• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗುಜರಾತ್​ ಮಾದರಿಯಲ್ಲಿ ಕರ್ನಾಟಕದಕಲ್ಲೂ ಟಿಕೆಟ್​ ರಿಲೀಸ್‌ ಮಾಡುತ್ತಾ ಬಿಜೆಪಿ..??

ಪ್ರತಿಧ್ವನಿ by ಪ್ರತಿಧ್ವನಿ
April 5, 2023
in Top Story, ಇದೀಗ, ಕರ್ನಾಟಕ
0
ಗುಜರಾತ್​ ಮಾದರಿಯಲ್ಲಿ ಕರ್ನಾಟಕದಕಲ್ಲೂ ಟಿಕೆಟ್​ ರಿಲೀಸ್‌ ಮಾಡುತ್ತಾ ಬಿಜೆಪಿ..??
Share on WhatsAppShare on FacebookShare on Telegram

ಬೆಂಗಳೂರು:ಏ.04: ಗುಜರಾತ್​ ಮಾದರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಟಿಕೆಟ್​ ಬಿಡುಗಡೆ ಮಾಡಲಿದ್ದಾರೆ. ಅಂದ್ರೆ ಹಾಲಿ ಶಾಸಕರನ್ನು ಬಿಟ್ಟು ಹೊಸಬರಿಗೆ ಟಿಕೆಟ್ ನೀಡುವ ಸಾಧ್ಯತೆ ಎಂದು​ ಸ್ವತಃ ಬಿಜೆಪಿ ನಾಯಕರು ಹೇಳಿಕೊಂಡು ಬರ್ತಿದ್ದಾರೆ. ಇದ್ರ ನಡುವೆ ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್​ ಆಗಿದೆ. ಇದು ಕಾಂಗ್ರೆಸ್​ ಮಾಡಿರುವ ಫೇಕ್​ ಸುದ್ದಿ ಎಂದು ಬಿಜೆಪಿ ಆರೋಪಿಸಿದೆ. ಇದ್ರಿಂದ ಕಾಂಗ್ರೆಸ್​ಗೆ ಏನು ಲಾಭ ಅಂತಾ ನಿಮ್ಮಲ್ಲಿ ಪ್ರಶ್ನೆ ಬರಬಹುದು ಆದರೆ ಲಾಭ ಇದೆ, ಏನಪ್ಪ ಅಂದ್ರೆ ಟಿಕೆಟ್​ ಹಂಚಿಕೆ ಮಾಡೋಕೆ ಕಷ್ಟ ಪಡ್ತಿರೋ ಬಿಜೆಪಿ ಅಭ್ಯರ್ಥಿಗಳ ನಡುವೆ ಬೆಂಕಿ ಹೊತ್ತಿಕೊಳ್ಳುತ್ತೆ. ಮೂರು ಕಾರಣಗಳನ್ನು ನೋಡಬಹುದು, ಬಿಜೆಪಿ ನಾಯಕರು ಟಿಕೆಟ್​ಗಾಗಿ ಹೋರಾಟ ಶುರು ಮಾಡಬಹುದು,
ಟಿಕೆಟ್​ ಸಿಗಲ್ಲ ಅನ್ನೋದು ಗೊತ್ತಾದ್ರೆ ಬಿಜೆಪಿಯಿಂದ ಕಾಲ್ಕಿತ್ತು ಕಾಂಗ್ರಸ್​ ಕಡೆಗೆ ಬರಬಹುದು. ಬಿಜೆಪಿ ಟಿಕೆಟ್​ ಗೊಂದಲದ ಇದೇ ಅನ್ನೋದನ್ನು ಸಾರ್ವಜನಿಕವಾಗಿ ಮನವರಿಕೆ ಮಾಡಿ, ಈ ಮೂಲಕ ಲಾಭ ಪಡೆಯಬಹುದು. ಆದರೆ ಇದಕ್ಕೆ ಕಾಂಗ್ರೆಸ್​ ಹೇಳ್ತಿರೋದೇ ಬೇರೆ.

ADVERTISEMENT

ಗುಜರಾತ್​ ಮಾದರಿಯಲ್ಲಿ ಟಿಕೆಟ್​ ಬಿಡುಗಡೆ ಅಂತಾ ಸ್ವತಃ ಬಿಜೆಪಿ ಹೇಳಿಕೊಂಡಿತ್ತು. ಅದರಂತೆ ತಾನೇ ಗುಜರಾತ್ ಮಾದರಿ ಅನುಸರಿಸಿ ಕ್ಷೇತ್ರ ಬದಲಾವಣೆ ಮಾಡೋದು,
ತಾನೇ ಮೊದಲ ಲಿಸ್ಟ್ ರಿಲೀಸ್ ಮಾಡೋದು, ಆ ಬಳಿಕ ಆಕಾಂಕ್ಷಿಗಳು ಹಾಗು ಬೆಂಬಲಿಗರ ಪ್ರತಿಭಟನೆ ತಾಳಲಾರದೇ, ತಾನೇ ಅದನ್ನು ಫೇಕ್ ಅಂತ ಹೇಳೋದು.
ಅಭ್ಯರ್ಥಿಗಳ ಮೊದಲ ಪಟ್ಟಿ ಹಿಂಪಡೆದು ಸಂತೋಷ ಪಡುತ್ತಿರೋದು ಯಾರು? ಎಂದು ಪ್ರಶ್ನೆ ಮಾಡಿದೆ. ಈ ಮೂಲಕ ಬಿ.ಎಲ್​ ಸಂತೋಷ್​ ಲಿಸ್ಟ್​ ವಾಪಸ್​ ಪಡೆದಿದ್ದಾರೆ ಅನ್ನೋ ರೀತಿ ಪರೋಕ್ಷವಾಗಿ ಹೇಳಿದೆ. ಬಿ.ಎಲ್.​ಸಂತೋಷ್​ ಟಿಕೆಟ್​ ಲಿಸ್ಟ್​ ವಾಪಸ್​ ಪಡೆದಿದ್ದು ಯಾಕೆ ಅಂದ್ರೆ, ಶಿವಮೊಗ್ಗದ ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರೆ ಹೆಸರು ಬಂದಿದ್ದಕ್ಕಾ? ಎಂದು ಕಾಂಗ್ರೆಸ್​ ಅನುಮಾನ ವ್ಯಕ್ತಪಡಿಸಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಟಿಕೆಟ್​ ಹಂಚಿಕೆ ಬಗ್ಗೆ ಸಿಎಂ ಕೂಡ ಮಾತನಾಡಿದ್ದಾರೆ. ಕಳೆದ 2-3 ದಿನಗಳಿಂದ ಬಿಜೆಪಿಯಲ್ಲಿ ಕಸರತ್ತು ನಡೆಯುತ್ತಿದೆ. 2 ದಿನದ ಸಭೆ ಮಾಡಿದ ಬಳಿಕ ಇಂದು ರಾಜ್ಯ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ. ಈ ಮೀಟಿಂಗ್​ನಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಮಾಡಿ ಕೇಂದ್ರಕ್ಕೆ ಕಳಿಸ್ತೇವೆ. ಕೇಂದ್ರ ಬಿಜೆಪಿ ಚುನಾವಣಾ ಸಮಿತಿಗೆ ಪಟ್ಟಿ ಸೇರಿದ ಬಳಿಕ ಅಲ್ಲಿಂದ ಟಿಕೆಟ್​​ ಬಿಡುಗಡೆ ಆಗುತ್ತೆ. ದೆಹಲಿಯಿಂದ ಅಧಿಕೃತ ಪಟ್ಟಿ ಹೊರಬೀಳಲಿದೆ ಎಂದು ಸಿಎಂ ಹೇಳಿದ್ದಾರೆ. ಟಿಕೆಟ್​ ಹಂಚಿಕೆ ವಿಚಾರವಾಗಿ 2 ದಿನ ಜಿಲ್ಲಾ ಸಮಿತಿ ಸಭೆ ಆಗಿದೆ. ಇಂದು, ನಾಳೆ ರಾಜ್ಯದಲ್ಲಿ ಸಭೆ ಮಾಡಿ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸುತ್ತೇವೆ. ಏಪ್ರಿಲ್ 8ರಂದು ಕೇಂದ್ರ ಸಮಿತಿ ಪಟ್ಟಿ ಪರಿಶೀಲಿಸಿ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಟಿಕೆಟ್​ ಗೊಂದಲ ಯಾಕೆ ಅನ್ನೋ ಪ್ರಶ್ನೆ ಬಿಜೆಪಿ ಕಾರ್ಯಕರ್ತರನ್ನು ಸಹಜವಾಗಿಯೇ ಕಾಡುತ್ತಿದೆ. ಇದಕ್ಕೆ ನಮಗೆ ಸಿಕ್ಕಿರುವ ಮಾಹಿತಿ ಅಂದ್ರೆ ಹೊಸ ಮುಖಗಳಿಗೆ ಅವಕಾಶ ಕೊಡಬೇಕು, ಒಂದು ವೇಳೆ ಹಾಲಿ ಶಾಸಕರಿಗೆ ಟಿಕೆಟ್​ ಕೈ ತಪ್ಪಿದ್ರೆ ಪಕ್ಷಾಂತರ ಭೀತಿ ಇದೆ. ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಸಿಗದೆ ಬೇರೆ ಪಕ್ಷಗಳಿಗೆ ವಲಸೆ ಹೋದ್ರೆ ಕಾಂಗ್ರೆಸ್​ ಗೆಲ್ಲಲಿದೆ. ಇನ್ನು ಹಲವು ಕ್ಷೇತ್ರಗಳಲ್ಲಿ ಯಡಿಯೂರಪ್ಪ ಹಾಗು ಇತ್ತೀಚಿಗೆ ಸರ್ಕಾರ ರಚನೆಗೆ ವಲಸೆ ಬಂದವರು ಪಟ್ಟು ಹಿಡಿದಿದ್ದಾರೆ. ಮಹೇಶ್​ ಕುಮಟಳ್ಳಿಗೆ ಟಿಕೆಟ್​ ಕೊಡಿಸಲು ರಮೇಶ್​ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಅದೇ ರೀತಿ ಯಡಿಯೂರಪ್ಪ ಕೂಡ ಕೆಲವೊಂದಿಷ್ಟು ಬೆಂಬಲಿಗರಿಗೆ ಟಿಕೆಟ್​ ಕೊಡಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ. ಇದ್ರ ನಡುವೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಈ ಬಾರಿ ಟಿಕೆಟ್​ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಿಜೆಪಿ ಗೆಲುವು ಸಾಧಿಸಿದ್ರೆ ಬ್ರಾಹ್ಮಣರೇ ಮುಖ್ಯಮಂತ್ರಿ ಅಂತಾ ಕುಮಾರಸ್ವಾಮಿ ಬಾಂಬ್​ ಸಿಡಿಸಿದ್ರು. ಆ ಮಾತಿಗೆ ಸಾಕ್ಷ್ಯ ಎನ್ನುವಂತೆ ಪ್ರಹ್ಲಾದ್​ ಜೋಶಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಬಿ.ಎಸ್.​ಯಡಿಯೂರಪ್ಪಗೆ ಮಾನ್ಯತೆ ಸಿಗುತ್ತಾ ಅಥವಾ ಪ್ರಹ್ಲಾದ್​ ಜೋಶಿ, ಬಿ.ಎಲ್​ ಸಂತೋಷ್​ಗೆ ಹೆಚ್ಚಿನ ಮಾನ್ಯತೆ ಸಿಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.

Tags: BJPbjpkarnatakaCongress PartyGujratkanatakaelctionKarnataka GovernmentKarnataka PoliticslatestnewsnewsupdatePMModiನರೇಂದ್ರ ಮೋದಿಬಿಜೆಪಿ
Previous Post

ಗುಜರಾತ್‌ಗೆ ಸುಲಭ ತುತ್ತಾದ ಡೆಲ್ಲಿ ; ಹಾಲಿ ಚಾಂಪಿಯನ್‌ಗಳ 2ನೇ ಪಂದ್ಯ ಕೂಡ ಜಯ

Next Post

ಸಾವರಕರ್-ಕ್ಷಮಾಪಣೆ ಮತ್ತು ದೇವೇಂದ್ರ ಫಡ್ನವಿಸ್..!

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

April 27, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

AI ಚಾಟ್‌ಬಾಟ್ ‘Grok’ ಆಯ್ಕೆ ಮಾಡಿದ ಪ್ರಧಾನಿ ಯಾರು?

April 27, 2026
Next Post
ಸಾವರಕರ್-ಕ್ಷಮಾಪಣೆ ಮತ್ತು ದೇವೇಂದ್ರ ಫಡ್ನವಿಸ್..!

ಸಾವರಕರ್-ಕ್ಷಮಾಪಣೆ ಮತ್ತು ದೇವೇಂದ್ರ ಫಡ್ನವಿಸ್..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada