ದೆಹಲಿಯ ಸಿಂಗು ಪ್ರದೇಶದಲ್ಲಿ ಅಕ್ಟೋಬರ್ 15ರಂದು ರೈತರ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಯುವಕನನ್ನು ಹತ್ಯೆ ಮಾಡಿ ಆತನ ಶವವನ್ನು ಪೊಲೀಸ್ ಬ್ಯಾರಿಕೇಟ್‌ಗೆ ಕಟ್ಟಿರುವುದು ಪತ್ತೆಯಾಗಿದೆ ಎಂದು ತಿಳಿದು ದೆಹಲಿಯ ಹೊರಭಾಗದ ಸಿಂಘು ಗಡಿಯಲ್ಲಿ (Singhu border) 35 ವರ್ಷದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ. ಕೈಕಾಲುಗಳನ್ನು ಕತ್ತರಿಸಿದ್ದ ರೈತನ ಮೃತದೇಹ ಶುಕ್ರವಾರ ಬೆಳಿಗ್ಗೆ ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆಯ ಬಳಿ ಬ್ಯಾರಿಕೇಡ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನ ಎಡಗೈ ತುಂಡಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬರುತ್ತದೆ. ಏತನ್ಮಧ್ಯೆ, ಸಂಯುಕ್ತ ಕಿಸಾನ್ ಮೋರ್ಚಾ, ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಮುನ್ನಡೆಸುತ್ತಿರುವ 40ಕ್ಕೂ ಹೆಚ್ಚು ರೈತ ಸಂಘಗಳ ಒಂದು ಸಂಘಟನೆಯಾಗಿದ್ದು ನಿಹಾಂಗ್ಗಳು (ಶಸ್ತ್ರಗಳನ್ನು ಹೊಂದಿರುವ ಸಿಖ್ ಗುಂಪು) 35 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ರೈತನರ ಒಂದು ಕೈಯನ್ನು ಮಣಿಕಟ್ಟಿನಿಂದ ಕತ್ತರಿಸಲಾಗಿದೆ.
“ಘಟನೆಯ ಹಿಂದೆ ನಿಹಾಂಗ್ ಕೈವಾಡವಿದೆ. ಅವರು ಅದನ್ನು ಒಪ್ಪಿಕೊಂಡಿದ್ದಾರೆ. ನಿಹಾಂಗ್ ಗಳು ನಮಗೆ ಮೊದಲಿನಿಂದಲೂ ತೊಂದರೆ ನೀಡುತ್ತಿದ್ದಾರೆ” ಎಂದು ಎಸ್ಕೆಎಂ ನಾಯಕ ಬಲಬೀರ್ ಸಿಂಗ್ ರಾಜೇವಾಲ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಈ ಬಗ್ಗೆ ಪ್ತಿಕ್ರಿಯಿಸಿರುವ ಡಿಎಸ್‌ಪಿ ಹಂಸರಾಜ್ ಇಂದು ಮುಂಜಾನೆ 5 ಗಂಟೆ ಸುಮಾರಿಗೆ, ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ (ಕುಂಡ್ಲಿ, ಸೋನಿಪತ್) ಕೈಗಳು, ಕಾಲುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಯಾರು ಕೊಲೆಗಾರರು ಎಂಬುದರ ಬಗ್ಗೆ ಮಾಹಿತಿ ಇಲ್ಲ, ಈ ಬಗ್ಗೆ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ
ಈ ಕುರಿತು ಬಿಜೆಪಿ ಹಿರಿಯ ನಾತಕ ಮತ್ತು ಎಂಪಿ ಸುಬ್ರಮಣ್ಯನ್ ಸ್ವಾಮಿ ಟ್ವೀಟ್ ಮಾಡಿದ್ದು, ಸಿಂಘು ಗಡಿ ಭಯಾನಕ ಘಟನೆ ಮತ್ತು ಲಖವೀರ್ ನನ್ನು ನೇಣಿಗೇರಿಸಸಿರುವ (ನೇತುಹಾಕಿರುವ) ಕುರಿತು ಸರ್ಕಾರ ತನಿಖೆ ನಡೆಸಬೇಕು ಮತ್ತು ಒಂದು ವಾರದಲ್ಲಿ ವರದಿಯನ್ನು ಸಾರ್ವಜನಿಕಗೊಳಿಸಬೇಕು.
ಇನ್ನು ಈ ಕೊಲೆಯ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ವ್ಯಕ್ತಿಯ ಕೈಯನ್ನು ಕತ್ತರಿಸಿದ ನಂತರ ರಕ್ತದ ಮಡುವಿನಲ್ಲಿ ಜೀವಂತವಾಗಿದ್ದಾಗ ಆತನಿಂದ ಹೇಳಿಕೆ ಪಡೆಯುತ್ತಿದ್ದಾರೆ. ಆ ವ್ಯಕ್ತಿಯ ಹೆಸರು ಮತ್ತು ತನ್ನ ಮೂಲ ಹಳ್ಳಿಯ ವಿವರಗಳನ್ನು ಹೇಳುವಂತೆ ಒತ್ತಾಯಿಸಲಾಗುತ್ತಿದೆ.