ರಾಜ್ಯದಲ್ಲಿ ಬೆಲೆ ಏರಿಕೆ (Price hike) ಖಂಡಿಸಿ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು (Bjp leaders) ಅಹೋರಾತ್ರಿ ಧರಣಿಗೆ ಮುಂಗಾಗಿದ್ದು, ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಮಧ್ಯಾಹ್ನಕ್ಕೆ ಅಹೋರಾತ್ರಿ ಹೋರಾಟ ಕೊನೆಗೊಳಿಸಲು ನಿರ್ಧಾರ ಮಾಡಿದ್ದು ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲಿರುವ ಬಿಜೆಪಿ ಪ್ಲಾನ್ ಮಾಡಿ. ಹೀಗಾಗಿ ಇಂದು ಸಿಎಂ(Cm siddaramaiah) ಮನೆ ಮುತ್ತಿಗೆ ಯತ್ನ ಹಾಗೂ ರಸ್ತೆ ತಡೆಗೆ ಬಿಜೆಪಿ ನಿರ್ಧಾರ ಮಾಡಿದೆ.

ಫ್ರೀಡಂ ಪಾರ್ಕ್ (Freedom park) ಸಮೀಪದ ಶೇಷಾದ್ರಿ ರಸ್ತೆ ತಡೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ನಾಯಕರು ಸಿದ್ಧವಾಗಿದ್ದು,ನೂರಾರು ಕಾರ್ಯಕರ್ತರೊಂದಿಗೆ ರಸ್ತೆಗಿಳಿದು ಸಿಎಂ ಮನೆ ಕಡೆ ತೆರಳಲು ಪ್ಲ್ಯಾನ್ ಮಾಡಿದ್ದಾರೆ.
ಇನ್ನು ನಿನ್ನೆ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದು,ಎಲ್ಲಿವರೆಗೂ ಹೋರಾಟ.. ಸರ್ಕಾರ ಬೆಲೆ ಏರಿಕೆ ವಾಪಸ್ ಪಡೆಯೋವರೆಗೂ ಹೋರಾಟ ಅಂತ ಗುಟುರು ಹಾಕಿದ್ದಾರೆ.ನಿನ್ನೆ ಬೆಳಗ್ಗೆಯಿಂದಲೂ ಬೆಲೆ ಏರಿಕೆ ಖಂಡಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟಿಸಿದ ಬಿಜೆಪಿ ನಾಯಕರು ರಾತ್ರಿಯಾಗುತ್ತಿದ್ದಂತೆ ಹಾಸಿಗೆಗೆ ಒರಗಿ ರೆಸ್ಟ್ ಮೂಡ್ ಗೆ ಜಾರಿದ್ರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಎಂಎಲ್‌ಸಿ ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಶ್ರೀರಾಮುಲು ಸೇರಿ ಹಲವು ಬಿಜೆಪಿ ನಾಯಕರು ಫ್ರೀಡಂ ಪಾರ್ಕ್‌ನಲ್ಲೇ ನಿದ್ದೆಗೆ ಜಾರಿದ್ರು.ಬಿಜೆಪಿ ನಾಯಕರಿಗೆ ಮಲಗಲು ಬೆಡ್ ಶೀಟ್, ಹಾಸಿಗೆ,ದಿಂಬಿನ ವ್ಯವಸ್ಥೆ ಮಾಡಲಾಗಿತ್ತು.












