• Home
  • About Us
  • ಕರ್ನಾಟಕ
Thursday, June 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

‘ಫಕೀರ’ರ ನೇತೃತ್ವದ ಬಿಜೆಪಿ ಪಕ್ಷ ‘ಅಮೀರ’ರ ಪಕ್ಷವಾಗಿ ರೂಪಾಂತರಗೊಂಡಿದ್ದು ಹೇಗೆ?

ಪ್ರತಿಧ್ವನಿ by ಪ್ರತಿಧ್ವನಿ
January 29, 2022
in ದೇಶ, ವಾಣಿಜ್ಯ
0
‘ಫಕೀರ’ರ ನೇತೃತ್ವದ ಬಿಜೆಪಿ ಪಕ್ಷ ‘ಅಮೀರ’ರ ಪಕ್ಷವಾಗಿ ರೂಪಾಂತರಗೊಂಡಿದ್ದು ಹೇಗೆ?
Share on WhatsAppShare on FacebookShare on Telegram

ನಾನು ಫಕೀರ ಕಣ್ರೀ… ದೇಶದ ಜನ ಬೇಡಾ ಅಂದಾಗ ಜೋಳಿಗೆ ಹಾಕೊಂಡು ಹೋಗ್ತೀನಿ ಅಂತಾ ಪ್ರಧಾನಿ ನರೇಂದ್ರ ಮೋದಿ ಹೇಳಿರಬಹುದು. ಆದರೆ, ಅವರು ಪ್ರತಿ ನಿಧಿಸುತ್ತಿರುವ ಪಕ್ಷ ಬಿಜೆಪಿ ಮಾತ್ರ ‘ಫಕೀರ’ರ ಪಕ್ಷವಲ್ಲ, ‘ಅಮೀರ’ರ ಪಕ್ಷ ಎಂಬುದನ್ನು ಸಾಬೀತು ಮಾಡಿದೆ. ದೇಶದಲ್ಲಿ ಬಿಜೆಪಿ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ದೇಶದ ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿಗಳ ಪೈಕಿ ಬಿಜೆಪಿ ಶೇ.69.37 ರಷ್ಟು ಆಸ್ತಿಯನ್ನು ಹೊಂದಿದ್ದು ಅಗ್ರಪಾಲು ಪಡೆದುಕೊಂಡಂತಿದೆ.

ADVERTISEMENT

ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಚುನಾವಣಾ ಆಯೋಗಕ್ಕೆ ಮತ್ತು ಆದಾಯತೆರಿಗೆ ಇಲಾಖೆಗೆ ಸಲ್ಲಿಸಿರುವ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನಾಧರಿಸಿ 2019-20ನೇ ಸಾಲಿನ ಆಸ್ತಿವಿವರಗಳ ವರದಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ (ಎಡಿಆರ್) ಸಿದ್ಧಪಡಿಸಿದೆ.

ವಿವಿಧ ರಾಜಕೀಯ ಪಕ್ಷಗಳ ಆಸ್ತಿಗಳ ಕುರಿತಾದ ವಿಸ್ತೃತ ವರದಿಯಲ್ಲಿ ತ್ವರಿತಗತಿಯಲ್ಲಿ ಬಿಜೆಪಿ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿರುವ ಬಗ್ಗೆ ಅಂಕಿಅಂಶಗಳು ನೀಡಿದೆ.

2019-20ನೇ ಹಣಕಾಸು ವರ್ಷದಲ್ಲಿ ಬಿಜೆಪಿ ₹ 4,847.78 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದೆ, ಇದು ಎಲ್ಲಾ ರಾಜಕೀಯ ಪಕ್ಷಗಳಿಗಿಂತ ಅತ್ಯಧಿಕವಾಗಿದೆ, ನಂತರದ ಸ್ಥಾನದಲ್ಲಿ ಬಿಎಸ್ಪಿ ₹ 698.33 ಕೋಟಿ ಮತ್ತು ಕಾಂಗ್ರೆಸ್ ₹ 588.16 ಕೋಟಿ ಆಸ್ತಿ ಹೊಂದಿವೆ.
ಎಡಿಆರ್ ಮಾಹಿತಿ ಪ್ರಕಾರ, 2019-20ನೇ ವಿತ್ತೀಯ ವರ್ಷದಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿ ಕ್ರಮವಾಗಿ ₹ 6,988.57 ಕೋಟಿ ಮತ್ತು ₹ 2,129.38 ಕೋಟಿ.

44 ಪ್ರಾದೇಶಿಕ ಪಕ್ಷಗಳ ಪೈಕಿ ಅಗ್ರ 10 ಪಕ್ಷಗಳ ಆಸ್ತಿ ಮೌಲ್ಯ ₹ 2028.715 ಕೋಟಿ ಅಥವಾ ಅವೆಲ್ಲವೂ ಸೇರಿ ಘೋಷಿಸಿದ ಒಟ್ಟು ಮೊತ್ತದ ಶೇ.95.27ರಷ್ಟು. ಪ್ರಾದೇಶಿಕ ಪಕ್ಷಗಳ ಪೈಕಿ, ಸಮಾಜವಾದಿ ಪಕ್ಷವು ₹ 563.47 ಕೋಟಿ (ಶೇ. 26.46), ಟಿಆರ್ಎಸ್ ₹ 301.47 ಕೋಟಿ ಮತ್ತು ಎಐಎಡಿಎಂಕೆ ₹ 267.61 ಕೋಟಿ ಮೌಲ್ಯದ ಆಸ್ತಿಗಳನ್ನು ಘೋಷಿಸಿಕೊಂಡಿವೆ.

2019-20 ವಿತ್ತೀಯ ವರ್ಷದಲ್ಲಿ ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿಯಲ್ಲಿ ₹1,639.51 ಕೋಟಿ (ಶೇ. 76.99) ರಷ್ಟು ದೊಡ್ಡ ಪಾಲನ್ನು ಫಿಕ್ಸೆಡ್ ಡೆಪಾಸಿಟ್ಗಳು/ಎಫ್ಡಿಆರ್ ರೂಪದಲ್ಲಿಟ್ಟಿವೆ. ಎಫ್ಡಿಆರ್/ಫಿಕ್ಸೆಡ್ ಡಿಪಾಸಿಟ್ ರೂಪದಲ್ಲಿ ಬಿಜೆಪಿ ಮತ್ತು ಬಿಎಸ್ಪಿ ಕ್ರಮವಾಗಿ ₹ 3,253.00 ಕೋಟಿ ಮತ್ತು ₹ 618.86 ಕೋಟಿಗಳನ್ನು ಘೋಷಿಸಿವೆ,, ಕಾಂಗ್ರೆಸ್ ₹ 240.90 ಕೋಟಿ ಘೋಷಿಸಿದೆ.

ಪ್ರಾದೇಶಿಕ ಪಕ್ಷಗಳ ಪೈಕಿ ಎಸ್ಪಿ (434.219 ಕೋಟಿ ರೂ.), ಟಿಆರ್ಎಸ್ (256.01 ಕೋಟಿ ರೂ.), ಎಐಎಡಿಎಂಕೆ ( 246.90 ಕೋಟಿ), ಡಿಎಂಕೆ (162.425 ಕೋಟಿ), ಶಿವಸೇನೆ (148.46 ಕೋಟಿ), ಬಿಜೆಡಿ (118.425 ಕೋಟಿ. ) ಫಿಕ್ಸೆಡ್ ಡೆಪಾಸಿಟ್ಗಳು/ಎಫ್ಡಿಆರ್ ಘೋಷಿಸಿಕೊಂಡಿವೆ.

2019-20 ವಿತ್ತೀಯ ವರ್ಷದಲ್ಲಿ ಏಳು ರಾಷ್ಟ್ರೀಯ ಮತ್ತು 44 ಪ್ರಾದೇಶಿಕ ಪಕ್ಷಗಳು ಘೋಷಿಸಿದ ಒಟ್ಟು ಹೊಣೆಗಾರಿಕೆಗಳು (ಸಾಲ ಇತ್ಯಾದಿ) ₹ 134.93 ಕೋಟಿಗಳಾಗಿವೆ.

ರಾಷ್ಟ್ರೀಯ ರಾಜಕೀಯ ಪಕ್ಷಗಳು 2019-20ನೇ ಹಣಕಾಸು ವರ್ಷದಲ್ಲಿ ಒಟ್ಟು ₹ 74.27 ಕೋಟಿ ಹೊಣೆಗಾರಿಕೆಗಳನ್ನು ಘೋಷಿಸಿವೆ. ರಾಷ್ಟ್ರೀಯ ಪಕ್ಷಗಳು ಸಾಲಗಳ ಅಡಿಯಲ್ಲಿ ₹ 4.26 ಕೋಟಿ ಮತ್ತು ಇತರ ಹೊಣೆಗಾರಿಕೆಗಳ ಅಡಿಯಲ್ಲಿ ₹ 70.01 ಕೋಟಿ ಘೋಷಿಸಿವೆ ಮತ್ತು 2019-20 ರಲ್ಲಿ ಕಾಂಗ್ರೆಸ್ ₹ 49.55 ಕೋಟಿ (ಶೇ 66.72) ಗರಿಷ್ಠ ಒಟ್ಟು ಹೊಣೆಗಾರಿಕೆಗಳನ್ನು ಘೋಷಿಸಿದೆ. ನಂತರದ ಸ್ಥಾನದಲ್ಲಿ ಎಐಟಿಸಿ ₹ 11.32 ಕೋಟಿ (ಶೇ 15.24 ರಷ್ಟು) ಘೋಷಿಸಿದೆ.

ಪ್ರಾದೇಶಿಕ ಪಕ್ಷಗಳು ಸಾಲಗಳ ಅಡಿಯಲ್ಲಿ ₹ 30.29 ಕೋಟಿ ಮತ್ತು ಇತರ ಹೊಣೆಗಾರಿಕೆಗಳ ಅಡಿಯಲ್ಲಿ ₹ 30.37 ಕೋಟಿಗಳನ್ನು ಘೋಷಿಸಿದ್ದವು. 2019-20 ವಿತ್ತೀಯ ವರ್ಷದಲ್ಲಿ ಟಿಡಿಪಿಯು ₹ 30.342 ಕೋಟಿ (ಶೇ. 50.02) ಗರಿಷ್ಠ ಒಟ್ಟು ಹೊಣೆಗಾರಿಕೆಗಳನ್ನು ಘೋಷಿಸಿದೆ. ನಂತರ ಡಿಎಂಕೆ ಪ್ರತಿ ₹ 8.05 ಕೋಟಿ (ಶೇ.13.27) ಘೋಷಿಸಿದೆ.

Tags: BJPCongress PartyCovid 19ಅಮೀರಕರೋನಾಕೋವಿಡ್-19ನರೇಂದ್ರ ಮೋದಿಫಕೀರಬಿಜೆಪಿ
Previous Post

Punjab Election 2022 | ಕಾಂಗ್ರೆಸಿನ ಪಂಜಾಬ್ ಸಿಎಂ ಅಭ್ಯರ್ಥಿಯಾಗಿ ಚರಣಜಿತ್ ಸಿಂಗ್ ಚನ್ನಿ ಆಯ್ಕೆ ಸಾಧ್ಯತೆ!

Next Post

ಓಮಿಕ್ರಾನ್ ಗಿಂತಲೂ ಹೆಚ್ಚು ಅಪಾಯಕಾರಿ ರೂಪಾಂತರಿ ವೈರೆಸ್ ಬರಬಹುದು : WHO ಎಚ್ಚರಿಕೆ

Related Posts

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
0

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..! - ಮತ್ತೆ ಬಡಾಯಿ ಕೊಚ್ಚಿಕೊಂಡ ಡೊನಾಲ್ಡ್ ಟ್ರಂಪ್ ! ಪಹಲ್ಗಾಮ್ ಉಗ್ರರ ದಾಳಿಗೆ (Pahalgam terror attack) ಪ್ರತಿಯಾಗಿ...

Read moreDetails
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ಭಾರತ ಮೂರನೇ ಅತಿದೊಡ್ಡ ಮಾರುಕಟ್ಟೆಪ್ಯಾರಿಸ್ ಏರ್ ಫೋರಂ ಚರ್ಚಾಕೂಟದಲ್ಲಿ ಪ್ರಿಯಾಂಕ್ ಖರ್ಗೆ

ಭಾರತ ಮೂರನೇ ಅತಿದೊಡ್ಡ ಮಾರುಕಟ್ಟೆಪ್ಯಾರಿಸ್ ಏರ್ ಫೋರಂ ಚರ್ಚಾಕೂಟದಲ್ಲಿ ಪ್ರಿಯಾಂಕ್ ಖರ್ಗೆ

June 16, 2025
ಅಧಿಕ ಪವನ ವಿದ್ಯುತ್‌ ಸಾಮರ್ಥ್ಯ- ಕರ್ನಾಟಕಕ್ಕೆ ಪ್ರಥಮ ಸ್ಥಾನ

ಅಧಿಕ ಪವನ ವಿದ್ಯುತ್‌ ಸಾಮರ್ಥ್ಯ- ಕರ್ನಾಟಕಕ್ಕೆ ಪ್ರಥಮ ಸ್ಥಾನ

June 15, 2025
Next Post
ಓಮಿಕ್ರಾನ್ ಗಿಂತಲೂ ಹೆಚ್ಚು ಅಪಾಯಕಾರಿ ರೂಪಾಂತರಿ ವೈರೆಸ್ ಬರಬಹುದು : WHO ಎಚ್ಚರಿಕೆ

ಓಮಿಕ್ರಾನ್ ಗಿಂತಲೂ ಹೆಚ್ಚು ಅಪಾಯಕಾರಿ ರೂಪಾಂತರಿ ವೈರೆಸ್ ಬರಬಹುದು : WHO ಎಚ್ಚರಿಕೆ

Please login to join discussion

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !
Top Story

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

by Chetan
June 19, 2025
ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .
Top Story

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ ಅವರ “ಪೆನ್ ಡ್ರೈವ್” ಚಿತ್ರ ಜುಲೈ 4 ರಂದು ಬಿಡುಗಡೆ .

by ಪ್ರತಿಧ್ವನಿ
June 18, 2025
ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

ಭಾರತ V/S ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ..!ಡೊನಾಲ್ಡ್ ಟ್ರಂಪ್ !

June 19, 2025
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!