• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾದ ರೈತ ಸಂಘಟನೆಗಳು ; ಕುತೂಹಲ ಕೆರಳಿಸಿದ ಪಂಜಾಬ್ ರಾಜಕೀಯ

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
December 27, 2021
in ದೇಶ, ರಾಜಕೀಯ
0
ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾದ ರೈತ ಸಂಘಟನೆಗಳು ; ಕುತೂಹಲ ಕೆರಳಿಸಿದ ಪಂಜಾಬ್ ರಾಜಕೀಯ
Share on WhatsAppShare on FacebookShare on Telegram

ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಕಳೆದ ವರ್ಷ ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ಒಗ್ಗೂಡಿದ 32 ರೈತ ಸಂಘಟನೆಗಳ ಪೈಕಿ 22 ಸಂಘಟನೆಗಳು ಪಂಜಾಬಿನಲ್ಲಿ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸಲು ನಿರ್ಧರಿಸಿವೆ.

ADVERTISEMENT

ಸಂಯುಕ್ತ ಸಮಾಜ್ ಮೋರ್ಚಾ ಎಂದು ಕರೆಯಲ್ಪಡುವ ಪಕ್ಷವು 2022 ರ ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ. ಬಹುಶಃ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎನ್ನಲಾಗಿದೆ. ಆದರೂ ಕೆಲವು ಮೂಲಗಳು ಇದನ್ನು ನಿರಾಕರಿಸಿವೆ.

“ಎಸ್ಕೆಎಂ (ಸಂಯುಕ್ತ ಕಿಸಾನ್ ಮೋರ್ಚಾ) ವಿವಿಧ ಗುಂಪುಗಳ ಒಕ್ಕೂಟ ಸಂಸ್ಥೆಯಾಗಿತ್ತು. ನಾವು ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಗೆದ್ದಿದ್ದೇವೆ. ನಂತರ ನಮಗೆ ನಮ್ಮ ಕಾರ್ಯಕರ್ತರಿಂದ ಮಾತ್ರವಲ್ಲದೆ ಇತರ ಸಾಮಾನ್ಯ ಪಂಜಾಬಿಗಳಿಂದ ರಾಜಕೀಯಕ್ಕೆ ಇಳಿಯಲು ಒತ್ತಡವಿತ್ತು. ಆ ಒಂದು ವರ್ಷದ ಯುದ್ಧವನ್ನು ಗೆದ್ದ ನಾವು ಚುನಾವಣೆಯಲ್ಲೂ ಗೆಲ್ಲಬಹುದು. ಆದ್ದರಿಂದ ಸಾರ್ವಜನಿಕ ಬೇಡಿಕೆಯನ್ನು ಅನುಸರಿಸಿ ನಾವು ಸಂಯುಕ್ತ ಸಮಾಜ ಮೋರ್ಚಾವನ್ನು ಪ್ರಸ್ತುತಪಡಿಸುತ್ತಿದ್ದೇವೆ ಎಂದು ಬಿಕೆಯು (ಕಡಿಯನ್) ಬಣದ ನಾಯಕ ಹರ್ಮೀತ್ ಸಿಂಗ್ ಕಡಿಯನ್ ಹೇಳಿದ್ದಾರೆ.

ಈ ಸಮಯದಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಖಡಾಖಂಡಿತವಾಗಿ ತಳ್ಳಿಹಾಕಿದ ಕೆಲವೇ ಗಂಟೆಗಳ ನಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡ 22 ರೈತ ಸಂಘಟನೆಗಳು ಚುನಾವಣಾ ರಾಜಕೀಯಕ್ಕೆ ಧುಮುಕುವ ಸುದ್ದಿ ಬಂದಿದೆ.

SKM ತನ್ನನ್ನು ತಾನು “400 ಕ್ಕೂ ಹೆಚ್ಚು ವಿಭಿನ್ನ ಸೈದ್ಧಾಂತಿಕ ಸಂಘಟನೆಗಳ ವೇದಿಕೆ” ಎಂದು ಗುರುತಿಸಿಕೊಂಡಿದೆ ಮತ್ತು ಆ ಸಂಘಟನೆಗಳ ನಡುವೆ ಒಮ್ಮತದ ಕೊರತೆಯ ಬೆಳಕಿನಲ್ಲಿ, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಂಯುಕ್ತ್ ಮೋರ್ಚಾ ಹೇಳಿದೆ.

ದೇಶಾದ್ಯಂತ ಅಸ್ತಿತ್ವ ಇರುವ ಎಸ್ಕೆಎಂ ರೈತರ ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ರಚನೆಯಾಗಿದೆ. ಚುನಾವಣೆ ಬಹಿಷ್ಕಾರದ ಕರೆಯನ್ನೂ ನಾವು ನೀಡಿಲ್ಲ ಮತ್ತು ಚುನಾವಣೆಗೆ ಸ್ಪರ್ಧಿಸುವ ಇಂಗಿತವೂ ಇಲ್ಲ ಎಂದು ಒಂಬತ್ತು ಸದಸ್ಯರ ಪ್ರಮುಖ ಸಮನ್ವಯ ಸಮಿತಿ ಹೇಳಿಕೆ ನೀಡಿದೆ.

ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಉಳಿದ ಬೇಡಿಕೆಗಳ ಕುರಿತು (ಇದು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಭರವಸೆಗಳನ್ನು ಒಳಗೊಂಡಿದೆ) ಜನವರಿ 15, 2022 ರಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುವುದು” ಎಂದು ಎಸ್ಕೆಎಂ ಹೇಳಿದೆ.

ಪಂಜಾಬ್ನಲ್ಲಿ (ಮತ್ತು ಯುಪಿ ಸೇರಿದಂತೆ ಇತರ ನಾಲ್ಕು ರಾಜ್ಯಗಳು) ಫೆಬ್ರವರಿ-ಮಾರ್ಚ್ನಲ್ಲಿ ಚುನಾವಣೆ ನಡೆಯಲಿವೆ. ಪಂಜಾಬ್ ಮತ್ತು ಯುಪಿ ಎರಡೂ ರಾಜ್ಯಗಳು ಗಮನಾರ್ಹವಾದ ರೈತ ಜನಸಂಖ್ಯೆಯನ್ನು ಹೊಂದಿವೆ. ಕಾಂಗ್ರೆಸ್ ಪಂಜಾಬ್ನಲ್ಲಿ ಮತ್ತು ಬಿಜೆಪಿ ಯುಪಿಯಲ್ಲಿ ಅಧಿಕಾರದಲ್ಲಿವೆ. ಒಟ್ಟಾರೆ ಈ ಬೆಳವಣಿಗೆ ಕುರಿತು ಕುತೂಹಲ ಹೆಚ್ಚಿದೆ.

(ದಿವಂಗತ ಪಿ ಕೆ ಮಲ್ಲನಗೌಡರ್ ಅವರ ಸ್ಟೋರಿ ಬ್ಯಾಂಕ್ ನಿಂದ)

Tags: ಚುನಾವಣೆಪಂಜಾಬ್ಪಿಕೆ ಮಲ್ಲನಗೌಡರ್ರಾಜಕೀಯರೈತ ಹೋರಾಟ
Previous Post

ಸಿಎಂ ಬದಲಾವಣೆ: ಅಮಿತ್ ಶಾ ಸಂದೇಶ ಹೊತ್ತೇ ಕೋರ್ ಕಮಿಟಿಗೆ ಬರುತ್ತಿದ್ದಾರಾ ಜೆ ಪಿ ನಡ್ಡಾ?

Next Post

ಹೋಟೆಲ್‌ ಉದ್ಯಮಕ್ಕೊಂದು ನ್ಯಾಯ, ಚಿತ್ರಮಂದಿರಕ್ಕೊಂದು ನ್ಯಾಯ: ಗೊಂದಲದಲ್ಲೇ ಬೊಮ್ಮಾಯಿ ಸರ್ಕಾರ

Related Posts

ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ
ರಾಜಕೀಯ

ಫೋನ್ ಕದ್ದಾಲಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ

by ಪ್ರತಿಧ್ವನಿ
March 3, 2026
0

ಫೋನ್ ಕದ್ದಾಲಿಕೆ ಆರೋಪದ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ...

Read moreDetails
ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

ನಾನು ಸ್ಟ್ರೀಟ್ ಫೈಟರ್, ನಾನು ಸುಮ್ಮನಿದ್ದೇನೆ ಅಂದುಕೊಂಡರೆ ಅವರಿಗೆ ಬಿಟ್ಟದ್ದು: ಡಿಸಿಎಂ ಡಿ.ಕೆ. ಶಿವಕುಮಾರ್

March 3, 2026
ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

March 3, 2026
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

ನನ್ನ ಹೆಂಡತಿ, ಮಗನಿಗೆ ತೊಂದರೆ ಕೊಡ್ತಿದ್ದಾರೆ : ಬಹಿರಂಗ ಸಭೆಯಲ್ಲೇ ಶಾಸಕ ರಾಜೇಗೌಡ ಕಣ್ಣೀರು..!

March 3, 2026
Next Post
ಹೋಟೆಲ್‌ ಉದ್ಯಮಕ್ಕೊಂದು ನ್ಯಾಯ, ಚಿತ್ರಮಂದಿರಕ್ಕೊಂದು ನ್ಯಾಯ:  ಗೊಂದಲದಲ್ಲೇ ಬೊಮ್ಮಾಯಿ ಸರ್ಕಾರ

ಹೋಟೆಲ್‌ ಉದ್ಯಮಕ್ಕೊಂದು ನ್ಯಾಯ, ಚಿತ್ರಮಂದಿರಕ್ಕೊಂದು ನ್ಯಾಯ: ಗೊಂದಲದಲ್ಲೇ ಬೊಮ್ಮಾಯಿ ಸರ್ಕಾರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada