ಮದ್ದೂರಿನಲ್ಲಿ (Maddur) ಸಾಮೂಹಿಕ ಗಣೇಶ ಮೆರವಣಿಗೆ (Ganesha procession) ಹಾಗೂ ವಿಸರ್ಜನೆ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಮಾತನಾಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ಕೊಟ್ಟಿದ್ದಾರೆ.ನಾನು ಊರಿನಲ್ಲಿ ಇರಲಿಲ್ಲ ..ನನಗೆ ಪೂರ್ಣ ಮಾಹಿತಿ ಗೊತ್ತಿಲ್ಲ ಎಂದಿದ್ದಾರೆ.

ಇನ್ನು ಬಿಜೆಪಿ ನಾಯಕರು ಮದ್ದೂರಿಗೆ ಹೋಗುತ್ತಿರುವ ವಿಚಾರವಾಗಿ ಡಿಕೆಶಿ ವ್ಯಂಗ್ಯವಾಡಿದ್ದಾರೆ. ಅವರಿಗೆ ಬೇರೆ ಏನು ಕೆಲಸ ಇಲ್ಲ.ಜನರನ್ನ ಭಾಗ ಮಾಡುವುದೇ ಕೆಲಸ. ಬೆಂಕಿ ಹಚ್ಚೋದೇ ಅವರ ಕೆಲಸ. ಕೇವಲ ರಾಜಕೀಯ ಮಾಡುವುದು ಅಷ್ಟೇ ಬಿಜೆಪಿ ಕೆಲಸ ಎಂದಿದ್ದಾರೆ.

ಬಿಜೆಪಿ ಕಾಲದಲ್ಲಿ ಏನೇನೂ ಅಭಿವೃದ್ದಿ ಮಾಡಿಲ್ಲ. ಮದ್ದೂರಿನ ಬದಲು ಅವರುದೆಹಲಿಗೆ ಹೋಗಿ ನರೇಗಾ ಹಣವನ್ನು ತರಲಿ. ನಮ್ಮ ತೆರಿಗೆ ಹಣವನ್ನು ತರಲಿ,ಕಾವೇರಿ, ಮೇಕೆದಾಟು, ಮಹದಾಯಿ ಅನುಮತಿ ಕೊಡಿಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.











