ಜಮಖಂಡಿ: ಬಿಎಲ್‌ಡಿಇ ಶಿಕ್ಷಣ ಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ, ಜಮಖಂಡಿ ಬಿಎಲ್‌ಡಿಇ ಕಾಲೇಜಿನಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳು ರ‌್ಯಾಂಕ್‌ಗಳನ್ನು ಪಡೆಯುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಕೈಗಾರಿಕಾ ಸಚಿವ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು. ನಗರದ ಬಸವ ಭವನದಲ್ಲಿ ಮಂಗಳವಾರ ನಡೆದ ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಗಳು ಬೆಳೆಯಬೇಕಾದರೆ ಶಿಸ್ತು ಬದ್ದವಾಗಿ ಆಡಳಿತ ಮಂಡಳಿಯವರು ಕಾರ್ಯ ಮಾಡಿದರೆ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಬೆಳೆಯುತ್ತವೆ, ಬಿಎಲ್‌ಡಿ ಸೌಹಾರ್ದನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದ್ದಾನೆ ಎಂದರು.
ಕಳೆದ ವರ್ಷ ರಾಜ್ಯದಲ್ಲಿ 10 ಸಾವಿರ ಮೇವ್ಯಾ ವಿದ್ಯುತ್ ಬೇಡಿಕೆ ಇತ್ತು ಆದರೆ ಈ ವರ್ಷ 16 ಸಾವಿರ ಮೇವ್ಯಾ ವಿದ್ಯುತ್ ಬೇಡಿಕೆ ಇದೆ, ಆದರೆ ಈ ವರ್ಷ ಕಡಿಮೆ ಮಳೆಯಾಗಿದ್ದರಿಂದ 5ರಿಂದ 6 ಸಾವಿರ ಮೇವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿದೆ, ಅದರಲ್ಲಿ ರೈತರ ಪಂಪಸೆಟ್‌ಗಳಿಗೆ ಶೇ.80 ರಷ್ಟು ವಿದ್ಯುತ್ ನೀಡಬೇಕು ಆದರೂ ಹೊರಗಡೆಯಿಂದ ವಿದ್ಯುತ್ ಆಮದು ಮಾಡಿಕೊಳ್ಳಲು ಟೆಂಡರ್ ಪ್ರಕ್ರೀಯೆ ನಡೆಸಲಾಗುತ್ತಿದೆ, ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 850 ಮೇವ್ಯಾ ವಿದ್ಯುತ್ ಖರಿದಿ ಮಾಡಲಾಗುವುದು ಎಷ್ಟೆ ಖರ್ಚಾದರು ವಿದ್ಯುತ್ ಕೊರತೆ ಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಬಿಎಲ್‌ಡಿಇ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ, ಬಿಎಲ್‌ಡಿಇ ಸಂಸ್ಥೆಯಮೇಲೆ ಗೌರವ ಭಾವ ಇದೆ, ಬಿಎಲ್‌ಡಿ ಸೌಹಾರ್ದ ಸಂಘ ಕೆಲವೇ ದಿನಗಳಲ್ಲಿ 150 ಕೋಟಿ ರೂ ಠೆವಣಿ ಸಂಗ್ರಹಿಸಿದ್ದು ಶ್ಲಾಗನೀಯ ಎಂದರು.