ಭಾರತದ ಕುಸ್ತಿಪಟುಗಳ ಒಕ್ಕೂಟದ (Wrestling Federation of India) ಮುಖ್ಯಸ್ಥನಾದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥರಾದ ಅಖಿಲೇಶ್ ಯಾದವ್ (Akhilesh Yadav), ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿರುವ ಅಖಿಲೇಶ್ ಯಾದವ್ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗುವಂತೆ ಮಾಡುವುದು ಬಿಜೆಪಿಯ ಪಕ್ಷದ ಜವಾಬ್ದಾರಿಯಾಗಿದೆ ಎಂದು ಹೇಳುವ ಮೂಲಕ ಬಿಜೆಪಿ(bjp) ತನ್ನ ಜವಾಬ್ದಾರಿಯನ್ನು ಮರೆತಿದೆ ಎಂದು ಪರೋಕ್ಷವಾಗಿ ಸರ್ಕಾರದ ವಿರುದ್ಧ ಟೀಕೆಯನ್ನು ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇಟಿ ಬಚಾವೋ, ಬೇಟಿ ಪಡಾವೋ’ ಇಂದು ಬಿಜೆಪಿ ದೊಡ್ಡ ದೊಡ್ಡ ಘೋಷಣೆಗಳನ್ನು ಕೂಗುತ್ತದೆ ಆದರೆ ಆ ಘೋಷಣೆಗಳನ್ನು ಅಳವಡಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಹಾಗಾಗಿ ಈ ಬಗ್ಗೆ ಬಿಜೆಪಿ ಮರು ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ. ಮಹಿಳಾ ಕುಸ್ತಿಪಟುಗಳು ಅನ್ಯಾಯಕ್ಕೆ ಒಳಗಾಗಿದ್ದಾರೆ ಅವರಿಗ ನ್ಯಾಯಕ್ಕಾಗಿ ಬೇಡಿಕೆ ಇಟ್ಟಾಗ ಅವರಿಗೆ ನ್ಯಾಯ ದೊರಕಿಸುವುದು ಬಿಜೆಪಿಯ ಜವಾಬ್ದಾರಿ ಎಂದು ಸರ್ಕಾರಕ್ಕೆ ಅದರ ಜವಾಬ್ದಾರಿಯ ಬಗ್ಗೆ ಅಖಿಲೇಶ್ ಯಾದವ್ ಎಚ್ಚರಿಸಿದ್ದಾರೆ
ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳು ದೇಶಕ್ಕಾಗಿ ಪದಕುಗಳನ್ನ ಗೆದ್ದಿದ್ದಾರೆ ಅವರು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯಲು ಹರಿದ್ವಾರಕ್ಕೆ ತೆರಳುವುದಾಗಿ ಘೋಷಿಸಿದಾಗ ಇದೇ ಅಖಿಲೇಶ್ ಯಾದವ್ ಅವರು, “ಈ ಬಾರಿ ತಾಯಿ ಗಂಗಾ ಹೆಣ್ಣು ಮಕ್ಕಳನ್ನು ಕರೆದಿದ್ದಾರೆ “ಮಹಿಳೆಯರ ಸುರಕ್ಷತೆ ಮತ್ತು ಘನತೆಯ ಕುರಿತಾದ ಬಿಜೆಪಿಯ ಎಲ್ಲಾ ಘೋಷಣೆಗಳು ಪೊಳ್ಳು ಮತ್ತು ಮಹಿಳೆಯರ ಮತಗಳನ್ನು ಕಸಿದುಕೊಳ್ಳಲು ಮಾತ್ರ ಎಂದು ಹೇಳಿದ್ದರು ಬಳಿಕ ಈ ಕುರಿತು #MurderOfDemocracy ಎಂದು ಟ್ವಿಟರ್ ನಲ್ಲಿ ಟ್ವೀಟ್ ಮಡಿದ್ದರು
ಒಟ್ಟಾರೆಯಾಗಿ ಪ್ರತಿದಿನವೂ ಕೂಡ ಕುಸ್ತಿಪಟುಗಳ ಹೋರಾಟ ಒಂದೊಂದು ಹಂತ ತೀವ್ರವಾಗುತ್ತಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವ ಮತ್ತು ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸವನ್ನು ಮಾಡಬೇಕು ಅಂತ ಸಾರ್ವಜನಿಕ ವಲಯದಲ್ಲೂ ಕೂಡ ಕೇಳಿ ಬಂದಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಸರ್ಕಾರ ಈ ವಿಚಾರದ ಕುರಿತು ಯಾವ ರೀತಿಯಾದಂತಹ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ