ರಾಯಚೂರು ಜಿಲ್ಲೆಯನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸುವಂತೆ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್, ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಯಚೂರಿನಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಸರ್ಕಾರದ ಸಚಿವ ಪ್ರಭು ಚೌಹಾಣ್ ಅವರ ಮುಂದೆ ಒಂದು ಪ್ರಕರಣವನ್ನು ಮಂಡಿಸಿದ ಶಿವರಾಜ್ ಪಾಟೀಲ್, ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ ಮತ್ತು ಧಾರವಾಡವನ್ನು ಅಭಿವೃದ್ಧಿಪಡಿಸುತ್ತಿದೆ ಆದರೆ ರಾಯಚೂರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದ್ದಾರೆ.
ರಾಯಚೂರಿನ ಸಭೆಯೊಂದರಲ್ಲಿ ಮಾತಾಡಿದ ಶಿವರಾಜ್ ಪಾಟೀಲ್, ರಾಯಚೂರು ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಕಳವಳಗಳನ್ನು ಪ್ರಸ್ತಾಪಿಸಿ, ತೆಲಂಗಾಣದೊಂದಿಗೆ ವಿಲೀನಗೊಂಡರೆ ರಾಯಚೂರು ಪ್ರಗತಿಯಾಗುತ್ತದೆ ಎಂದು ಹೇಳಿದ್ದಾರೆ. ಈಗ ಶಾಸಕರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಂಎಯುಡಿ ಸಚಿವ ಕೆಟಿ ರಾಮರಾವ್ ರೀಟ್ವೀಟ್ ಮಾಡಿ, “Validation for Telangana coming from across the border; ಕರ್ನಾಟಕ ಬಿಜೆಪಿ ಶಾಸಕರು ರಾಯಚೂರು ಅನ್ನು ತೆಲಂಗಾಣದಲ್ಲಿ ವಿಲೀನಗೊಳಿಸಬೇಕು ಎಂದು ಹೇಳಿದ್ದಾರೆ ಮತ್ತು ಅಲ್ಲಿಯ ಜನರು ಈ ಸಲಹೆಯನ್ನು ಸ್ವಾಗತಿಸುತ್ತಾರೆ ಎಂದು ಹೇಳಿದ್ದಾರೆ.
ಈ ಹಿಂದೆ, ಮಹಾರಾಷ್ಟ್ರದ ಹಲವು ಗ್ರಾಮಗಳು ಕೂಡ ತೆಲಂಗಾಣದೊಂದಿಗೆ ವಿಲೀನಗೊಳ್ಳಬೇಕೆಂದು ಬೇಡಿಕೆ ಇಟ್ಟಿದ್ದವು.
ಕೆಟಿಆರ್ ಅವರ ಟ್ವೀಟ್‌ಗೆ ಉತ್ತರಿಸಿದ ನೆಟ್ಟಿಗರು, ರಾಯಚೂರಿನ ಹಲವಾರು ಜನರು ರಾಯಚೂರನ್ನು ತೆಲಂಗಾಣದೊಂದಿಗೆ ವಿಲೀನಗೊಳ್ಳಲು ಬಯಸಿದ್ದಾರೆ, ಇದರಿಂದ ಅವರು ರೈತ ಬಂಧು, ರೈತ ಭಿಮಾ, ಆಸರೆಪಿಂಚಣಿ, ಕಲ್ಯಾಣ ಲಕ್ಷ್ಮಿ ಮತ್ತು ಇತರ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.