ನಾಳೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಆರಂಭವಾಗಲಿರುವ ಕೋವಿಡ್ ಮೂರನೇ ಲಸಿಕೆ ಅಥವಾ ಬೂಸ್ಟರ್ ದರವನ್ನು 225ರೂ.ಗೆ ಕಡಿತ ಮಾಡಲಾಗಿದೆ.
ಸೆರಮ್ ಇನ್ಸಿಟಿಟ್ಯೂಟ್ ಸಂಸ್ಥೆ ಮುಖ್ಯಸ್ಥ ಪೂನೂವಾಲಾ ಈ ವಿಷಯ ಪ್ರಕಟಿಸಿದ್ದು, ಈ ಹಿಂದೆ ನಿಗದಿಪಡಿಸಲಾಗಿದ್ದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಬೂಸ್ಟರ್ ದರವನ್ನು 600 ರೂ. ಬದಲು 225 ರೂ.ಗೆ ಕಡಿತ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರು ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದಾಗಿದ್ದು, ಏಪ್ರಿಲ್ 10ರಿಂದ ದೇಶದೆಲ್ಲೆಡೆ ಲಭ್ಯವಾಗಲಿದೆ ಎಂದು ಪ್ರಕಟಿಸಿತ್ತು.