ಕಳ್ಳ ನೋಟ್ ಪ್ರಿಂಟ್ ಮಾಡುತ್ತಿದ್ದ ದಂಧೆಯನ್ನು ಕೇಂದ್ರಿಯ ಅಪರಾಧ ದಳದ ಪೊಲೀಸರು(CCB) ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕಲರ್ ಪ್ರಿಂಟರ್, ಹಣ ಹಾಗು ಕೆಮಿಕಲ್ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಆರೋಪಿಗಳು ತಕೆಮಾರಿಸಿಕೊಂಡಿದ್ದು ಒಂದು ನೋಟ್ ಕೊಟ್ಟರೆ ನಾಲ್ಕು ನೋಟ್ ಆಗುವಷ್ಟು ಬ್ಲ್ಯಾಕ್ ಪೇಪರ್ ಅಯೋಡಿನ್ ಹಾಗು ಬೇರೆ ಕೆಮಿಕಲ್ ನೀಡಿಯತ್ತಿದ್ದರು ಎಂದು ತಿಳಿದು ಬಂದಿದೆ.
ಈ ದಂಧೆ ಹೆಚ್ಚಾಗಿ ಅಮೆರಿಕಾದಲ್ಲಿ ನಡೆಯುತ್ತಿದ್ದು ಇದೀಗ ಭಾರತದಲ್ಲಿ ಶುರುವಾಗಿರುವುದಕ್ಕೆ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.