• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಾದಯಾತ್ರೆಯಲ್ಲಿ ಬಿಜೆಪಿಯ ವಿಜಯೇಂದ್ರ ಡಬಲ್‌ ಗೇಮ್‌ ಮಾಡ್ತಿದ್ದಾರ..?

ಕೃಷ್ಣ ಮಣಿ by ಕೃಷ್ಣ ಮಣಿ
August 4, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
ಪಾದಯಾತ್ರೆಯಲ್ಲಿ ಬಿಜೆಪಿಯ ವಿಜಯೇಂದ್ರ ಡಬಲ್‌ ಗೇಮ್‌ ಮಾಡ್ತಿದ್ದಾರ..?
Share on WhatsAppShare on FacebookShare on Telegram

ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧದ ಹೋರಾಟವೇ ಡಿ.ಕೆ ಶಿವಕುಮಾರ್‌(DK Shivakumar) ಕುಮ್ಮಕ್ಕಿನಿಂದ ನಡೆಯುತ್ತಿರುವ ಹೋರಾಟ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಡಿ.ಕೆ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವುದೇ ಈ ಹೋರಾಟದ ಏಕಮಾತ್ರ ಅಜೆಂಡಾ ಎಂದಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿ.ವೈ ವಿಜಯೇಂದ್ರ (B Y Vijayendra) ಹಾಗು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ(Ex CM Yadiyurappa) ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜೊತೆಗೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸವಾಲು ಎಸೆದಿದ್ದಾರೆ.

ADVERTISEMENT

ಮೈಸೂರಿನ ಮುಡಾ ಹಗರಣದ (Muda Scam In Mysore) ವಿರುದ್ಧ ಮೈತ್ರಿ ನಾಯಕರ ಪಾದಯಾತ್ರೆ ವಿರುದ್ಧ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ (Basavana Gowda Patil Yathnal) ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿದ್ರೆ ಮಹತ್ವ ಇರಲ್ಲ ಎಂದಿರುವ ಯತ್ನಾಳ್‌, ಯಡಿಯೂರಪ್ಪ ಅಧಿಕಾರದಿಂದ ಇಳಿಯಲು ವಿಜಯೇಂದ್ರನೇ ಕಾರಣ. ಡಿ.ಕೆ ಶಿವಕುಮಾರ್‌ ಹಾಗೂ ವಿಜಯೇಂದ್ರ ಇಬ್ಬರದ್ದು ಅಡ್ಜೆಸ್ಟ್​​ಮೆಂಟ್ ರಾಜಕೀಯ ಇದೆ. ಎಲ್ಲಾ ಪಕ್ಷದ ಹಗರಣಗಳ ಬಗ್ಗೆ ತನಿಖೆ ನಡೆಯಲಿ. ಕೋವಿಡ್ ಸಮಯದಲ್ಲಿ (Covid Scam) ಆದ ಹಗರಣಗಳ ಬಗ್ಗೆಯೂ ತನಿಖೆ ಆಗಲಿ. ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರ ಮೇಲೆ ಕೇಸುಗಳು ಹಾಕುತ್ತಿರುವ ಬಗ್ಗೆಯೂ ತನಿಖೆ ಮಾಡಲಿ. ವಿಜಯೇಂದ್ರ ರೀತಿ ನಾನು ಸಿಡಿ ಇಟ್ಟುಕೊಂಡಿಲ್ಲ ಅಂತ ಕಿಡಿಕಾರಿದ್ದಾರೆ.

ಇನ್ನೂ ಮುಂದುವರಿದು ಯಡಿಯೂರಪ್ಪನ ಭ್ರಷ್ಟ ಕುಟುಂಬ ನಾನು ಒಪ್ಪಲ್ಲ. ಮೊದಲು ವಿಜಯೇಂದ್ರ ಭ್ರಷ್ಟಾಚಾರ ಹೊರಹಾಕಲಿ. ನರೇಂದ್ರ ಮೋದಿ ಅವರು ಸಹಿತ ಈ ವಿಚಾರವಾಗಿ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ. ವಿಜಯೇಂದ್ರ ಫೈಲ್‌ಗಳಿಗೆ ಡಿ.ಕೆ ಶಿವಕುಮಾರ್‌ ತಕ್ಷಣ ಸಹಿ ಮಾಡುತ್ತಾರೆ. ಇಬ್ಬರು ಭ್ರಷ್ಟರಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ವಾಲ್ಮೀಕಿ ಹಗರಣ ಮುಖ್ಯ ಮಂತ್ರೀಗಳೇ ಒಪ್ಪಿಕೊಂಡಿದ್ದಾರೆ. ಈ ಹಗರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಇದ್ದಾರೆ, ರಾಹುಲ್ ಗಾಂಧಿ ಕೂಡಾ ಇದ್ದಾರೆ ಎಂದಿದ್ದಾರೆ. ಮೈಸೂರು ಹಗರಣದಲ್ಲಿ ಯಡಿಯೂರಪ್ಪ ತಂಗಿ‌ ಮಕ್ಕಳಿಗೆ ಎಷ್ಟು ಸೈಟ್‌ಗಳಿವೆ ಎಂದು ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ.

ಇದೇ ಸಿದ್ದರಾಮಯ್ಯ ಶಿಕಾರಿಪುರದಲ್ಲಿ ಹಾಲುಮತ ಸಮಾಜದ ವೀಕ್ ಕ್ಯಾಂಡಿಡೇಟ್ ಹಾಕಿ ವಿಜಯೇಂದ್ರ ಗೆಲ್ಲಸಿಲು ಸಹಾಯ ಮಾಡಿದರು(This same Siddaramaiah helped Vijayendra win the week candidate of Halumata Samaj in Shikaripura.). ವರುಣಾದಲ್ಲಿ ಸೋಮಣ್ಣ(Somanna In Varuna) ಅವರನ್ನು ಯಡಿಯೂರಪ್ಪ ಗ್ಯಾಂಗ್‌ನವರು ಸೋಲಿಸಿದರು‌ ಎಂದಿದ್ದಾರೆ ಯತ್ನಾಳ್‌. ವಿಜಯೇಂದ್ರನ ಹಾಗೆ ನಾನು‌ ಸಿಡಿಗಳನ್ನು ಇಟ್ಟುಕೊಂಡಿಲ್ಲ. ವಿಜಯೇಂದ್ರನ‌ ಶಿಷ್ಯರು ಸಿಡಿ ಕಂಪನಿಯವರಿದ್ದಾರೆ. ವಿಜಯೇಂದ್ರನ ಡೈರೆಕ್ಷನ್ ಮೇಲೆ ಹಾಸನದಲ್ಲಿ ಪೆನ್‌ ಡ್ರೈವ್‌ ಹಂಚಿದ್ದು. ನಾನು ಈಗ ಗಟ್ಟಿಯಾಗಿದ್ದೇವೆ, ಉಚ್ಚಾಟನೆ ಮಾಡಿದರೂ ಸಿದ್ದರಿದ್ದೇವೆ. ಯಡಿಯೂರಪ್ಪ ‌ಕುಟುಂಬವೇ ಹೈಕಮಾಂಡ್, ನಿಮಗೆ ಬೇಕಾದರೆ ಯತ್ನಾಳ ಅವರನ್ನು ಉಚ್ಚಾಟನೆ ಮಾಡಲಿ ಎಂದು ಸವಾಲು ಎಸೆದಿದ್ದಾರೆ.

ಕೃಷ್ಣಮಣಿ

Tags: B S YadiyurappaB Y Vijayendrabasavanagouda yatnalBJPCongress PartyCovid 19D K ShivakumarMuda ScamNikhil KumaraswamyR Ashoksiddaramaiahಎಚ್ ಡಿ ಕುಮಾರಸ್ವಾಮಿಬಿಜೆಪಿಸಿದ್ದರಾಮಯ್ಯ
Previous Post

57,000 ಚದರ ಕಿಲೋಮೀಟರ್ ಪರಿಸರ ಆಧಿಸೂಚನೆ ಹೊರಡಿಸಿದ ಕೇಂದ್ರ :ಕೋವರ್‌ ಕೊಲ್ಲಿ ಇಂದ್ರೇಶ್‌

Next Post

ರೈಲ್ವೇ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶಕ್ಕೆ ಸೂಚನೆ; ವಿ. ಸೋಮಣ್ಣ

Related Posts

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ
Top Story

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

by ಪ್ರತಿಧ್ವನಿ
May 13, 2026
0

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂದು ಬೆಳಗಿನ ಜಾವ...

Read moreDetails
ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ: ಶುಭೇಂದು ಅಧಿಕಾರಿಗೆ ಶಾಸಕನಿಂದ ಬಹಿರಂಗ ಬೆದರಿಕೆ!

May 12, 2026
Next Post

ರೈಲ್ವೇ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶಕ್ಕೆ ಸೂಚನೆ; ವಿ. ಸೋಮಣ್ಣ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada