• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪ್ರತಾಪ್ ಸಿಂಹ ನಾನು ಚೆನ್ನಾಗಿಯೇ ಇದ್ದೀನಪ್ಪ, ನಿನಗೆ ಏನಾಗಿದೆ : ಹೆಚ್‌.ವಿಶ್ವನಾಥ್‌

Any Mind by Any Mind
November 26, 2022
in ಕರ್ನಾಟಕ, ರಾಜಕೀಯ
0
ಪ್ರತಾಪ್ ಸಿಂಹ ನಾನು ಚೆನ್ನಾಗಿಯೇ ಇದ್ದೀನಪ್ಪ, ನಿನಗೆ ಏನಾಗಿದೆ : ಹೆಚ್‌.ವಿಶ್ವನಾಥ್‌
Share on WhatsAppShare on FacebookShare on Telegram

ಟಿಪ್ಪು ನಿಜ ಕನಸುಗಳು ಕೃತಿ ಹಾಗೂ ನಾಟಕದ ವಿಚಾರವಾಗಿ ತಮ್ಮ ವಾಗ್ದಾಳಿಯನ್ನ ಮುಂದುವರೆಸಿರುವ ಬಿಜೆಪಿ ನಾಯಕ ಹೆಚ್‌.ವಿಶ್ವನಾಥ್‌ ಸಂಸದ ಪ್ರತಾಪ್‌ ಸಿಂಹ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ತಾಪ್ ಸಿಂಹ ನಾನು ಚೆನ್ನಾಗಿಯೇ ಇದ್ದೀನಪ್ಪ, ನಿನಗೆ ಏನಾಗಿದೆ? ನಿನಗೆ ರೋಗಗಳು ಬಂದಿವೆ‌.ಧರ್ಮ, ಜಾತಿ, ಹಿಂದುತ್ವದ ರೋಗಗಳು, ಜನರ ತಲೆ ಕೆಡಿಸುವ ರೋಗ ಎಲ್ಲವೂ ನಿನಗೇ ಬಂದಿದೆಯಲ್ಲಪ್ಪ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿಯ ತತ್ವ ಸಿದ್ದಾಂತಗಳು ಚೆನ್ನಾಗಿವೆ ಆದರೆ ಬಿಜೆಪಿಯನ್ನು ಮುನ್ನಡೆಸುತ್ತಿರುವವರು ಸರಿಯಿಲ್ಲ ಎಲ್ಲ ಪಕ್ಷಗಳ ಸಿದ್ದಾಂತಗಳೂ ಚೆನ್ನಾಗಿವೆ.ಬಿಜೆಪಿಯನ್ನು ಮುನ್ನಡೆಸುತ್ತಿರುವರ ನಡವಳಿಕೆ ಸರಿಯಿಲ್ಲ, ಮನಸ್ಥಿತಿ ಚೆನ್ನಾಗಿಲ್ಲ ನಾನೊಬ್ಬ ಸಿದ್ದಾಂತಿ ಹಾಗಾಗಿ ಈ ಮಾತು ಹೇಳುತ್ತಿದ್ದೇನೆ ಎಂದು ಸ್ವಪಕ್ಷದ ವಿರುದ್ದ ತಮ್ಮ ಟೀಕಾಪ್ರಹಾರವನ್ನ ಮುಂದುವರೆಸಿದ್ದಾರೆ.

ನನಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ನ ಬಹುತೇಕ ನಾಯಕರು ಆಪ್ತರಾಗಿದ್ದಾರೆ. ರಾಜಕೀಯ ಬೇರೆ ವೈಯಕ್ತಿಕ ಸಂಬಂಧ ಬೇರೆ ಎಂದು ಕಾಂಗ್ರೆಸ್‌ ಬಗೆಗಿನ ಮೃಧು ಧೋರಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಸಿದ್ದರಾಮಯ್ಯ ಕೋಲಾರ, ವರುಣ ಎಲ್ಲಿಂದ ನಿಂತರೂ ಗೆಲ್ತಾರೆ. ಅದರಲ್ಲಿ ಯಾವುದೇ ಅನುಮಾನ ಬೇಡ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ಮೈಸೂರು ನಗರದಲ್ಲಿರುವ ರಂಗಾಯಣ ಒಂದು ಸಾಂಸ್ಕೃತಿಕ ತಾಣ.ರಂಗಾಯಣ ಧರ್ಮರಹಿತವಾಗಿರಬೇಕು.ಕಾರ್ಯಪ್ಪ ಹೆಸರು ಕೊಡಗಿಗೇ ಅವಮಾನ.ಆತ ಅಡ್ನಾಡಿ ಕಾರ್ಯಪ್ಪ.ಎಂ ಎಲ್ ಸಿ ಆಗಬೇಕೆಂದು ಅರ್ ಎಸ್ ಎಸ್ ನವರ ಜೊತೆ ಅಡ್ಡಂಡ ಕಾರ್ಯಪ್ಪ ಸೇರಿದ್ದಾನೆ.ವಾಮಮಾರ್ಗದ ಮೂಲಕ ಎಂ ಎಲ್ ಸಿ ಆಗಲು ಅಡ್ಡಂಡ ಕಾರ್ಯಪ್ಪ ಈ ರೀತಿ‌ ಮಾಡ್ತಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಅಡ್ಡಂಡ ಕಾರ್ಯಪ್ಪ ಜೊತೆ ಎಸ್ ಎಲ್ ಭೈರಪ್ಪ ಸೇರಿರೋದು ವೇದನೆಯ ಸಂಗತಿ ಎತ್ತರದ ವ್ಯಕ್ತಿ ಅವರು, ಅವರಿಗೆ ಅರ್ಜೆಂಟ್ ಜ್ಞಾನಪೀಠ ಪ್ರಶಸ್ತಿ ಬೇಕು ಕೊಟ್ಟುಬಿಡಿ ಅಂತ ವ್ಯಂಗ್ಯ ವಾಡಿದ್ದಾರೆ.

ಸರ್ಕಾರ ಆಡಳಿತ ಕುಸಿದಿದೆ.ಯಾವುದೇ ಇಲಾಖೆಗಳಲ್ಲೂ ಒಂದು ರಿವ್ಯೂ ಮೀಟಿಂಗ್ ಆಗುತ್ತಿಲ್ಲ.ಮುಖ್ಯಮಂತ್ರಿ ಮೂಗಿನ ಅಡಿಯಲ್ಲಿ ಇಷ್ಟೊಂದು ದೊಡ್ಡ ಭ್ರಷ್ಟಾಚಾರ ಆಗುತ್ತಿದೆ.ಮುಖ್ಯಮಂತ್ರಿ ಬಳಿಯಲ್ಲಿ ಯಾವ ಖಾತೆಗಳು ಇರುತ್ತವೋ ಆ ಇಲಾಖೆ ಸತ್ತಂತೇಯೇ. ಮುಖ್ಯಮಂತ್ರಿ ಬಳಿ ಹಲವು ಪ್ರಮುಖ ಖಾತೆಗಳಿವೆ.ಹಣಕಾಸು ಇಲಾಖೆಗೆ ಫುಲ್ ಫ್ಲೆಡ್ಜ್ ಮಂತ್ರಿ ಇರಬೇಕು.ಸರ್ಕಾರದ 38 ಇಲಾಖೆಗಳೂ ಭ್ರಷ್ಟಾಚಾರ ಮುಕ್ತವಾಗಿಲ್ಲ.ಸಾವಿಲ್ಲದ ಮನೆಯಲ್ಲಿ ಸಾಸಿವೆ ತೆಗೆದುಕೊಂಡು ಬಾ ಎಂದು ಬುದ್ದ ಹೇಳಿದಂತಾಗಿದೆ ಭ್ರಷ್ಟಾಚಾರಅಧಿಕಾರಿಗಳ ಬಾಯಲ್ಲೂ ಸುಳ್ಳನ್ನು ಹೇಳಿಸುತ್ತಿದ್ದಾರೆ ಎಂದು ತಮ್ಮದೇ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮೈಸೂರು; ಜಿಂಕೆ ಬೇಟೆಯಾಡಿದವರ ಬಂಧನ

Next Post

ರೆಡಿ ಆನ್ ವೀಲ್ಸ್ ಅಪ್ಲಿಕೇಶನ್‌ ಅನಾವರಣ ಮಾಡಿದ ಧ್ರುವ ಸರ್ಜಾ

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
ಕರ್ನಾಟಕ

ದೆಹಲಿ ಹೈಕಮಾಂಡ್ ಫಾರ್ಮುಲಾ ಫೈನಲ್? ಸಿಎಂ ಬದಲಾವಣೆ ಒಪ್ಪಲು ಇಲ್ಲಿದೆ ಮುಖ್ಯ ಕಾರಣ 

by ಪ್ರತಿಧ್ವನಿ
May 27, 2026
0

ಐದು ರಾಜ್ಯಗಳ ಚುನಾವಣೆ ಬಳಿಕ ಇದೀಗ ದೇಶದ ರಾಜಕೀಯ ಗಮನ ಸಂಪೂರ್ಣವಾಗಿ ಕರ್ನಾಟಕದತ್ತ ತಿರುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಗಳು ರಾಜಕೀಯ ವಲಯದಲ್ಲಿ ಭಾರೀ...

Read moreDetails
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ಮೇಲೆ ರಾಜ್ಯದ ಕಣ್ಣು;  ಉಪಹಾರ ಕೂಟದಲ್ಲೇ ಅಧಿಕಾರ ಹಸ್ತಾಂತರ ಫೈನಲ್?

May 27, 2026
ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

ದೆಹಲಿ ಸಭೆಯ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ; ಇಂದು ಸಿದ್ದರಾಮಯ್ಯ ಮಹತ್ವದ ಘೋಷಣೆ?

May 27, 2026
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
Next Post
ರೆಡಿ ಆನ್ ವೀಲ್ಸ್ ಅಪ್ಲಿಕೇಶನ್‌ ಅನಾವರಣ ಮಾಡಿದ ಧ್ರುವ ಸರ್ಜಾ

ರೆಡಿ ಆನ್ ವೀಲ್ಸ್ ಅಪ್ಲಿಕೇಶನ್‌ ಅನಾವರಣ ಮಾಡಿದ ಧ್ರುವ ಸರ್ಜಾ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada