ರಾಜ್ಯ ಕಾಂಗ್ರೆಸ್ ಸರ್ಕಾರದ ಜಾತಿ ಜನಗಣತಿ (Caste census) ಮಂಡನೆ ವಿಚಾರವಾಗಿ ಸದ್ಯ ಬಿಜೆಪಿ (Bjp) ನಾಯಕರು ಮೌನ ವಹಿಸಿದ್ದು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಇದೇ ತಿಂಗಳ ಏಪ್ರಿಲ್ 17ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ (Cabinet meeting) ಜಾತಿಗಣತಿ ವರದಿಯ ಅಂಕಿ ಅಂಶಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದ್ದು,ಆ ನಂತರ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ನಡೆ ಏನಾಗಿರಲಿದೆ ಎಂದು ಕಾಡು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

ರಾಜ್ಯದಲ್ಲಿ ಪ್ರಬಲವಾದ ಒಕ್ಕಲಿಗ (Vikkaliga) ಹಾಗೂ ಲಿಂಗಾಯತ (Lingayat) ಸಮುದಾಯದ ಮುಖಂಡರ ಜೊತೆಗೆ ವಿಶ್ವಾಸದಲ್ಲಿದ್ದು, ಸರ್ಕಾರದ ಸಚಿವರೇ ಈ ವರದಿಗೆ ವಿರೋಧ ವ್ಯಕ್ತಪಡಿಸುವವರೆಗೂ ತಾಳ್ಮೆಯಿಂದ ಇರುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.