
ಲಾ ಪಾಜ್, ; ಬೊಲೊವಿಯಾದಲ್ಲಿ ಸೇನಾಧಿಕಾರಿಗಳ ದಂಗೆ ಯತ್ನವನ್ನು ಸರ್ಕಾರವು ವಿಫಲಗೊಳಿಸಿದೆ.. ದಂಗೆಯ ಪ್ರಯತ್ನದ ಗಂಟೆಗಳ ನಂತರ ಬುಧವಾರ ಸಂಜೆ ಲಾ ಪಾಜ್‌ನಲ್ಲಿರುವ ಅಧ್ಯಕ್ಷೀಯ ಅರಮನೆಯಿಂದ ಬೊಲಿವಿಯನ್ ಸಶಸ್ತ್ರ ಪಡೆಗಳ ಶಸ್ತ್ರಸಜ್ಜಿತ ವಾಹನಗಳು ಮತ್ತು ಪಡೆಗಳು ಹಿಂದೆ ಸರಿದವು.
ವಿಫಲ ದಂಗೆಯ ಯತ್ನದ ನೇತೃತ್ವ ವಹಿಸಿದ್ದ ಬಂಡುಕೋರ ಮಿಲಿಟರಿ ಕಮಾಂಡರ್ ಜನರಲ್ ಜುವಾನ್ ಜೋಸ್ ಝುನಿಗಾ ಅವರನ್ನು ಬೊಲಿವಿಯನ್ ಪೊಲೀಸರು ಬಂಧಿಸಿದರು. ಬೊಲಿವಿಯನ್ ಅಧ್ಯಕ್ಷ ಲೂಯಿಸ್ ಆರ್ಸ್ ದಂಗೆಯ ಪ್ರಯತ್ನವನ್ನು ಖಂಡಿಸಿದ್ದು ,ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾಗರಿಕರಿಗೆ ಕರೆ ನೀಡಿದರು. ದಂಗೆಯ ನಂತರ ಅವರು ಸೈನ್ಯಕ್ಕೆ ಹೊಸ ಸೇನಾ ಕಮಾಂಡರ್ ಅನ್ನು ನೇಮಕ ಮಾಡಿದ್ದಾರೆ.

ದಂಗೆಗೂ ಮೊದಲು ಸೈನಿಕರು ಜನರಲ್ ಝುನಿಗಾ ನೇತೃತ್ವದಲ್ಲಿ ಸರ್ಕಾರದ ಕೇಂದ್ರ ಸ್ಥಾನದ ಹೊರಗಿನ ಚೌಕವಾದ ಪ್ಲಾಜಾ ಮುರಿಲ್ಲೊ ತನಕ ಮೆರವಣಿಗೆ ನಡೆಸಿದರು ಹಳೆಯ ಸರ್ಕಾರಿ ಪ್ರಧಾನ ಕಛೇರಿಯಾದ ಪಲಾಸಿಯೊ ಕ್ವೆಮಾಡೊಗೆ ತೆರಳಲು ಪ್ರಯತ್ನ ನಡೆಸಿದರು. ಆದರೆ ಸೈನಿಕ ದಂಗೆ ವಿರೋಧಿಸಿ ಸಾವಿರಾರು ನಾಗರಿಕರು ಬೀದಿಗಿಳಿದು ಪ್ರತಿಭಟಿಸಿದರು. ದೇಶದ ವಿವಿಧ ಭಾಗಗಳಲ್ಲಿ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಭಾರೀ ಪ್ರತಿಭಟನೆ ನಡೆಸಿದರು. ಸಾಂವಿಧಾನಿಕ ವ್ಯವಸ್ಥೆ ರಕ್ಷಿಸಲು ಅಧ್ಯಕ್ಷರು ನೀಡಿದ ಕರೆಯ ಮೇರೆಗೆ ಗೆ ನಾಗರಿಕರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು.
