ಬಿಜೆಪಿಯಲ್ಲಿ (BJP) ಬಂಡಾಯದ ಕಹಳೆಯನ್ನು ಗಟ್ಟಿಯಾಗಿ ಮೊಳಗಿಸಿದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಗೆ (Basava Gowda patil yatnal) ಇದೀಗ ಬಿಜೆಪಿ ಹೈ ಕಮಾಂಡ್ ಶೋಕಾಸ್ ನೋಟೀಸ್ ಜಾರಿ ಮಾಡಿರುವ ಹಿನ್ನಲೆ, ಸದ್ಯ ಬಿಜೆಪಿ ಬಂಡಾಯ ನಾಯಕ ಶಕ್ತಿದೇವತೆ ಮೊರೆ ಹೋಗಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ (Chamundi hill) ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶಾಸಕ ಯತ್ನಾಳ್ ಭೇಟಿ ಕೊಟ್ಟಿದ್ದಾರೆ.ತಮ್ಮ ಬಂಡಾಯದ ಆರಂಭದಿಂದಲೂ ಈ ಬಂಡಾಯ ನಾಯಕರು ಚಾಮುಂಡಿ ತಾಯಿ ಮೊರೆ ಹೋಗಿದ್ದಾರೆ. ನಾಡಿನ ಅಧಿದೇವತೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿ ಆ ನಂತರವೇ ಈ ನಾಯಕರೆಲ್ಲರು ಬಂಡಾಯದ ಕಹಳೆ ಊದಿದ್ದರು.

ಬಿ.ವೈ.ವಿಜಯೇಂದ್ರ (BY Vijayendra) ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಯತ್ನಾಳ್,ಬಂಡಾಯದ ಬಳಿಕ ಇಂದು ಮೂರನೇ ಬಾರಿಗೆ ಚಾಮುಂಡಿ ತಾಯಿ ದರ್ಶನ ಪಡೆದಿದ್ದಾರೆ. ಈ ಮಧ್ಯೆ ಕೇಂದ್ರದ ನಾಯಕರ ಸಮನ್ಸ್ ಗೆ ಯತ್ನಾಳ್ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ.