ಮಿಸ್ಟರ್ ಆಂಡ್ ಮಿಸಸ್ ಮಹಿ (Mr & mrs mahi) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಜಾಹ್ನವಿ ಕಪೂರ್ (Jhanavi kapoor) ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪಾಪರಾಜಿಗಳ ನಿಜಬಣ್ಣ ನಿಜ ಮುಖ ಬಯಲು ಮಾಡಿದ್ದಾರೆ.

ನಟ-ನಟಿಯರು ಎಲ್ಲಿ ಹೋದರೂ ಬೆನ್ನತ್ತಿ ಚಿತ್ರಗಳನ್ನು ತೆಗೆಯುವ ಪಾಪರಾಜಿಗಳು ಬಾಲಿವುಡ್ (Bollywood) ಭಾಗವಾಗಿಬಿಟ್ಟಿದ್ದಾರೆ. ಆ್ಯಕ್ಚರ್ಸ್ ಏರ್‌ಪೋರ್ಟ್‌ಗೆ (Airport) ಹೋಗಲಿ, ಜಿಮ್‌ಗೆ (Gym) ಹೋಗಲಿ, ಪಾರ್ಟಿಗಳಿಗೆ ಹೋಗಲಿ, ಎಲ್ಲೇ ಹೋದರು ಬೆನ್ನು ಹತ್ತಿ ಚಿತ್ರಗಳನ್ನು ತೆಗೆಯುತ್ತಾರೆ.

ಗಮನಿಸಬೇಕಾದ ವಿಷಯವೆಂದರೆ ನಟ-ನಟಿಯರು ಎಲ್ಲಿ ಹೋಗುತ್ತಿದ್ದಾರೆಂಬುದು ಇವರಿಗೆ ಹೇಗೆ ಗೊತ್ತಾಗುತ್ತದೆ? ಮತ್ತು ಚಿತ್ರಗಳನ್ನು ತೆಗೆಯುವುದರಿಂದ ಇವರಿಗೆ ಏನು ಲಾಭ? ಅಂತಾ ಜಾಹ್ನವಿ ಕಪೂರ್ ಪ್ರಶ್ನಿಸಿದ್ದಾರೆ. ಅಸಲಿಗೆ ಪಾಪರಾಜಿಗಳನ್ನ ಹಣ ಕೊಟ್ಟು ಕರೆಸಲಾಗುತ್ತೆ ಅಂತ ನಟಿ ಹೇಳಿದ್ದಾರೆ.