• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಾಲಕನ ತುಟಿಗೆ ಚುಂಬಿಸಿದ ದಲಾಯಿ ಲಾಮಾ

ಪ್ರತಿಧ್ವನಿ by ಪ್ರತಿಧ್ವನಿ
July 9, 2024
in Top Story, ದೇಶ, ರಾಜಕೀಯ, ವಿಶೇಷ, ಶೋಧ
0
ಬಾಲಕನ ತುಟಿಗೆ ಚುಂಬಿಸಿದ ದಲಾಯಿ ಲಾಮಾ
Share on WhatsAppShare on FacebookShare on Telegram

ಪೋಕ್ಸೋ ದಾಖಲಿಸುವ ಅರ್ಜಿ ವಜಾ
ನವದೆಹಲಿ ;ತನ್ನ ಆಶೀರ್ವಾದ ಪಡೆಯಲು ಬಂದಿದ್ದ ಬಾಲಕನ ತುಟಿ ಚುಂಬಿಸಿದ್ದಕ್ಕಾಗಿ ಬೌದ್ಧ ಗುರು ದಲೈ ಲಾಮಾ ಅವರ ವಿರುದ್ಧ ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಅಡಿ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ

ADVERTISEMENT

ಸರ್ಕಾರೇತರ ಸಂಸ್ಥೆಗಳ ಗುಂಪೊಂದು ಸಲ್ಲಿಸಿದ್ದ ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ತಿರಸ್ಕರಿಸಿತು.
“ಘಟನೆಯ ಬಗ್ಗೆ ದಲೈ ಲಾಮಾ ಕ್ಷಮೆಯಾಚಿಸಿದ್ದಾರೆ. ಅದೊಂದು ತಮಾಷೆಯ ಘಟನೆಯಾಗಿತ್ತು ಎಂದು ಅವರು ಹೇಳಿದ್ದಾರೆ. ಇದನ್ನು ಟಿಬೆಟ್ಟಿನ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಬೇಕು” ಎಂದು ನ್ಯಾಯಾಲಯ ಹೇಳಿದೆ.

Dharamshala, May 24 (ANI): Tibetan spiritual leader Dalai Lama arrives to attend a Long Life Prayer offered to him by the Foundation for the Preservation of the Mahayana Tradition (FPMT) at the Main Tibetan Temple, in Dharamshala on Wednesday. (ANI Photo)

ಸಮಾರಂಭವೊಂದರಲ್ಲಿ ಲಾಮಾರನ್ನು ಕಂಡು ಗೌರವಿಸಲು ಬಂದಿದ್ದ ಬಾಲಕನ ತುಟಿಗಳಿಗೆ ದಲೈ ಲಾಮಾ ಚುಂಬಿಸಿದ್ದರು. ನಂತರ ಲಾಮಾ ಅವರು ಮಗುವಿಗೆ ತನ್ನ ತುಟಿಗಳನ್ನು ಸವಿಯಲು ಹೇಳಿದ್ದ ವಿಡಿಯೋ ಚರ್ಚೆಗೆ ಗ್ರಾಸವಾಗಿತ್ತು. ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಹಿನ್ನೆಲೆಯಲ್ಲಿ ದಲೈಲಾಮ ಕ್ಷಮೆಯಾಚಿಸಿದ್ದರು. ಘಟನೆ ಒಂದೂವರೆ ವರ್ಷಕ್ಕಿಂತ ಹಳೆಯದಾಗಿದ್ದು, ಘಟನೆ ಸಾರ್ವಜನಿಕವಾಗಿ ನಡೆದಿರುವಂತದ್ದಾಗಿದೆ. ಮಗುವೇ ದಲೈ ಲಾಮಾ ಅವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿ ಸಭೆಗೆ ಆಗಮಿಸಿತ್ತು ಎಂದು ಹೈಕೋರ್ಟ್‌ ವಿವರಿಸಿದೆ.
ವಿಡಿಯೋವನ್ನು ಒಟ್ಟಾರೆ ದೃಷ್ಟಿಕೋನದಿಂದ ನೋಡಿದರೆ ದಲೈ ಲಾಮಾ ಮಗುವನ್ನು ತಮಾಷೆ ಮಾಡಲು ಯತ್ನಿಸಿದ್ದಾರೆ ಎನ್ನಬಹುದು. ಇದನ್ನು ಟಿಬೆಟ್‌ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡಬೇಕು. ಲಾಮಾ ಅವರು ವಿದೇಶಿ ಶಕ್ತಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರದ ಧಾರ್ಮಿಕ ಪಂಗಡದ ಮುಖ್ಯಸ್ಥರಾಗಿದ್ದಾರೆ ಎಂಬುದನ್ನು ಸಹ ಈ ನ್ಯಾಯಾಲಯ ಪರಿಗಣಿಸುತ್ತಿದೆ. ತಮ್ಮ ಕೃತ್ಯದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ದಲೈ ಲಾಮ ಈಗಾಗಲೇ ತಿಳಿಸಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.

Dharamshala, May 24 (ANI): Tibetan spiritual leader Dalai Lama arrives to attend a Long Life Prayer offered to him by the Foundation for the Preservation of the Mahayana Tradition (FPMT) at the Main Tibetan Temple, in Dharamshala on Wednesday. (ANI Photo)


ಈ ವಿಡಿಯೋವನ್ನು ಹಲವು ಮಾಧ್ಯಮ ಸಂಸ್ಥೆಗಳು ಪ್ರಕಟಿಸಿದ್ದು, ಮಗುವಿನ ಗುರುತನ್ನಾದರೂ ಮಸುಕು ಮಾಡುವಂತೆ ಆದೇಶ ಹೊರಡಿಸಬೇಕು. ಅಲ್ಲದೆ ಅಧಿಕಾರಿಗಳೇ ಮಧ್ಯಪ್ರವೇಶಿಸಿ ಇಡೀ ಘಟನೆ ಬಗ್ಗೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರಿದರು.
“ಗುರುಗಳಾದ ದಲೈ ಲಾಮಾ ಅವರನ್ನು ನಾನು ಇಲ್ಲಿ ವಿಚಕ್ಷಣೆಗೆ ಒಳಪಡಿಸುತ್ತಿಲ್ಲ ಆದರೆ ಅಧಿಕಾರಿಗಳೇ ಮಧ್ಯಪ್ರವೇಶಿಸಿ ಇಡೀ ಘಟನೆ ಬಗ್ಗೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು… ಈ ಘಟನೆ ಮಗುವಿನ ತುಟಿಗೆ ಚುಂಬಿಸುವುದನ್ನು ಸಾಮಾನ್ಯಗೊಳಿಸುತ್ತದೆ. ಇಂತಹ ಕೃತ್ಯದಲ್ಲಿ ಭಾಗವಹಿಸುವಂತೆ ಒತ್ತಾಯಿಸುವ ಅನೇಕ ಬಾಬಾಗಳು ಗುರುಗಳು ಇದ್ದಾರೆ” ಎಂದು ವಿವರಿಸಿದರು. ಆದರೆ ಪಿಐಎಲ್‌ನಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ ಎಂದು ನ್ಯಾಯಾಲಯ ಹೇಳಿತು.
“ಜನರನ್ನು ಥಳಿಸುವ ಮತ್ತು ಒದೆಯುವ ಅನೇಕ ಬಾಬಾಗಳು ಇದ್ದಾರೆ. ನಾವು ಏನು ಮಾಡುವುದು? ಜನರು ಅದಕ್ಕೆ ಹೊಂದಿಕೊಂಡಿದ್ದಾರೆ… ಮುಂದೊಮ್ಮೆ ಯಾರಾದರೂ ಬಂದು ತಮಗೆ ಹಸ್ತಲಾಘವ ನೀಡಿದ್ದು ಕೆಟ್ಟ ಅಭಿರುಚಿಯಿಂದ ಕೂಡಿತ್ತು ಎಂದು ದೂರಲೂಬಹುದು” ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹೇಳಿದರು. ವಿಡಿಯೋದಿಂದಾಗಿ ಮಗುವಿನ ಪಾಲಕರಿಗೆ ನೋವುಂಟಾಗಿದ್ದರೆ ಅವರು ಕ್ರಮಕ್ಕೆ ಮುಂದಾಗಬೇಕು ಎಂದು ನ್ಯಾಯಾಲಯ ನುಡಿಯಿತು.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿ
Previous Post

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆ, ಅಧಿಕೃತ ಘೋಷಣೆ!

Next Post

ಜೈಲಲ್ಲಿರುವ ದರ್ಶನ್‌ಗೆ ಸ್ಪೆಷಲ್ ಆತಿಥ್ಯ ಸಿಗ್ತಿದೆ ಅಂತೆ ಸರ್?

Related Posts

2027 ರವರೆಗೆ 99% ಉದ್ಯೋಗಗಳು ಕಣ್ಮರೆಯಾಗಬಹುದು, ಈ 5 ಉದ್ಯೋಗಗಳು ಮಾತ್ರ ಉಳಿಯಬಹುದು: AI ತಜ್ಞ
Top Story

2027 ರವರೆಗೆ 99% ಉದ್ಯೋಗಗಳು ಕಣ್ಮರೆಯಾಗಬಹುದು, ಈ 5 ಉದ್ಯೋಗಗಳು ಮಾತ್ರ ಉಳಿಯಬಹುದು: AI ತಜ್ಞ

by ಪ್ರತಿಧ್ವನಿ
February 11, 2026
0

ಬುದ್ಧಿಮತ್ತೆ (AI) ಕ್ಷೇತ್ರದ ಪ್ರಮುಖ ತಜ್ಞರು ಜಾಗತಿಕ ಗಮನ ಸೆಳೆಯುತ್ತಿರುವ ಸಮಸ್ಯೆ ಕುರಿತು ಎಚ್ಚರಿಕೆಯನ್ನು ನೀಡಿದ್ದಾರೆ.ಲಾಟ್ವಿಯನ್ ಮೂಲದ ಕಂಪ್ಯೂಟರ್ ವಿಜ್ಞಾನಿ ಮತ್ತು ಲೂಯಿಸ್‌ವಿಲ್ಲೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ....

Read moreDetails
ಬೆಂಗಳೂರಿಗಾಗಿ ಕೆಂಪೇಗೌಡರ ಸೊಸೆ‌ ಲಕ್ಷ್ಮಿದೇವಿ ಮಾಡಿದ ಆತ್ಮತ್ಯಾಗ ಇದು!

ಬೆಂಗಳೂರಿಗಾಗಿ ಕೆಂಪೇಗೌಡರ ಸೊಸೆ‌ ಲಕ್ಷ್ಮಿದೇವಿ ಮಾಡಿದ ಆತ್ಮತ್ಯಾಗ ಇದು!

February 11, 2026
ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

February 10, 2026
ಪಂಜಾಬ್ ನ ಕಾನೂನು ಕಾಲೇಜಿನಲ್ಲಿ ಭಯಂಕರ ದುರ್ಘಟನೆ

ಪಂಜಾಬ್ ನ ಕಾನೂನು ಕಾಲೇಜಿನಲ್ಲಿ ಭಯಂಕರ ದುರ್ಘಟನೆ

February 10, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
Next Post

ಜೈಲಲ್ಲಿರುವ ದರ್ಶನ್‌ಗೆ ಸ್ಪೆಷಲ್ ಆತಿಥ್ಯ ಸಿಗ್ತಿದೆ ಅಂತೆ ಸರ್?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada