ಚಿಕ್ಕಬಳ್ಳಾಪುರ (Chikkaballapur) ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ (BY Vijayendra) ಹಿನ್ನಡೆಯಾಗಿದೆ. ಸದ್ಯಕ್ಕೆ ಜಿಲ್ಲಾಧ್ಯಕ್ಷರ ಆಯ್ಕೆ ಚುನಾವಣೆಯನ್ನು ತಡೆಹಿಡಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ.

ಈ ಬಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ (Radha mohan das) ವಿಜಯೇಂದ್ರಗೆ ಪತ್ರ ರವಾನೆ ಮಾಡಿದ್ದು, ಚಿಕ್ಕಬಳ್ಳಾಪುರದ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಸಂದೀಪ್ ರೆಡ್ಡಿ (Sandeep reddy) ನೇಮಕಾತಿಯನ್ನು ತಡೆ ಹಿಡಿಯುವಂತೆ ಹೈಕಮಾಂಡ್ ಸೂಚನೆ ರವಾನೆ ಮಾಡಿದೆ.
ಇತ್ತೀಚಿಗೆ ಸಂದೀಪ್ ರೆಡ್ಡಿ ಆಯ್ಕೆ ಕುರಿತಾಗಿ ಸಂಸದ ಡಾ.ಸುಧಾಕರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಜಯೇಂದ್ರ ನಾಯಕರನ್ನು ಒಟ್ಟುಗೂಡಿಸಿ ಪಕ್ಷ ಮುನ್ನಡೆಸುತ್ತಿಲ್ಲ, ನಮ್ಮ ಫೋನ್ ರಿಸೀವ್ ಮಾಡಲ್ಲ ಎಂದೆಲ್ಲ ವಾಗ್ದಾಳಿ ನಡೆಸಿದ್ದರು.