ಬಿಜೆಪಿಯ (Bjp) ಭದ್ರಕೋಟೆಯಾಗಿರೋ ಉತ್ತರಕನ್ನಡದಲ್ಲಿ (uttara kannada) ಕೇಸರಿ ಅಭ್ಯರ್ಥಿಗೆ ಬಂಡಾಯದ ಬಿಸಿ ತಾಕಿದೆ.. ಕಮಲ ಕೋಟೆ ಒಳಗಡೆಯೇ ಒಳೇಟು ಬೀಳುವ ಟೆನ್ನನ್ (tension) ಆವರಿಸಿದೆ.. ಈ ಮೂಲಕ ಬಿಜೆಪಿಗೆ ಉತ್ತರ ಕನ್ನಡ ಕ್ಷೇತ್ರ ಕ್ಲಿಷ್ಟಕರವಾಗುತ್ತಾ ಸಾಗಿದೆ..ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ (vishweshwara hegde) ಕಾಗೇರಿಗೆ ತಲೆ ನೋವಾಗಿ ಪರಿಣಮಿಸಿದೆ..ಪ್ರಚಾರಕ್ಕೆ ಬಾರದೇ ಅಂತರ ಕಾಯ್ದುಕೊಂಡಿರೋ ಸಂಸದ ಅನಂತ್ ಕುಮಾರ್ ಹೆಗಡೆ (Anant Kumar hegde), ಮಾಜಿ ಸಚಿವ ಶಿವರಾಂ ಹೆಬ್ಬಾರ್ರಿಂದ (Shivaram hebbar) ವಿಶ್ವೇಶ್ವರ ಹೆಗಡೆ ಕಾಗೇರಿಗೆ ಆತಂಕ ಶುರುವಾಗಿದೆ.
ಅನಂತ್ ಕುಮಾರ್ ಹೆಗಡೆ.. ಹಿಂದೂ ಫೈಯರ್ ಬ್ರಾಂಡ್ (Hindu fire brand), 2024ರ ಲೋಕಾ ಕದನಕ್ಕೆ ಟಿಕೆಟ್ ಮಿಸ್ ಆಗಿದ್ದಕ್ಕೆ ಸ್ವಪಕ್ಷದ ವಿರುದ್ಧವೇ ಹೆಗಡೆ ಫೈಯರ್ ಆಗಿದ್ದಾರೆ.. ಉತ್ತರಕನ್ನಡ ಅಭ್ಯರ್ಥಿಯಾಗಿ ಕಾಗೇರಿ ಆಯ್ಕೆಯಾಗ್ತಿದ್ದಂತೆ ಅನಂತ್ ಮಾರ್ ಹೆಗಡೆ ಕೆಂಡವಾಗಿದ್ದಾರೆ.. ಇವರ ಜೊತೆಗೆ ಮತ್ತೊಬ್ಬ ಮಾಜಿ ಸಚಿವ ಕೂಡಾ ಕಾಗೇರಿಗೆ ಕಂಟಕವಾಗಿದ್ದಾರೆ.
ಈಗಾಗಲೇ ಬಿಜೆಪಿಯಿಂದ (Bjp) ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಅಂತರ ಕಾಯ್ದುಕೊಂಡಿದ್ದಾರೆ.. ಇತ್ತದ ಟಿಕೆಟ್ ಸಿಗದಿದ್ದಕ್ಕೆ ಅನಂತ್ ಕುಮಾರ್ ಹೆಗಡೆ ಪಕ್ಷದ ಮೇಲೆ ಮುನಿಸಿಕೊಂಡಿದ್ದಾರೆ.. ಹೀಗಾಗಿ ಆದಷ್ಟು ಬೇಗ ಒಂದು ಸಭೆ ಕರೆಯುವಂತೆ ವಿಶ್ವೇಶ್ವರ ಹೆಗಡೆ ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಳರ್ (Anjali nimbalkar) ಪರ ಉತ್ತರ ಕನ್ನಡದಲ್ಲಿ ಭರ್ಜರಿ ಕ್ಯಾಂಪೇನ್ ನಡೆಯುತ್ತಿದೆ.. ಆರ್.ವಿ ದೇಶಪಾಂಡೆ (R.V despande) ಹಾಗೂ ಸಚಿವ ಮಂಕಾಳ ವೈದ್ಯ ಒಗ್ಗಟ್ಟಿನ ಪ್ರಚಾರ ನಡೆಸ್ತಿರೋದು ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮತ್ತಷ್ಟು ಆತಂಕವನ್ನ ಹೆಚ್ಚಿಸಿದೆ.
ಆದಷ್ಟು ಬೇಗ ಬಿಜೆಪಿ ನಾಯಕರ ಈ ಮುಸುಕಿನ ಗುದ್ದಾಟವನ್ನ ಸರಿ ಪಡಿಸದಿದ್ದರೇ ಕಮಲಕ್ಕೆ ಕಂಟಕ ಕಟ್ಟಿಟ್ಟ ಬುತ್ತಿ.. ಅಲ್ಲದೇ ನಾಯಕರ ನಡುವಿನ ವೈಮನಸ್ಸು ತನ್ನ ಭದ್ರಕೋಟೆಯಲ್ಲೇ ಬಿಜೆಪಿಗೆ ಡ್ಯಾಮೇಜ್ ಮಾಡಿದ್ರೂ ಅಚ್ಚರಿ ಇಲ್ಲ..