ಬೆಂಗಳೂರಿನಲ್ಲಿ (Bengaluru) ಇಂದಿನಿಂದ ಐಪಿಎಲ್ (IPL) ಹಂಗಾಮ ಶುರುವಾಗಿದೆ. ಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (chinnaswamy stadium) ಐಪಿಎಲ್ ಪಂದ್ಯಾವಳಿ ಆರಂಭವಾಗ್ತಿದೆ. ರಾಯಲ್ ಚಾಲೆಂಜರ್ಸ್ (Royal challengers) ಮತ್ತು ಪಂಜಾಬ್ ಕಿಂಗ್ಸ್ ಇಲೆವೆನ್ (Punjab kings) ಮುಖಾ-ಮುಖಿಯಾಗಲಿವೆ. ಈ ಹಿನ್ನಲೆ ಬೆಂಗಳೂರಿನ ಐಪಿಎಲ್ ಫೀವರ್ ಇನ್ನಷ್ಟು ಹೆಚ್ಚಾಗಲಿದೆ. ಆದ್ರೆ ಜೊತೆ ಜೊತೆಗೆ ಭದ್ರತೆಯ ಚಿಂತೆಯೂ ಪೋಲಿಸರಿಗೆ (Police) ಸವಾಲಾಗಿದೆ.

ಹೀಗಾಗಿ ಐಪಿಎಲ್ ಪಂದ್ಯಗಳಿಗೆ ಭದ್ರತೆಯ ಜವಾಬ್ದಾರಿ ಹೊತ್ತಿರುವ ಬೆಂಗಳೂರು ಪೋಲಿಸರು ಹೈ ಅಲರ್ಟ್ (High alert) ಆಗಿದ್ದಾರೆ. ಅದಕ್ಕೆ ಕಾರಣವಾಗಿರೋದು ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram cate) ನಡೆದ ಬಾಂಬ್ ಬ್ಲಾಸ್ಟ್, ಹೀಗಾಗಿ ಕಳೆದ ಒಂದು ವಾರದಿಂದ ಸ್ಟೇಡಿಯಂ ಪೋಲಿಸರು ಇಂಚಿಂಚೂ ತಪಾಸಣೆ ನಡೆಸಿದ್ದಾರೆ. ಬಂದೋಬಸ್ತ್ ಗಾಗಿ ಒಂದು ಸಾವಿರ ಪೊಲೀಸರ ನಿಯೋಜನೆ ಕೂಡ ಮಾಡಲಾಗಿದೆ.

ಪಂದ್ಯ ವೀಕ್ಷಿಸಲು ಬರುವ ಪ್ರತೀ ಸಾರ್ವಜನಿಕರ ತಪಾಸಣೆಗಾಗಿ 300 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಸ್ಟೇಡಿಯಂಗೆ ಬರುವ ಪ್ರತಿಯೊಬ್ಬರನ್ನ ತಪಾಸಣೆ ನಡೆಸಿಯೇ ಒಳ ಬಿಡಲಾಗುತ್ತದೆ. ಅಗತ್ಯ ಬಿದ್ದಲ್ಲಿ ಡೋಣ್ (drone) ಮೂಲಕವೂ ಕಣ್ಣಾವಲು ಇರಿಸೋದಕ್ಕೂ ಪೋಲಿಸ್ ಇಲಾಖೆ ಚಿಂತನೆ ನಡೆಸಿದೆ. ಈಗಾಗಲೇ ಸ್ಟೇಡಿಯಂನ ನಾಲ್ಕು ಕಡೆ ವಾಚ್ ಟವರ್ (watch towers) ನಿರ್ಮಾಣ ಮಾಡಲಾಗಿದ್ದು ಹೈವೋಲ್ವೇಜ್ ಪಂದ್ಯಕ್ಕೆ ಪೋಲಿಸರು ಕೂಡ ಹೈ ಅಲರ್ಟ್ ಆಗಿದ್ದಾರೆ. ಕೊನೆದಾಗಿ ಆಲ್ ದಿ ಬೆಸ್ಟ್ ಆರ್.ಸಿ.ಬಿ. (Rcb)











