ಹಾಸನ : ಜೆಡಿಎಸ್ ಭದ್ರಕೋಟೆ ಹಾಸನದಲ್ಲಿಂದು ಬಿಜೆಪಿ ಕೇಸರಿ ಬಾವುಟ ಹಾರಿಸಲು ಸಜ್ಜಾಗಿದ್ದು ಈ ಮೂಲಕ ದಳಪತಿಗಳಿಗೆ ಕೌಂಟರ್ ನೀಡಲು ಸಿದ್ಧತೆ ನಡೆಸಿದೆ. ಇಂದು ಹಾಸನ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರೋಡ್ ಶೋ ನಡೆಸಲಿದ್ದಾರೆ.
ಈ ವಿಚಾರವಾಗಿ ಮಾಜಿ ಸಚಿವ ಹೆಚ್ಡಿ ರೇವಣ್ಣ ಬೇಲೂರಿನಲ್ಲಿ ಮಾತನಾಡಿದ್ದು, ಬಿಜೆಪಿಯವರು ಅಮೆರಿಕ ಹಾಗೂ ರಷ್ಯಾ ಅಧ್ಯಕ್ಷರನ್ನೂ ಬೇಕಿದ್ದರೆ ಕರೆದುಕೊಂಡು ಬರಲಿ . ನಮ್ಮ ಹತ್ತಿರ ಯಾವುದೇ ಚುನಾವಣಾ ಚಾಣುಕ್ಯರಿಲ್ಲ. ನಮಗೆ ದೇವೇಗೌಡ ಹಾಗೂ ಕುಮಾರಣ್ಣನೇ ಚಾಣಕ್ಯರು ಎಂದು ಹೇಳಿದ್ದಾರೆ.
ರಾಜ್ಯದ ಜನತೆ ಈಗಾಗಲೇ ಎರಡೂ ರಾಷ್ಟ್ರೀಯ ಪಕ್ಷದ ಆಡಳಿತವನ್ನು ನೋಡಿದ್ದಾರೆ. ಈಗ ಇವರೆಡು ಪಕ್ಷಗಳನ್ನು ಸ್ವಲ್ಪ ದಿನಕ್ಕೆ ರೆಸ್ಟ್ಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.