• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಡಿಪೋದಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿರುವ BMTC ಬಸ್‌ಗಳು : ಇದರ ನಿರ್ವಹಣ ವೆಚ್ಚವೇ 10 ಕೋಟಿ!

ಕರ್ಣ by ಕರ್ಣ
January 25, 2022
in ಕರ್ನಾಟಕ
0
ಡಿಪೋದಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿರುವ BMTC ಬಸ್‌ಗಳು : ಇದರ ನಿರ್ವಹಣ ವೆಚ್ಚವೇ 10 ಕೋಟಿ!
Share on WhatsAppShare on FacebookShare on Telegram

BMTC ಸಿಲಿಕಾನ್‌ ಸಿಟಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಜೀವಾಳ. ಒಂದು ಹಂತಕ್ಕೆ ಬಿಎಂಟಿಸಿಯೇ ಎಲ್ಲಾ ವರ್ಗದ ಜನರ ಓಡಾಟಕ್ಕಿರುವ ಮುಖ್ಯ ಮಾರ್ಗ. ಜನರಿಗೆ ಸುರಕ್ಷಿತವಾದ, ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವುದೇ ಬಿಎಂಟಿಸಿಯ ಮುಖ್ಯ ಗುರಿ. ಅಂಥ ಬಿಎಂಟಿಸಿಯ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡೋಕು ಆಗದ ದುಸ್ಥಿತಿಯಲ್ಲಿದೆ. ಹೀಗಿದ್ದರೂ ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಮಾತಿನಂತೆ ಸುಖಾಸುಮ್ಮನೇ ಕೋಟಿ ಕೋಟಿ ಖರ್ಚು ಮಾಡಿ, ಜನರ ಹಣವನ್ನು ದುಂದು ವೆಚ್ಚ ಮಾಡುತ್ತಿದೆ.

ADVERTISEMENT

ಈಗಾಗಲೇ ಬಿಎಂಟಿಸಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಬಸ್‌ಗಳಿವೆ. ಈ ಪೈಕಿ ಪ್ರತಿ ದಿನ 2500 ಬಸ್‌ಗಳು ಮಾತ್ರ ಪ್ರತಿದಿನ ಕಾರ್ಯಾಚರಣೆ ಮಾಡುತ್ತಿದೆ. ಉಳಿದಂತೆ ಗುತ್ತಿಗೆ ಆದಾರದ ಮೇಲೆ ಸೇವೆ ನೀಡುತ್ತಿದೆ. ಈ ಪೈಕಿ ವೋಲ್ವೋ ಬಸ್‌ಗಳಿವೆ. ಬಿಎಂಟಿಸಿ ಪಾಲಿಗೆ ವೋಲ್ವೋ ಬಸ್‌ಗಳನ್ನು ಬಿಳಿ ಆನೆ ಸಾಕಿದಂತೆ. ರಸ್ತೆಗೆ ಇಳಿದರೂ, ಸುಮ್ಮನೆ ಡಿಪೋದಲ್ಲಿ ನಿಂತರೂ ಅದರ ನಿರ್ವಹಣಾ ವೆಚ್ಚವನ್ನು ಸಂಸ್ಥೆ ನೋಡಿಕೊಳ್ಳಲೇ ಬೇಕು. ಈಗ ಬಿಎಂಟಿಸಿ ವೋಲ್ವೋ ಬಸ್‌ಗಳಿಗೆ ಸುಖಾಸುಮ್ಮನೆ ಕೋಟಿ ಕೋಟಿ ರೂಪಾಯಿ ನಿರ್ವಹಣಾ ವೆಚ್ಚ ಮಾಡಿ ಹಣವನ್ನು ಪೋಲು ಮಾಡುತ್ತಿದೆ.

ಅತ್ತ ಸಿಬ್ಬಂಗೆ ಸಂಬಳ ನೀಡಲು ಹಣವಿಲ್ಲ ಎಂದು ಅಳುವ ಬಿಎಂಟಿಸಿ ಅಧಿಕಾರಿಗಳು ವೋಲ್ವೋ ಬಸ್‌ಗಳನ್ನು ಸುಖಾಸುಮ್ಮನೆ 10 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ವಹಣೆ ಮಾಡುತ್ತಿದೆ. ಒಟ್ಟು ಬಿಎಂಟಿಸಿ ಬಳಿ ಸದ್ಯ 800 ವೋಲ್ವೋ ಬಸ್‌ಗಳಿವೆ. ಆದರೆ ಈ ಪೈಕಿ 230 ಬಸ್‌ಗಳು ಮಾತ್ರ ಪ್ರತಿ ದಿನ ರಸ್ತೆಗಳಿಯುತ್ತಿದೆ. ಉಳಿದಂತೆ 570 ಬಸ್‌ಗಳು ಡಿಪೋದಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ. ಹೀಗಿದ್ದರೂ ಈ 570 ವೋಲ್ವೋ ಬಸ್‌ಗಳಿಗೆ ಪ್ರತಿ ವರ್ಷ 10 ಕೋಟಿ ವೆಚ್ಚ ಮಾಡಿ ನಿರ್ವಹಣೆಯನ್ನು ಮಾಡುತ್ತಿದೆ.

ಈ ಬಗ್ಗೆ ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ ಬಿಎಂಟಿಸಿಯ ಉಪಾಧ್ಯಕ್ಷ ಡಾ. ಎಂ ಆರ್‌ ವೆಂಕಟೇಶ್‌, ಅನಿವಾರ್ಯಾಗಿ ನಿಂತ ಬಸ್‌ಗಳಿಗೂ ಸಂಸ್ಥೆ ಕೋಟಿ ವೆಚ್ಚದಲ್ಲಿ ನಿರ್ವಹಣೆ ಮಾಡುವಂತಾಗಿದೆ. ಸಾರ್ವಜನಿಕರು ವೋಲ್ವೋ ಬಸ್‌ಗಳನ್ನು ಬಳಸುವುದೇ ಕಡಿಮೆ. ಹೀಗಾಗಿ ರಸ್ತೆಗೆ ಇಳಿಸಿ ಮಾಡುವುದಾರು ಏನು? ಎಂದರು.

ಇನ್ನು ಸದ್ಯ ಸಂಚರಿಸುವ 230 ಬಸ್ ಗಳಿಂದ ಒಂದು ವಾರದಲ್ಲಿ 97,78,664 ರೂ. BMTC ಗೆ ಆದಾಯ ಬರುತ್ತಿದೆ. ಎಂದರೆ ಒಂದು ತಿಂಗಳಿಗೆ ಹೆಚ್ಚು ಕಮ್ಮಿ 40 ಲಕ್ಷ ರೂಪಾಯಿ ಆದಾಯ ಸದ್ಯ ರಸ್ತೆಯಲ್ಲಿರುವ ವೋಲ್ವೋ ಬಸ್‌ಗಳಿಂದ ಆದಾಯ ಸಂಸ್ಥೆಯ ಬೊಕ್ಕಸಕ್ಕೆ ಬರುತ್ತಿದೆ. ಇದರ ಬಹುಪಾಲ ಹಣ ಡಿಪೋದಲ್ಲೇ ನಿಂತು ತುಕ್ಕು ಹಿಡಿಯುತ್ತಿರುವ ಬಸ್‌ಗಳ ನಿರ್ವಹಣೆಗೆಂದೇ ಖರ್ಚಾಗುತ್ತಿರುವು ವಿಪರ್ಯಾಸ.

Tags: BJPBMTCCongress PartyCovid 19KSRTCSriramuluಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಉಸ್ತುವಾರಿ ನೇಮಕದ ಬೆನ್ನಲ್ಲೇ ಜೋರಾಯ್ತು ಸಂಪುಟ ಪುನರ್ ರಚನೆಯ ಕೂಗು!

Next Post

ಡಾ. ಸ್ಮರಾಜಿತ್ ಜನಾ : 65000 ಕ್ಕಿಂತಲೂ ಹೆಚ್ಚು ಲೈಂಗಿಕ ಕಾರ್ಯಕರ್ತರ ಬದುಕಿನಲ್ಲಿ ಭರವಸೆ ಮೂಡಿಸಿದ ವೈದ್ಯ

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
ಡಾ. ಸ್ಮರಾಜಿತ್ ಜನಾ : 65000 ಕ್ಕಿಂತಲೂ ಹೆಚ್ಚು ಲೈಂಗಿಕ ಕಾರ್ಯಕರ್ತರ ಬದುಕಿನಲ್ಲಿ ಭರವಸೆ ಮೂಡಿಸಿದ ವೈದ್ಯ

ಡಾ. ಸ್ಮರಾಜಿತ್ ಜನಾ : 65000 ಕ್ಕಿಂತಲೂ ಹೆಚ್ಚು ಲೈಂಗಿಕ ಕಾರ್ಯಕರ್ತರ ಬದುಕಿನಲ್ಲಿ ಭರವಸೆ ಮೂಡಿಸಿದ ವೈದ್ಯ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada