ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಬಿಡುಗಡೆ ಹೊಸ್ತಿಲಲ್ಲಿ ನಿಂತಿರುವ ಸ್ಪೂಕಿ ಕಾಲೇಜ್ ನಂತಹ ಚಿತ್ರಗಳನ್ನ ನಿರ್ಮಿಸಿರುವ ಶ್ರೀದೇವಿ ಎಂಟರ್‌ಟೈನ್‌ಮೆಂಟ್ಸ್ ದೀಪಾವಳಿ ಪ್ರಯುಕ್ತ ಹೊಸ ಚಿತ್ರವೊಂದನ್ನು ಘೋಷಿಸಿದೆ.
ನಟ ಕೃಷ್ಣ ಅಜಯ್ ರಾವ್ ನಟನೆಯ ಮುಂದಿನ ಚಿತ್ರ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಚಿತ್ರಕ್ಕೆ ಹೆಚ್.ಕೆ.ಪ್ರಕಾಶ್ ಬಂಡವಾಳ ಹೂಡಲು ಮುಂದಾಗುತ್ತಿದ್ದಾರೆ.
ನವ ನಿರ್ದೇಶಕ ಅಭಿಷೇಕ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಕಥೆ ಕೇಳಿ ಥ್ರಿಲ್ ಆಗಿರುವ ಅಜಯ್ ರಾವ್ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇನ್ನಿ ನಿರ್ದೇಶಕ ಸಿಂಪಲ್ ಸುನಿ ಬಳಿ ಅಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಅಭಿಷೇಕ್ ತಮ್ಮದೇ ಆದ VFX ಸ್ಟುಡಿಯೋವನ್ನು ಹೊಂದಿದ್ದಾರೆ.

ಬ್ಯಾಂಕ್ ವೊಂದನ್ನು ದರೋಡೆ ಮಾಡಲು ಹೊರಟವರ ಸುತ್ತ ಹೆಣೆಯಲಾದ ಇಂಟ್ರಸ್ಟಿಂಗ್ ಕಥಾಹಂದರ ಈ ಚಿತ್ರ ಒಳಗೊಂಡಿದೆ. ಇದಿಷ್ಟನ್ನೇ ರಿವೀಲ್ ಮಾಡಿರುವ ಸಿನಿಮಾ ತಂಡ ಮುಂಬರುವ ದಿನಗಳಲ್ಲಿ ಚಿತ್ರದ ಬಗ್ಗೆ, ನಾಯಕಿ ಮತ್ತು ಕಲಾವಿದರ ಬಳಗ ಇದೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ.
ಸದ್ಯ ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ನಿರ್ದೇಶನ, ತೇಜಸ್ ಆರ್ ಸಂಕಲನ, ರಾಘು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
