ಗುತ್ತಿಗೆದಾರ ಸಚಿನ್ (Contractor sachin) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ನಾಯಕರು (Bjp leaders) ಪೊಸ್ಟರ್ ಅಭಿಯಾನ ನಡೆಸಲು ಮುಂದಾಗಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ (Race course road) ಬಳಿ ಸುಪಾರಿ ಸ್ಪಾನ್ಸರ್ ಖರ್ಗೆ ಎಂದು ಪೋಸ್ಟರ್ ಅಂಟಿಸಿ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಈ ರೀತಿ ಗೋಡೆಗೆ ಅಂಟಿಸಿದ ಪೊಸ್ಟರ್‌ಗಳನ್ನ ಪೊಲೀಸರು ಕಿತ್ತು ಬಿಸಾಕಿ ಪ್ರತಿಭಟನಾಕಾರರನು ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಪ್ರತಿಭಟನೆಯಲ್ಲಿ ಛಲವಾದಿ ನಾರಾಯಣಸ್ವಾಮಿ (Chalavadi Narayana swamy) ಹಾಗೂ ಎನ್ ರವಿಕುಮಾರ್ (N ravikumar) ಭಾಗಿಯಾಗಿದ್ರು. ನಿನ್ನೆ ಕೂಡ ಬಿಜೆಪಿ ಇದೇ ಪೋಸ್ಟರ್ ಅನ್ನು ತಮ್ಮ ಅಧಿಕೃತ ಎಕ್ಸ್ ಪೇಜ್ ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿತ್ತು. ಇಂದು ಬೀದಿಗಿಳಿದು ಪ್ರತಿಭಟಿಸಲು ಮುಂದಾಗಿದ್ದಾರೆ.