ವಕ್ಫ್ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಜನಜಾಗೃತಿ ಸಭೆ ನಡೆಸಿದೆ. ಬೀದರ್‌ನಲ್ಲಿ ಜನಜಾಗೃತಿ ಸಭೆಗೂ ಮುನ್ನ ಯತ್ನಾಳ್ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೀದರ್ನ ಧರ್ಮಾಪುರಿ ಗ್ರಾಮದಲ್ಲಿ ರೆಬಲ್ ನಾಯಕರ ವಿರುದ್ಧ ಪ್ರತಿಭಟನೆ ಮಾಡಲಾಗಿದೆ. ಯತ್ನಾಳ್ ಟೀಂಗೆ ಆರಂಭದಲ್ಲೇ ಸ್ಥಳೀಯ ಬಿಜೆಪಿ ನಾಯಕರು ವಿರೋಧ ವ್ಯಕ್ತವಾಗುವ ಮೂಲಕ ರೆಬೆಲ್ ಟೀಂಗೆ ಮುಜುಗರ ಎದುರಾಗಿದೆ. ಈ ನಡುವೆ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.
ರಾಜ್ಯ ಬಿಜೆಪಿಯಿಂದ ವಕ್ಫ್ ಹೋರಾಟಕ್ಕೆ ತಯಾರಿ ನಡೆಸಲಾಗ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಂ ಡಿಸೆಂಬರ್ 4 ರಿಂದ 3 ದಿನಗಳ ಕಾಲ ಮೂರು ತಂಡಗಳಾಗಿ ಪ್ರವಾಸ ಕೈಗೊಳ್ಳಲಿದ್ದು, ವಿಜಯೇಂದ್ರ, ಅಶೋಕ್, ಚಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಂದ ಅಹವಾಲು ಸ್ವೀಕಾರ ಮಾಡಲಿದ್ದಾರೆ. ಆ ಬಳಿಕ ವರದಿ ಆಧರಿಸಿ ಸದನದಲ್ಲಿ ಉಗ್ರ ಹೋರಾಟ ಮಾಡಲು ಬಿಜೆಪಿ ನಾಯಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ವಕ್ಫ್ ವಿರುದ್ಧ ಬಿಜೆಪಿಯ ಹೋರಾಟಕ್ಕೆ ಕಾಂಗ್ರೆಸ್ ನಾಯಕರು ಕೌಂಟರ್ ಮಾಡಿದ್ದಾರೆ. ಕಾಂಗ್ರೆಸ್‌ಗಿಂತ ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ವಕ್ಫ್ ಆಸ್ತಿ ಎಂದು ನೋಟಿಸ್ ನೀಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. BS ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಅವಧಿಯಲ್ಲಿ 1,735 ನೋಟಿಸ್ ಜಾರಿಯಾಗಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 1201 ನೋಟಿಸ್ಗಳು ಬಂದಿವೆ ಎನ್ನಲಾಗಿದೆ.
ಈ ಕುರಿತು ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರ ಮುಖಗಳನ್ನು ಕನ್ನಡಿಯಲ್ಲಿ ನೋಡಿ ಎಂದು ಹೇಳಿದ್ದೇನೆ. ವಕ್ಫ್ ಆಸ್ತಿ ಕೂಡ ತೊಂದರೆಯಾಗಲ್ಲ. ವಿಪಕ್ಷಗಳು ಏನೇ ಆರೋಪ ಮಾಡಿದ್ರೂ ಬಡವರಿಗೆ ಅನ್ಯಾಯ ಆಗೋಕೆ ಬಿಡುವುದಿಲ್ಲ ಎಂದಿದ್ದಾರೆ. ಗೃಹ ಸಚಿವ ಪರಮೇಶ್ವರ್ ಮಾತನಾಡಿ ಸತ್ಯವನ್ನೂ ಯಾವತ್ತೂ ಮುಚ್ಚಿಡಲು ಆಗಗಲ್ಲ ಎಂದಿದ್ದಾರೆ.
ವಕ್ಫ್ ನೋಟಿಸ್ ವಿಚಾರವಾಗಿ ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದು, ಜಾಲತಾಣ Xನಲ್ಲಿ ಪೋಸ್ಟ್ ಮಾಡಿದ್ದಾರೆ. ಸುಳ್ಳಿನ ಮೆರವಣಿಗೆಗೆ ಸತ್ಯವನ್ನ ಕೊಲೆ ಮಾಡಿ ಸಮಾಧಿ ಮಾಡೋದು ಭ್ರಷ್ಟ ಜನತಾ ಪಾರ್ಟಿ. ಬಿಜೆಪಿ ಅವಧಿಯ ವಕ್ಪ್ ನೋಟಿಸ್ ಅಂಕಿ ಅಂಶ ಮುಂದಿಟ್ಟು ಟೀಕೆ ಮಾಡಿರುವ ಪ್ರಿಯಾಂಕ್ ಖರ್ಗೆ, ಹಿಂದಿನ ಬಿಜೆಪಿ ಸರ್ಕಾರ 1,735 ರೈತರಿಗೆ ವಕ್ಫ್ ಅಸ್ತಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದು ಏಕೆ..? ಎಂದು ಪ್ರಶ್ನಿಸಿದ್ದಾರೆ. ಇನ್ನು 4,720 ಎಕರೆಯಷ್ಟು ಜಮೀನನ್ನು ಪರಬಾರೆಯಾಗದಂತೆ ವಕ್ಫ್ ಆಸ್ತಿ ಎಂದು ಫ್ಲಾಗ್ ಆಫ್ ಮಾಡಿದ್ದು ಏಕೆ..? ಎಂದು ಕೇಳಿದ್ದಾರೆ.