
ಪತ್ರಕರ್ತನ ಮಗಳು.. ಈ ಅರ್ಪಣಾ.. ವಯಸ್ಸು ಇನ್ನು 58 ತುಂಬಿರಲಿಲ್ಲ. ಅಷ್ಟರಲ್ಲಾಗಲೇ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ. ಅಪರ್ಣಾ ವಸ್ತಾರೆ ಅಂದ್ರೆ ಮೊದಲಿಗೆ ನೆನಪಿಗೆ ಬರುವುದು ಆಕೆಯ ಧ್ವನಿ. ಯಾವುದೇ ಸರ್ಕಾರಿ ಕಾರ್ಯಕ್ರಮ ಆದರೂ ಸರಿ ಅಪರ್ಣಾ ಅಲ್ಲಿರುತ್ತಿದ್ದರು. ಆಕೆಗಿದ್ದ ಸ್ಪಷ್ಟ ಭಾಷಾ ಉಚ್ಛಾರಣೆ ಆಕೆಯನ್ನು ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗಿತ್ತು. ಪ್ರಧಾನಿ, ಸಿಎಂ, ರಾಜ್ಯಪಾಲರು ಯಾವುದೇ ಗಣ್ಯಾತಿಗಣ್ಯರು ಭಾಗವಹಿಸುವ ಕಾರ್ಯಕ್ರಮ ಆದರೂ ಅಪರ್ಣಾ ಅಲ್ಲಿರುತ್ತಾರೆ ಅನ್ನೋದು ಅಲಿಖಿತ ನಿಯಮ ಎನ್ನವಂತಾಗಿತ್ತು.

ಇನ್ನು ಮೆಟ್ರೋ ಸಂಚಾರದಲ್ಲೂ ಅಪರ್ಣಾ ಧ್ವನಿಯೇ ಜನರನ್ನು ಹತ್ತಲು ಇಳಿಯಲು ಸಹಕರಿಸುತ್ತಿತ್ತು. ಮುಗ್ದ ಮಗುವಿನಂತೆ ಮಾತನಾಡುವ ಅಪರ್ಣಾ ಭಾಷೆ ಕನ್ನಡವನ್ನು ಅರಳು ಉರಿದಂತೆ ಮಾತನಾಡು ಚಾಕಚಕ್ಯತೆ ನಡುವೆ ಶ್ವಾಸಕೋಶದ ಕ್ಯಾನ್ಸರ್ ಆಕೆಯನ್ನು ಬೆಂಬಿಡದಂತೆ ಕಾಡಿತ್ತು. ಕೇವಲ ಎರಡು ವರ್ಷಗಳ ಹಿಂದೆ ಪತ್ತೆಯಾಗಿದ್ದ ಕ್ಯಾನ್ಸರ್ ಎಷ್ಟೇ ಲವಲವಿಕೆಯಿಂದ ಇದ್ದರೂ ಆಕೆಯ ಪ್ರಾಣವನ್ನು ತೆಗೆದುಕೊಂಡು ಬಿಟ್ಟಿದೆ. ಶ್ವಾಸಕೋಶ ಕ್ಯಾನ್ಸರ್ ಅಷ್ಟೇ ಅಲ್ಲ, ಯಾವುದೇ ಕ್ಯಾನ್ಸರ್ ಇದ್ದರೂ ಜೀವನವನ್ನು ನರಕ ಮಾಡಿಬಿಡುತ್ತದೆ ಎನ್ನುವುದು ವೈದ್ಯಲೋಕದ ಮಾತು.

ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್ಗೆ ಬಲಿಯಾದ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದು, ಶ್ವಾಸಕೋಶದ ಕ್ಯಾನ್ಸರ್ ಬಂದವರು ಶೇಕಡ 6ರಷ್ಟು ಜನರಿದ್ದಾರೆ. ಶ್ವಾಸಕೋಶ ಕ್ಯಾನ್ಸರ್ಗೆ ಬಲಿಯಾದವರಲ್ಲಿ ಸಾವಿನ ಪ್ರಮಾಣ ಶೇಕಡ 9ರಷ್ಟು ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಧೂಮಪಾನ ಮಾಡುವ ಜನರಿಗೆ ಶ್ವಾಸಕೋಶದ ಕ್ಯಾನ್ಸರ್ ಬೇಗ ಬರುತ್ತೆ. ಪ್ಯಾಸಿವ್ ಸ್ಮೋಕಿಂಗ್ ಅಂದ್ರೆ ಬೇರೆಯವರು ಸಿಗರೇಟ್ ಸೇದುವಾಗ ಪಕ್ಕದಲ್ಲಿದ್ದು ಹೊಗೆ ಕುಡಿಯುವುದರಿಂದಲೂ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಅನುವಂಶಿಕವಾಗಿಯೂ ಕ್ಯಾನ್ಸರ್ ಬರುವ ಸಂಭವವಿದೆ.

ವಿಷಕಾರಿ ಅನಿಲಗಳನ್ನ ಸೇವಿಸುವುದರಿಂದ ಕ್ಯಾನ್ಸರ್ ಬರುತ್ತದೆ. ವಾಯುಮಾಲಿನ್ಯ, ಮೇಕಪ್ ಬಳಕೆ, ಕೈಗಾರಿಕೆಗಳಿಂದ ಹೊರ ಬರೋ ಹೊಗೆಯಿಂದಲೂ ಕ್ಯಾನ್ಸರ್ ಬರುತ್ತದೆ ಎನ್ನುತ್ತಾರೆ ವೈದ್ಯರು. ಶ್ವಾಸಕೋಶ ಕ್ಯಾನ್ಸರ್ ಲಕ್ಷಣಗಳೇನು ಅನ್ನೋದನ್ನು ವಿವರಿಸೋದಾದ್ರೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಸ್ವಲ್ಪ ವಾಕಿಂಗ್ ಮಾಡಿದ್ರೆ ಆಯಾಸವಾಗುತ್ತದೆ. ತೂಕ ಕಡಿಮೆ ಆಗುವುದು, ನಿರಂತರ ಕೆಮ್ಮುವಿನ ಜೊತೆ ರಕ್ತದ ಜೊತೆಗೆ ಕಫ ಬರುತ್ತದೆ. ಹಸಿವಾಗಿದ್ದರೂ ಸ್ವಲ್ಪ ಆಹಾರ ಸೇವಿಸಿದ್ರೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ವ್ಯಕ್ತಿ ಸೇವಿಸುವ ಗಾಳಿ ಸೂಕ್ತ ರೀತಿಯಲ್ಲಿ ದೇಹವನ್ನು ಸೇರುವುದೇ ಇಲ್ಲ. ಶ್ವಾಸಕೋಶ ತನ್ನ ಕಾರ್ಯವನ್ನು ನಿಧಾನವಾಗಿಸುತ್ತದೆ. ಅಂತಿಮವಾಗಿ ಮರಣ ಬರುತ್ತದೆ ಎನ್ನುತ್ತಾರೆ ವೈದ್ಯರು.