ರಾಜ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿರುವ (Uttara kannada district) ಮುರ್ಡೇಶ್ವರನ ಸನ್ನಿಧಾನ (Murudeshwara temple) ವಿಶ್ವ ಪ್ರಸಿದ್ಧ ಪ್ರವಾಸಿ ತಾಣವೂ ಕೂಡ ಹೌದು. ಹೀಗಾಗಿ ದೇಶ ಹಾಗೂ ವಿದೇಶದಿಂದ ಕೂಡ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಮುರ್ಡೇಶ್ವರಕ್ಕೆ ಪ್ರತಿ ವರ್ಷ ಆಗಮಿಸುತ್ತಾರೆ.
ಹೀಗಾಗಿ ಪ್ರವಾಸಿಗರನ್ನ ಇನ್ನು ಹೆಚ್ಚಾಗಿ ಆಕರ್ಷಿಸುವ ನಿಟ್ಟಿನಲ್ಲಿ ಮುರ್ಡೇಶ್ವರದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಹೌಸ್ ಬೋಟ್ಗಳ (Boat house) ನಿಲುಗಡೆಗೆ ಸುಮಾರು 350 ಕೋಟಿ ವೆಚ್ಚದ ಬಂದರು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.
ಇತರೆ ರಾಜ್ಯಗಳ ಬೀಚ್ಗಳಲ್ಲಿ ಈ ಬೋಟ್ ಹಸ್ಗಳ ಸೌಲಭೈದ್ದು, ಪ್ರವಾಸಿಗರು ಈ ಅನುಭವನ್ನು ಬಹಳ ಇಷ್ಟ ಪಡ್ತಾರೆ. ಹೀಗಾಗಿ ಮುರುಡೇಶ್ವರದಲ್ಲಿ ಪ್ರವಾಸೋದ್ಯಮ (Tourism) ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಈ ಯೋಜನೆ ಕೈಗೊಳ್ಳಲಾಗಿದೆ ಎಂದು ಈ ಬಗ್ಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.