ಕೆಆರ್ಪಿಪಿ (KRPP) ಎಂಬ ಪಕ್ಷ ಕಟ್ಟಿ ಸಿಂಗಲ್ ಆಗಿ ಗೆದ್ದಿದ್ದ ನಾಯಕ ಗಾಲೀ ಜನರ್ಧಾನ ರೆಡ್ಡಿ (janardhana reddy). ಯಾಕಂದ್ರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ(Bjp) ಜನಾರ್ಧನ ರೆಡ್ಡಿಯನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಮನಸ್ಸು ಮಾಡಿರಲಿಲ್ಲ. ಆದ್ರೆ ಈಗ ಬಳ್ಳಾರಿ ಗಣಿಧಣಿ ಮರಳಿ ಗೂಡು ಸೇರೋದಕ್ಕೆ ಸಜ್ಜಾಗಿದ್ದು ಇವತ್ತು ಕೇಸರಿ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ಲೋಕಸಭೆ ಚುನಾವಣೆ ಬರ್ತಿದ್ದಂತೆ ಬಿಜೆಪಿ(BJP) noಸೇರಲು ಗಣಿಧಣಿ ಸನ್ದರಾಗಿದ್ದಾರೆ. ಇನ್ನೂ ಬಿಜೆಪಿ ಸೇರ್ಪಡೆಯಾಗಲಿರೋ ಜನಾರ್ದನ ರೆಡ್ಡಿ ಈಗಾಗಲೇ ಗೃಹ ಸಚಿವ ಅಮಿತ್ ಶಾ (Amith sha) ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ. ಬಿಜೆಪಿ ಸೇರುವ ನಿಟ್ಟಿನಲ್ಲಿ ಜನಾರ್ದನ ರೆಡ್ಡಿ 200ಕ್ಕೂ ಅಧಿಕ ಕೆಆರ್ಪಿಪಿ (KRPP) ಪದಾಧಿಕಾರಿಗಳ ಸಭೆ ನಡೆಸಿ, ಒಪ್ಪಿಗೆ ಪಡೆದಿದ್ದಾರೆ. ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ (B.Y.Vijayendra), ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ (Radha mohan agarwal) ನೇತೃತ್ವದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಆ್ಯಂಡ್ ಟೀಂ ಕೇಸರಿ ಧ್ವಜವನ್ನ ಹಿಡಿಯಲಿದೆ.
ಇದೇ ವೇಳೆ ಕೊಪ್ಪಳ (Koppal) ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನ ಬದಲಾಯಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಕೊಪ್ಪಳದ ಟಿಕೆಟ್ನ ಪತ್ನಿ ಅರುಣಾ ಲಕ್ಷ್ಮೀಗೆ (Aruna lakshmi) ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರ ಜೊತೆ ಚರ್ಚಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರಂತೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಕೊಪ್ಪಳವನ್ನ ಕಬ್ಬ ಮಾಡಲು ರೆಡ್ಡಿ ಮರಳಿ ಗೂಡು ಸೇತ್ರಿದ್ದಾರೆ.. ಇದೀಗ ಕೊಪ್ಪಳ ಟಿಕೆಟ್ನ ಬಿಜೆಪಿ ಹೈಕಮಾಂಡ್ ರೆಡ್ಡಿಗಾರು ಪತ್ನಿಗೆ ನೀಡುತ್ತಾ ಇಲ್ವಾ ಅನ್ನೋದೆ ಸದ್ಯದ ಕುತೂಹಲ.