ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್(25) ಕಾಣೆಯಾಗಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಕಾಣೆಯಾದ ಐದು ದಿನಗಳ ಬಳಿಕ ಅವರ ಶವ ತುಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ.
ಚಂದ್ರಶೇಖರ್ ಕಾರು ಹೊನ್ನಾಳಿಯ ಕಡದಕಟ್ಟೆ ಗ್ರಾಮದ ತುಂಗಾ ಕಾಲುವೇ ಬಳಿ ಸಂಚರಿಸಿರುವುದು ಕಂಡು ಬಂದಿದ್ದು ಕಾರು ಕಾಲುವೆಗೆ ಬಿದ್ದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.
ಭಾನುವಾರ ವಿನಯ್ ಗುರೂಜಿ ಬೇಟಿಗೆಂದು ತೆರಳಿದ್ದ ಚಂದ್ರಶೇಖರ್ ಶಿವಮೊಗ್ಗ ಮೂಲಕ ಹೊನ್ನಾಳಿಗೆ ವಾಪಸಾಗುವ ವೇಳೆ ನಾಪತ್ತೆಯಾಗಿದ್ದರು.