• Home
  • About Us
  • ಕರ್ನಾಟಕ
Friday, October 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ : ವಿಜಯೇಂದ್ರ, ಸಿಟಿ ರವಿ ಹೆಸರು ಮುಂಚೂಣಿಗೆ?

Any Mind by Any Mind
June 7, 2022
in Top Story, ಕರ್ನಾಟಕ
0
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ : ವಿಜಯೇಂದ್ರ, ಸಿಟಿ ರವಿ ಹೆಸರು ಮುಂಚೂಣಿಗೆ?
Share on WhatsAppShare on FacebookShare on Telegram

ಪಂಚ ರಾಜ್ಯ ಚುನಾವಣೆಗಳು ಮುಗಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಗಳಿಗೆ ತೆರೆಮರೆಯ ಸಿದ್ದತೆಗಳು ಗರಿಗೆದರಿವೆ.

ADVERTISEMENT

ಕಳೆದ ಕೆಲವು ತಿಂಗಳುಗಳಿಂದ ಸಂಪುಟ ಪುನರ್ ರಚನೆಯ ನಿಟ್ಟಿನಲ್ಲಿ ಬಿಜೆಪಿಯ ಘಟಾನುಘಟಿ ನಾಯಕರ ಬಹಿರಂಗ ಹೇಳಿಕೆಗಳು, ದೆಹಲಿ ಮಟ್ಟದಲ್ಲಿ ಲಾಬಿ, ಹಿರಿಯ ಸಚಿವರ ರಾಜೀನಾಮೆಗೆ ಪಟ್ಟು,.. ಮುಂತಾದ ರಾಜಕೀಯ ವರಸೆಗಳು ಸದ್ದು ಮಾಡುತ್ತಲೇ ಇದ್ದವು. The first step in starting https://starlitenewsng.com/ver-james-bond-casino-royale-online-subtitulada/ real money play is selecting your perfect casino online. ಈ ನಡುವೆ ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಎದುರಾಗುತ್ತಲೇ ಬಿಜೆಪಿ ದೆಹಲಿ ವರಿಷ್ಠರ ಗಮನ ಆ ಚುನಾವಣೆಯ ಕಡೆ ವಾಲಿದ್ದರಿಂದ ರಾಜ್ಯ ಬಿಜೆಪಿಯ ವಿದ್ಯಮಾನಗಳು ಬದಿಗೆ ಸರಿದಿದ್ದವು.

ಇದೀಗ ಪಂಚರಾಜ್ಯ ಚುನಾವಣೆ ಮುಗಿಯುತ್ತಲೇ ಮತ್ತೆ ಸಂಪುಟ ಪುನರ್ ರಚನೆ, ನಾಯಕತ್ವ ಬದಲಾವಣೆಯ ತೆರೆಮರೆಯ ಯತ್ನಗಳು ಗರಿಗೆದರಿದ್ದು, ಸಂಪುಟ ಸೇರ್ಪಡೆಯ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರು ಎನ್ನಲಾಗುತ್ತಿರುವ ಬಿ ವೈ ವಿಜಯೇಂದ್ರ ಅವರೇ ಕಳೆದ ವಾರ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಬಂದಿದ್ದಾರೆ. ಅದಾದ ಬೆನ್ನಲ್ಲೇ ಇನ್ನೂ ಕೆಲವು ಸಂಪುಟ ಅವಕಾಶವಂಚಿತ ಹಿರಿಯ ಬಿಜೆಪಿ ಶಾಸಕರು ದೆಹಲಿಯತ್ತ ಮುಖಮಾಡಿದ್ದಾರೆ.

ಈ ನಡುವೆ, ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಬೊಮ್ಮಾಯಿ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. No, because the gambling location https://kellyrobbins.net/are-there-casinos-in-rapid-city-south-dakota/ only holds a Class II licence, Finger Lakes Gaming and Racetrack does not offer any live table games at this time. ಅವರ ಆಡಳಿತದ ಬಗ್ಗೆ ಪಕ್ಷದ ಯಾವುದೇ ಶಾಸಕರ ಅಸಮಾಧಾನವಿಲ್ಲ. ಹಾಗಾಗಿ ನಾಯಕತ್ವ ಬದಲಾವಣೆಯ ವಿಷಯ ವರಿಷ್ಠರ ಮುಂದಿಲ್ಲ. ಆದರೆ, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ವಿಷಯದಲ್ಲಿ ಮುಖ್ಯಮಂತ್ರಿಗಳು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸದ್ಯದಲ್ಲೇ ತೀರ್ಮಾನ ಕೈಗೊಳ್ಳಲಿದ್ದಾರೆ. ಏಪ್ರಿಲ್ ಮೊದಲ ವಾರದ ಹೊತ್ತಿಗೆ ಆ ಬಗ್ಗೆ ನಿರ್ಧಾರವಾಗಲಿದೆ ಎಂದಿದ್ದಾರೆ.

ಸಂಪುಟ ಪುನಾರಚನೆಗೆ ಸಚಿವಾಕಾಂಕ್ಷಿ ಶಾಸಕರ ದಂಡೇ ಪ್ರಯತ್ನಿಸುತ್ತಿದ್ದು, ನಿರಂತರ ಒತ್ತಡ ಹೇರುತ್ತಲೇ ಇದ್ದಾರೆ. Each title has a different https://parkirpintar.com/are-drinks-free-in-atlantic-city-casinos/ theme and game mechanics.  ಮುಖ್ಯವಾಗಿ ಶೇ.40ರಷ್ಟು ಕಮೀಷನ್ ಮತ್ತು ಭಾರೀ ಭ್ರಷ್ಟಾಚಾರದ ಆರೋಪಗಳನ್ನು ಆಡಳಿತ ಪಕ್ಷದವರೇ ಸಚಿವರ ವಿರುದ್ಧ ಮಾಡುವ ಮೂಲಕ ವರಿಷ್ಠರ ವರೆಗೆ ದೂರು ನೀಡಿದ್ದಾರೆ. ಇಂತಹ ತೀವ್ರ ಅಸಮಾಧಾನದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಬದಲು ಸಂಪುಟ ಪುನರ್ ರಚನೆಯ ಬಗ್ಗೆಯೇ ವರಿಷ್ಠರು ಒಲವು ತೋರಿದ್ದು, ಏಪ್ರಿಲ್‌ನಲ್ಲಿ ಸಂಪುಟ ಪುನರ್ ರಚನೆ ಬಹುತೇಕ ಖಚಿತ ಎನ್ನಲಾಗಿದೆ.

ಸಂಪುಟ ಪುನರ್ ರಚನೆ ವೇಳೆ ಏಳೆಂಟು ಮಂದಿ ಹಿರಿಯರನ್ನು ಕೈಬಿಟ್ಟು ಎಂಟತ್ತು ಮಂದಿ ಹೊಸ ಮುಖಗಳನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ಬೊಮ್ಮಾಯಿ ಉದ್ದೇಶಿಸಿದ್ದು, ಆ ಕುರಿತು ಚರ್ಚಿಸಲು ಅವರು ಸದ್ಯದಲ್ಲೇ ದೆಹಲಿಗೆ ತೆರಳಲಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಸಚಿವ ಸ್ಥಾನ ಪಡೆದಿರುವ ಕೆ ಎಸ್ ಈಶ್ವರಪ್ಪ ಮತ್ತಿತರ ಹಿರಿಯ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು. ಭವಿಷ್ಯದ ನಾಯಕರನ್ನು ರೂಪಿಸುವ ಕೆಲಸ ಆಗಬೇಕು ಎಂಬ ಕೂಗು ತಿಂಗಳುಗಳಿಂದ ಕೇಳಿಬರುತ್ತಲೆ ಇರುವ ಹಿನ್ನೆಲೆಯಲ್ಲಿ ಆ ಬಗ್ಗೆಯೂ ಸಿಎಂ ವರಿಷ್ಠರೊಂದಿಗೆ ತಮ್ಮ ಭೇಟಿ ವೇಳೆ ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ.

ಹಾಗಾಗಿ ಯುಗಾದಿ ಹೊತ್ತಿಗೆ ಬದಲಾವಣೆ ಖಚಿತವಾಗಿದ್ದು, ಸಂಪುಟಕ್ಕೆ ಮೇಜರ್ ಸರ್ಜರಿ ಆಗಲಿದೆ. The arrival of Blockchain with its security and transparency will see more new casinos accepting cryptocurrencies, facilitating faster deposits and quicker https://myhomes.tv/how-much-does-a-casino-worker-make/ withdrawals.

ಈ ನಡುವೆ, ಉಸ್ತುವಾರಿ ಅರುಣ್ ಸಿಂಗ್ ಅವರು ನಾಯಕತ್ವ ಬದಲಾವಣೆ ಇಲ್ಲ ಎಂದು ಹೇಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಊಹಾಪೋಹಗಳು ಗರಿಗೆದರಿವೆ. ಯುಗಾದಿಯ ಆಸುಪಾಸು ಸಂಪುಟ ಪುನರ್ ರಚನೆಯಂತೂ ನಿಶ್ಚಿತ. ಅದರೊಂದಿಗೆ ನಾಯಕತ್ವ ಬದಲಾವಣೆಯೂ ಆದರೂ ಅಚ್ಚರಿ ಇಲ್ಲ. ಮುಖ್ಯವಾಗಿ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನದ ಬದಲಾವಣೆಯ ಸಾಧ್ಯತೆ ಹೆಚ್ಚಿದೆ. ಈಗಾಗಲೇ ನಳೀನ್ ಕುಮಾರ್ ಕಟೀಲು ಅವರ ನಾಯಕತ್ವದ ವೈಫಲ್ಯಗಳ ಬಗ್ಗೆ ಹಲವು ಪ್ರಮುಖರು ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ.

ಮತದಾರರ ಮುಂದೆ ಹೋಗುವಾಗ ಪ್ರಭಾವಿ ಮತ್ತು ದಿಟ್ಟ ನಾಯಕತ್ವವನ್ನು ಮುಂದಿಟ್ಟುಕೊಂಡು ಹೋಗಬೇಕಾಗಿದೆ. ಪ್ರತಿಪಕ್ಷಗಳ ಪಾಳೆಯದಲ್ಲಿ ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಅವರಂಥ ಜನರೊಂದಿಗೆ ಕನೆಕ್ಟ್ ಆಗುವ ಮತ್ತು ದಿಟ್ಟತನದ ನಾಯಕತ್ವಗಳು ಇರುವಾಗ ಬಿಜೆಪಿ ನಳೀನ್ ಕುಮಾರ್ ಅವರಂಥ ಸಪ್ಪೆ ವ್ಯಕ್ತಿತ್ವದ ನಾಯಕರನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದು ಲಾಭ ತರಲಾರದು. ಹಾಗಾಗಿ ಯಡಿಯೂರಪ್ಪ ಅವರನ್ನು ಪಕ್ಷದ ಮುಂಚೂಣಿ ನಾಯಕತ್ವದಿಂದ ಬದಿಗೆ ಸರಿಸಿದ ಬಳಿಕ ಅವರಷ್ಟೇ ಅಲ್ಲದೇ ಇದ್ದರೂ ಅವರ ಸ್ಥಾನ ತುಂಬಬಲ್ಲ ಭರವಸೆ ಹುಟ್ಟಿಸಬಹುದಾದ ನಾಯಕರನ್ನಾದರೂ ಮುಂಚೂಣಿಗೆ ತರಬೇಕಾಗಿದೆ. ಆ ಮೂಲಕ ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ಪ್ರಭಾವಿ ಎನ್ನಬಹುದಾದ ನಾಯಕರೊಬ್ಬರಿಗೆ ಪಕ್ಷದ ಚುಕ್ಕಾಣಿ ನೀಡಬೇಕಿದೆ. ಇಲ್ಲವಾದಲ್ಲಿ ಎಂಥಹದ್ದೇ ಮೋದಿ ಪ್ರಭಾವ ಇದ್ದರೂ ರಾಜ್ಯದಲ್ಲಿ ತಿಣಕಾಡಬೇಕಾಗಬಹುದು ಎಂಬುದನ್ನು ಆ ನಾಯಕರು ವರಿಷ್ಠರಿಗೆ ಮನವರಿಕೆ ಮಾಡಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬದಲಾವಣೆ ಇಲ್ಲದೇ ಇದ್ದರೂ ರಾಜ್ಯಾಧ್ಯಕ್ಷರ ಬದಲಾವಣೆಯಂತೂ ಆಗಲಿದೆ ಎಂಬ ಮಾತುಗಳು ಬಿಜೆಪಿಯ ವಲಯದಲ್ಲೇ ಸದ್ದುಮಾಡತೊಡಗಿವೆ.

ಸಿ ಟಿ ರವಿ, ಬಿ ವೈ ವಿಜಯೇಂದ್ರ ಅವರ ಹೆಸರುಗಳು ಪ್ರಮುಖವಾಗಿ ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಕೇಳಿಬರುತ್ತಿದ್ದು, ಆ ಹಿನ್ನೆಲೆಯಲ್ಲಿಯೇ ವಿಜಯೇಂದ್ರ ಪಂಚರಾಜ್ಯ ಚುನಾವಣೆ ಮುಗಿದ ಮಾರನೇ ದಿನವೇ ದೆಹಲಿಗೆ ದೌಡಾಯಿಸಿದ್ದರು ಎಂದು ಮಾತುಗಳು ಕೇಳಿಬರುತ್ತಿವೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಜಯೇಂದ್ರ, ತಾವು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ; ಸಂಪುಟ ಸೇರ್ಪಡೆಯ ಇಂಗಿತವೂ ತಮಗಿಲ್ಲ ಎಂದು ಅಂತಹ ಮಾತುಗಳನ್ನು ತಳ್ಳಿಹಾಕಿದ್ದಾರೆ. ಆದರೆ, ಕಳೆದ ವರ್ಷದ ಜುಲೈನಲ್ಲಿ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಕ್ಷಣದಿಂದಲೇ ಮಂತ್ರಿಗಿರಿಗೆ ವಿಜಯೇಂದ್ರ ಹೆಸರು ಕೇಳಿಬರುತ್ತಿದೆ ಮತ್ತು ಯಡಿಯೂರಪ್ಪ ಆಪ್ತರಾದ ಶಾಸಕ ಎಂ ಪಿ ರೇಣುಕಾಚಾರ್ಯ ಮತ್ತಿತರರು ಹುಬ್ಬಳ್ಳಿಯ ಬಿಜೆಪಿ ಕಾರ್ಯಕಾರಿಣಿಯೂ ಸೇರಿದಂತೆ ಪಕ್ಷದ ಹಲವು ವೇದಿಕೆಗಳಲ್ಲಿ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಬಹಿರಂಗ ಹೇಳಿಕೆಗಳನ್ನೂ ನೀಡಿದ್ದಾರೆ ಎಂಬುದನ್ನು ಮರೆಮಾಚಲಾಗದು.

ಒಟ್ಟಾರೆ ಮುಂದಿನ ಒಂದೆರಡು ವಾರಗಳಲ್ಲಿ ರಾಜ್ಯ ಸರ್ಕಾರ ಮತ್ತು ಆಡಳಿತ ಪಕ್ಷದ ಮಟ್ಟದಲ್ಲಿ ಮಹತ್ವದ ಬದಲಾವಣೆಯಾಗುವುದಂತೂ ಖಚಿತ. ಆ ಬದಲಾವಣೆಗಳ ಯಾವುವು ಮತ್ತು ಅವುಗಳ ಪರಿಣಾಮ ರಾಜ್ಯ ರಾಜಕಾರಣದ ಮೇಲೆ ಏನಾಗಲಿದೆ ಎಂಬುದಷ್ಟೇ ಸದ್ಯದ ಕುತೂಹಲ.

Tags: ಅರುಣ್ ಸಿಂಗ್ಎಂ ಪಿ ರೇಣುಕಾಚಾರ್ಯಎಚ್ ಡಿ ಕುಮಾರಸ್ವಾಮಿಕರೋನಾಕೆ ಎಸ್ ಈಶ್ವರಪ್ಪಬಿ ಎಸ್ ಯಡಿಯೂರಪ್ಪಬಿ ವೈ ವಿಜಯೇಂದ್ರಬಿಜೆಪಿವಿಜಯೇಂದ್ರಸಂಪುಟ ಪುನರ್ ರಚನೆಸಿ ಟಿ ರವಿಸಿಎಂ ಬೊಮ್ಮಾಯಿಸಿದ್ದರಾಮಯ್ಯ
Previous Post

ಕಾಶ್ಮೀರ್ ಫೈಲ್ಸ್ ಆಯ್ತು ಈಗ ‘ಲಖಿಂಪುರ್ ಫೈಲ್ಸ್’ ಮಾಡಿ : ಅಖಿಲೇಶ್ ಯಾದವ್

Next Post

ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ

Related Posts

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
0

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ, ನಾನೇ ಅಧ್ಯಕ್ಷನಾಗಿರುತ್ತೇನೆಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ...

Read moreDetails
ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

October 23, 2025
Next Post
ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ

ಪಾಪಪ್ರಜ್ಞೆ ಇದ್ದರೆ ತೆರೆದು ನೋಡಲು ನೂರಾರು ಫೈಲುಗಳಿವೆ

Please login to join discussion

Recent News

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ
Top Story

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

by ಪ್ರತಿಧ್ವನಿ
October 24, 2025
ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ
Top Story

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

by ಪ್ರತಿಧ್ವನಿ
October 23, 2025
BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

HD Kumarswamy : ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆಗೆ HDK ಸ್ಪಷ್ಟನೆ

October 24, 2025
ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

ರೇಣುಕಾಸ್ವಾಮಿ ಕೊಲೆ‌ ಆರೋಪಿ ಪ್ರದೋಶ್ ತಂದೆ ನಿಧನ

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada