
ಬಾಯ್ ಫ್ರೆಂಡ್ ಕುತ್ತಿಗೆಗೆ ಚಾಕು ಇಟ್ಟು ಯುವತಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹತ್ತು ವರ್ಷಗಳ ಬಳಿಕ ಐದು ಮಂದಿ ಆರೋಪಿಗಳಿಗೆ ಶಿಕ್ಷೆ ಪ್ರಕಟಗೊಂಡಿದೆ. 57ನೇ ಸಿಸಿಹೆಚ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.

2014ರ ಏಪ್ರಿಲ್ 11 ರಂದು ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ನಡೆದಿತ್ತು. ಎ1 ಆಗಿದ್ದ ಶೇಕ್ ಹೈದರ್‌ಗೆ 14 ವರ್ಷ ಕಠಿಣ ಶಿಕ್ಷೆ 31 ಸಾವಿರ ದಂಡ.. ಎ2 ಸೈಯದ್ ಶಫಿಕ್‌ಗೆ 10 ವರ್ಷ ಸಜೆ, 23 ಸಾವಿರ ದಂಡ.. ಎ3 ಮೊಹಮ್ಮದ್ ಹಫೀಜ್‌ಗೆ ಒಂದು ವರ್ಷ ಸಜೆ, 3.500 ದಂಡ, ಎ4 ಶೋಯಬ್‌ಗೆ 1 ವರ್ಷ ಸಜೆ 3.500 ದಂಡ, ಎ5 ಮಹಮ್ಮದ್ ಇಸಾಕ್‌ಗೆ 6 ತಿಂಗಳ ಸಜೆ 3000 ದಂಡ ವಿಧಿಸಲಾಗಿದೆ.
ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಪ್ರೇಮಿಗಳು ಕುಳಿತಿದ್ದಾಗ ಘಟನೆ ನಡೆದಿತ್ತು. ಎಂ.ಜಿ ರೋಡ್‌ನಲ್ಲಿ ಡಿನ್ನರ್ ಮುಗಿಸಿ, ಮಧ್ಯರಾತ್ರಿ 12.30ರ ಸಮಯಲ್ಲಿ ಕಾರಿನಲ್ಲಿ ಕುಳಿತಿದ್ರು. ಈ ವೇಳೆ ಎಂಟ್ರಿಯಾಗಿದ್ದ ಪ್ರಿಯಕರನಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದರು.
ಅತ್ಯಾಚಾರದ ಬಳಿಕ ಐವತ್ತು ಸಾವಿರಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳು, ಯುವಕನ ಬಳಿ ವಾಚ್ ಕಿತ್ತುಕೊಂಡು ಪರಾರಿ ಆಗಿದ್ದರು. ಘಟನೆ ಸಂಬಂಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.. ಐವರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆ ಮಾಡಿದ್ದರು.