ಕೃಷಿ ಕಾಯ್ದೆಗಳ ವಿರುದ್ದ ತೀವ್ರವಾದ ಪ್ರತಿಭಟನೆ ನಡೆಸುತ್ತಿರುವ ರೈತ ಒಕ್ಕೂಟದ ಮುಂಚೂಣಿಯ ನಾಯಕರ ಮೇಲೆ ಬಿಜೆಪಿ ಐಟಿ ಸೆಲ್ ವೈಯಕ್ತಿಕ ದಾಳಿ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಸ್ವರಾಜ್ ಇಂಡಿಯಾದ ನಾಯಕರಾಗಿರುವ ಭಾರತೀಯ ರೈತ ಒಕ್ಕೂಟದ ನಾಯಕರೂ ಆಗಿರುವ ಯೋಗೇಂದ್ರ ಯಾದವ್ ಅವರ ಖಾಸಗಿ ಮೊಬೈಲ್ಗೆ ನೂರಾರು ಬೆದರಿಕೆ ಕರೆಗಳು ಬರಲು ಆರಂಭಿಸಿವೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಯೋಗೇಂದ್ರ ಯಾದವ್ ಅವರು, ಬಿಜೆಪಿ ಟ್ರೋಲ್ ಆರ್ಮಿ ನನ್ನ ವಿರುದ್ದ ದ್ವೇಷಪೂರಿತ ಅಭಿಯಾನವನ್ನು ಆರಂಭಿಸಿದೆ ಎಂದು ಆರೋಪಿಸಿದ್ದಾರೆ.
“ಮೊದಲು ನನ್ನ ಖಾಸಗಿ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸಿದರು. ಆ ನಂತರ ನನಗೆ ನೂರಾರು ಅಶ್ಲೀಲ ಹಾಗೂ ಬೆದರಿಕೆ ಕರೆಗಳು ಬರಲು ಆರಂಭಸಿದವು. ಈಗ ಅವರು ನನ್ನ ಮನೆಯ ಎದುರು ಜನರ ಗುಂಪನ್ನು ಸೇರಿಸುತ್ತಿದ್ದಾರೆ. ನಾನು ದೆಹಲಿ ಪೊಲೀಸರಿಗೆ ಮಾಹಿತಿ ತಿಳಿಸುತ್ತೇನೆ. ಇದರಿಂದ ನಾನು ಹೆದರುವುದಿಲ್ಲ,” ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.