ರಾಜ್ಯದಲ್ಲಿ ಜನ ಸಾಮಾನ್ಯರ ವಿಚಾರ ಹಾಗಿರಲಿ, ಜನ ಪ್ರತಿನಿಧಿಗಳಿಗೆ ಭದ್ರತೆ ಇಲ್ಲದಂತಾಗಿದೆ. ಪೊಲೀಸ್ ಇಲಾಖೆಯ (police department) ನಡವಳಿಕೆ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಘಟನೆ ತಣ್ಣಗಾಗುವ ಮೊದಲೇ ಮತ್ತೊಂದು ಘಟನೆಗಳು ನಡೆಯುತ್ತಲ್ಲೇ ಇದೆ. ಹೀಗಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್‌ಗೆ (Dr G parameshwar) ಈ ಘಟನೆಗಳು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ವಿಧಾನಪರಿಷತ್ ನಲ್ಲಿ ನಡೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ (Lakshmi hebbalkar) ಹಾಗೂ ಮಾಜಿ ಸಚಿವ ಸಿ.,ಟಿ ರವಿ (Ct ravi) ಜಟಾಪಟಿ ತಾರಕಕ್ಕೇರಿರುವ ಹೊತ್ತಲ್ಲೇ, ಸಿಟಿ ರವಿ ಅವರನ್ನು ಪೊಲೀಸರು ನಡೆಸಿಕೊಂಡು ರೀತಿಯ ಬಗ್ಗೆ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಶಾಸಕ ಮುನಿರತ್ನ (MLA Muniratna) ಮೇಲೆ ಮೊಟ್ಟೆ ಎಸೆತ ಪ್ರಕರಣ ಮುನ್ನಲೆಗೆ ಬಂದಿದೆ.
ಈ ಬಗ್ಗೆ ವಿಪಕ್ಷ ನಾಯಕರು ಸರ್ಕಾರದ ಮೇಲೆ ಹಾಗೂ ಗೃಹ ಸಚಿವರ ಮೇಲೆ ಟೀಕಾ ಪ್ರಹಾರ ನಡೆಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ ಎಂದು ಟೀಕಿಸ್ತಿದ್ದಾರೆ. ಇದರಿಂದಾಗಿ ಡಾ.ಜಿ.ಪರಮೇಶ್ವರ್‌ಗೆ ಮತ್ತಷ್ಟು ತಲೆ ನೋವು ಶುರುವಾಗಿದೆ.
ಕೇವಲ ಬಾಯಿ ಮಾತಿಗಷ್ಟೇ ನಾನು ಸಮರ್ಥನಿದ್ದೇನೆ ಎಂದು ಹೇಳಿಕೊಳ್ಳುವ ಗೃಹಸಚಿವರುಪೊಲೀಸ್ ಇಲಾಖೆಯನ್ನು ನಿರ್ವಹಿಸುವಲ್ಲಿ ವಿಫಲರಾದ್ರ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿದ್ದು ಈ ಬಗ್ಗೆ ಸ್ವತಃ ಅವರೇ ಉತ್ತರ ನೀಡಬೇಕಿದೆ.