ಮಾಜಿ ಸಂಸದ ಪ್ರತಾಪಸಿಂಹರನ್ನ (Prathap simha) ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರಿಗೆ ಬಿಜೆಪಿಯ ಕಾರ್ಯಕರ್ತರಾದ ಮೈ.ಕಾ.ಪ್ರೇಮ್‌ಕುಮಾರ್, ಕುಮಾರ್ ಗೌಡ ದೂರು ಅರ್ಜು ನೀಡಿದ್ದಾರೆ.
ಪ್ರತಾಪ ಸಿಂಹರಿಂದ ಪಕ್ಷಕ್ಕೆ ಅನುಕೂಲಕ್ಕಿಂತ ಹಾನಿಯೇ ಹೆಚ್ಚು ಎಂದು ಬಿಜೆಪಿಯ ಕೆಲ ಬಿಜೆಪಿ ಕಾರ್ಯಕರ್ತರು ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿಗೂ ದೂರು ನೀಡಿದ್ದಾರೆ.
ಮಾಜಿ ಸಂಸದ ಪ್ರತಾಪಸಿಂಹ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ.ಸಂಸತ್ ಸ್ಮೋಕ್ ಬಾಂಬ್ ಪ್ರಕರಣದಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಜಿಲ್ಲೆಯಲ್ಲಿ ಪ್ರತಾಪಸಿಂಹ ಪಕ್ಷವನ್ನ ಹಾಳುಮಾಡುತ್ತಿದ್ದಾರೆ. ಸಮಗ್ರ ತನಿಖೆ ನಡೆದು ಸತ್ಯಾಸತ್ಯತೆ ಹೊರಬಂದ ಮೇಲೆ ಅವರಿಗೆ ಸ್ಥಾನ- ಮಾನ ನೀಡಿ ಎಂದು ದೂರರ್ಜಿ ಸಲ್ಲಿಸಲಾಗಿದೆ.