ಮುಸ್ಲಿಂ ಸಮಾವೇಶವೊಂದರಲ್ಲಿ ಐಸಿಸ್ ಸಂಘಟನೆ ಜೊತೆಗೆ ಸಂಪರ್ಕವಿರೋ ವ್ಯಕ್ತಿ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಕುಳಿತಿದ್ದ ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸೋಮವಾರ ನಡೆದಿದ್ದ ಮುಸ್ಲಿಂ ಸಮಾವೇಶದ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಕ್ಕದಲ್ಲೇ ಐಎಸ್ಐಎಸ್ ಸಂಘಟನೆ ನಂಟಿರುವ ವ್ಯಕ್ತಿಯೊಬ್ಬ ಕುಳಿತಿದ್ದ. ಈ ಬಗ್ಗೆ ಸಿಎಂಗೆ ಮಾಹಿತಿ ಇರಲಿಲ್ವಾ ಅಂತ ಬಿಜೆಪಿ ಶಾಸಕ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಫೋಟೋ ಬಿಡುಗಡೆ ಮಾಡಿರುವ ಯತ್ನಾಳ್, ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿರುವ ಶಾಸಕ ಯತ್ನಾಳ್, ವಾರದ ಬಳಿಕ ಎಲ್ಲವನ್ನೂ ವಿಸ್ತೃತವಾಗಿ ಬಹಿರಂಗಪಡಿಸುತ್ತೇನೆ ಅಂತ ಬಾಂಬ್ ಸಿಡಿಸಿದ್ದಾರೆ.