ಜಿ 20 ಶೃಂಗಸಭೆ ಸಮಾರಂಭದಲ್ಲಿ ಭಾಗವಹಿಸಿದ್ದ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವ ಅವರು ಭಾರತದ ಆರ್ಆರ್ಆರ್ ಸಿನಿಮಾ ಮೆಚ್ಚಿಕೊಂಡು ಚಿತ್ರದ ಬಗ್ಗೆ ಮಾತನಾಡಿದ್ದಾರೆ ಎಂದು ಭಾನುವಾರ (ಸೆಪ್ಟೆಂಬರ್ 10) ವರದಿಯಾಗಿದೆ.
ಭಾರತದ ಬಗ್ಗೆ ಯಾರೇ ಮಾತನಾಡಿದರೂ ಆರ್ಆರ್ಆರ್ ಬಗ್ಗೆ ಕೇಳುತ್ತಾರೆ. ನನ್ನನ್ನು ಮೋಡಿ ಮಾಡಿರುವ ಈ ಚಿತ್ರದ ನಿರ್ದೇಶಕರು ಮತ್ತು ಕಲಾವಿದರನ್ನು ಅಭಿನಂದಿಸುತ್ತೇನೆ ಎಂದು ಲೂಯಿಸ್ ಇನಾಸಿಯೊ ಹೇಳಿದ್ದಾರೆ.
ಆರ್ಆರ್ಆರ್ ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ನಿರ್ದೇಶಕ ರಾಜಮೌಳಿ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಆರ್ಆರ್ಆರ್ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ಆದಾಯಗಳಿಸಿದೆ.












