ಬೆಂಗಳೂರಿನಲ್ಲಿ (Bengaluru) ಕೊಡಗು (Kodagu) ಮೂಲದ ಬಿಜೆಪಿ ಕಾರ್ಯಕರ್ತ ಡೆತ್ ನೋಟ್ (Death note) ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಡಗಿನ ಸೋಮವಾರಪೇಟೆಯ ಗೋಣಿಮರೂರಿನವರಾದ ವಿನಯ್ (Vinay) ಆತ್ಮಹತ್ಯೆಗೆ ಶರಣಾಗಿರೂ ವ್ಯಕ್ತಿ.

ಕೊಡಗು ಜಿಲ್ಲೆಯ ಸಮಸ್ಯೆ,ಸಲಹೆ ಸೂಚನೆ ಎಂಬ ಸಾರ್ವಜನಿಕ ವಾಟ್ಸಾಪ್ ಗ್ರೂಪ್ ನಲ್ಲಿ ವಿನಯ್ ಅಡ್ಮಿನ್ ಆಗಿದ್ದರು.ಆದ್ರೆ ಈ ಗ್ರೂಪ್‌ನಲ್ಲಿ ಶಾಸಕ ಎ.ಎಸ್ ಪೊನ್ನಣ್ಣ (AS Ponnanna) ವಿರುದ್ಧ ಅವಹೇಳನಕಾರಿ ಮೆಸೇಜ್ ಹಾಕಿ ನಿಂದಿಸಿದ್ದರು ಎನ್ನಲಾಗಿದೆ.
ಹೀಗಾಗಿ ಈ ಗ್ರೂಪ್ ಅಡ್ಮಿನ್ ವಿನಯ್ ಆಗಿದ್ದರಿಂದ, ವಿನಯ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದರಿಂದ ಮನನೊಂದು ವಿನಯ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ವಿಯನ್, ಕುಟುಂಬದೊಂದಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಾಗಿದ್ರು. ಈ ಬಗ್ಗೆ ಸುಧೀರ್ಘವಾದ ಡೆತ್ ನೋಟ್ ಬರೆದಿಟ್ಟಿರುವ ವಿನಯ್ ರಾಜಕೀಯ ದ್ವೇಷದ ಕಾರಣಕ್ಕೆ ತಮಗೆ ಕಿರುಕುಳ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.