿನ ಒಂದೆರಡು ದಿನ ಇಲ್ಲಿರುವಾಗ ಮಂದಿರಕ್ಕೆ ಭೇಟಿ ನೀಡಬೇಕೆಂದಿದ್ದೇನೆ. ನಾವು ರಕ್ಷಾಬಂಧನವನ್ನು ಆಚರಿಸುತ್ತೇವೆ. ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸುತ್ತೇವೆ. ಆದರೆ ಈ ಬಾರಿ ಕೆಲಸದ ಒತ್ತಡದಿಂದ ಆಚರಿಸಲು ಸಾಧ್ಯವಾಗಲಿಲ್ಲ, ಹೀಗಾಗಿ ದೇವಾಲಯಕ್ಕೆ ಭೇಟಿ ನೀಡಿ ಸರಿದೂಗಿಸುತ್ತೇವೆ ಎಂದಿದ್ದರು.

ರಿಷಿ ಸುನಕ್‌
ಅಕ್ಷರಧಾಮ ದೇವಸ್ಥಾನದ ಅಂಗಳದಲ್ಲಿ ರಿಷಿ ಸುನಕ್‌ ಹಾಗೂ ಪತ್ನಿ ಅಕ್ಷತಾ ವಿಹಾರ
Tags: AksharadhamaAksharadhama TempleAkshata MurthyDelhiG 20 SummitRishi Sunakಅಕ್ಷತಾ ಮೂರ್ತಿಅಕ್ಷರಧಾಮಅಕ್ಷರಧಾಮ ದೇವಸ್ಥಾನಜಿ 20 ಶೃಂಗಸಭೆದೆಹಲಿರಿಷಿ ಸುನಕ್‌
Previous Post

ವಿಪಕ್ಷ ನಾಯಕನ ಆಯ್ಕೆ ವಿಳಂಬ: ನಡ್ಡಾ, ಕಟೀಲ್‌ಗೆ ಲೀಗಲ್‌ ನೋಟಿಸ್‌ ಜಾರಿ

Next Post

ಜಿ 20 ಶೃಂಗಸಭೆ | ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ವಿಶ್ವ ನಾಯಕರ ನಮನ

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್‌ನಲ್ಲಿ ಕುತೂಹಲ

ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ದೆಹಲಿ ಸಭೆ ಬಳಿಕ ಕಾಂಗ್ರೆಸ್‌ನಲ್ಲಿ ಕುತೂಹಲ

May 26, 2026
ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

ಸಿಬಿಎಸ್‌ಇ ಡಿಜಿಟಲ್ ಮೌಲ್ಯಮಾಪನದಲ್ಲಿ ಭಾರಿ ಗೊಂದಲ; “ಇದು ನನ್ನ ಉತ್ತರ ಪತ್ರಿಕೆಯೇ ಅಲ್ಲ” ಎಂದು ವಿದ್ಯಾರ್ಥಿಗಳ ಆಕ್ರೋಶ

May 26, 2026
Next Post
ಜಿ 20 ಶೃಂಗಸಭೆ

ಜಿ 20 ಶೃಂಗಸಭೆ | ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ವಿಶ್ವ ನಾಯಕರ ನಮನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada