ಹೈದರಬಾದಿನಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸುತ್ತಿರುವ ಬಿಜೆಪಿಯನ್ನು ಟೀಕಿಸಿರುವ ಟಿಆರ್ಎಸ್ ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದೆ.
ಇತ್ತ ಇದಕ್ಕೆ ಸುಮ್ಮನಾಗದ ಬಿಜೆಪಿ ಉರ್ದುವಿನಲ್ಲಿ ಟ್ವೀಟ್ ಮಾಡಿ ತಿರುಗೇಟು ನೀಡಿದೆ. ರೆಡು ಪಕ್ಷಗಳ ನಡುವಿನ ಟ್ವೀಟ್ ಸಮರ ತಾರಕಕ್ಕೇರಿದ್ದು ಉಭಯ ಪಕ್ಷಗಳು ಆರೋಪ ಪ್ರತ್ಯಾರೋಪಗಳ ಕೆಸರೆರೆಚಾಟದಲ್ಲಿ ತೊಡಗಿವೆ.
ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಅಭಿವೃದ್ದಿ ಕಾರ್ಯಗಳನ್ನು ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಹಾಗು ಬಿಜೆಪಿಯನ್ನಿ ಟಿಆರ್ಎಸ್ ಪಕ್ಷ ಟೀಕಿಸಿದೆ. ಇತ್ತ ಕೇಸರಿ ಪಾಳಯವು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ ಉರ್ದುವಿನಲ್ಲಿ ಟ್ವೀಟ್ ಮಾಡಿದೆ.
ಬಿಜೆಪಿ ಮಾಡಿರುವ ಟ್ವೀಟ್ನಲ್ಲಿ ಹೈದರಬಾದ್ ಸಂಸದ ಅಸಾದುದ್ಧೀನ್ ಓವೈಸಿಯವರನ್ನು ಟೀಕಿಸಿದೆ.