ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ದೊಡ್ಡ ದೊಡ್ಡ ರಾಜಕೀಯ ಬೆಳವಣಿಗೆಳಗಾಗುತ್ತಿದೆ. ಇತ್ತ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಕರ್ನಾಟಕ ಕಾಂಗ್ರೆಸ್ ಸಮರ ಸಾರುತ್ತಿದ್ದರೆ ಅತ್ತ ಅದೇ ಕಾಂಗ್ರೆಸ್ ನಾಯಕರು, ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿ ಕಾಂಗ್ರೆಸ್ಗೆ ಮುಜುಗರ ಉಂಟು ಮಾಡಿದ್ದಾರೆ.
ಹೌದು, ಮಾಜಿ ಸಚಿವ ಮತ್ತು ಶಾಸಕರಲ್ಲಿ ಒಬ್ಬರಾದ ಪ್ರಮೋದ್ ಮಧ್ವರಾಜ್ ಅವರೊಂದಗೆ ಹಲವಾರು ಹಿರಿಯ ನಾಯಕರು ಬಿಜೆಪಿ ಸೇರ್ಪಡೆಯಾಇದ್ದಾರೆ. ಮಾಜಿ ಎಂಎಲ್‌ಸಿ ಸಂದೇಶ್ ನಾಗರಾಜ್, ರಾಜ್ಯ ಮಾಜಿ ಸಚಿವ ವರ್ತೂರು ಪ್ರಕಾಶ್, ಪಕ್ಷದ ಮಾಜಿ ಸಂಸದ ಕೆ ಬಿ ಕೃಷ್ಣಮೂರ್ತಿ, ಮಾಜಿ ಶಾಸಕ ಮಂಜುನಾಥ್ ಗೌಡ, ಮಾಜಿ ಐಆರ್‌ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿಂಗೇಗೌಡ, ಮಂಡ್ಯದ ಕಾಂಗ್ರೆಸ್ ನಾಯಕ ಅಶೋಕ್ ಜಯರಾಂ ಸೇರಿದಂತೆ ಹಲವಾರು ಜನ ಆಡಳಿತ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.