ಚಿನ್ನದ ದರ (Gold rate) ದಿನೇ ದಿನೇ ಗಗನಕ್ಕೇರುತ್ತಲೇ ಇದೆ. ಸತತವಾಗಿ ಚಿನ್ನದ ದರ ಏರಿಕೆಯಾಗುತ್ತಿದ್ದು, ದೆಹಲಿಯಲ್ಲಿ (Delhi) ಇಂದು ಹತ್ತು ಗ್ರಾಂ ಚಿನ್ನದ ಬೆಲೆ 88,500 ರೂಪಾಯಿಗೆ ಏರಿಕೆ ಕಂಡಿದೆ.ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 2,430 ರೂಪಾಯಿ ಏರಿಕೆಯಾಗಿದ್ದು ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಆ ಮೂಲಕ ದೆಹಲಿಯಲ್ಲಿ ಸಾರ್ವಕಾಲಿಕ ಏರಿಕೆ ಕಂಡ ಚಿನ್ನದ ಬೆಲೆ ಎಂಬ ದಾಖಲೆ ಸೃಷ್ಟಿಯಾಗಿದೆ.

ಇನ್ನು ಜಾಗತಿಕ ಟ್ರೆಂಡ್ ಹಾಗೂ ದುರ್ಬಲ ರೂಪಾಯಿ ಮೌಲ್ಯದ ಕಾರಣದಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಚಿಲ್ಲರೆ ಖರೀದಿ, ಜ್ಯುವೆಲ್ಲರಿ ಮಾಲೀಕರಿಂದ ಭಾರಿ ಬೇಡಿಕೆಯಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ.
ಆಮೆರಿಕಾಕ್ಕೆ ಸ್ಟೀಲ್, ಅಲ್ಯುಮಿನಿಯಂ ಅಮದಿನ ಮೇಲೆ ಶೇ.25 ರಷ್ಟು ಸುಂಕ ಘೋಷಿಸಿದ ಟ್ರಂಪ್ ಅವರ ನಿರ್ಧಾರದಿಂದ ಕೂಡ ಚಿನ್ನಲ ಬೆಲೆಯಲ್ಲಿ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಇನ್ನಷ್ಟು ಗಗನಮುಖಿಯಾದ್ರು ಅಚ್ಚರಿಯಿಲ್ಲ.