ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Shah) 2024ರ ಲೋಕಸಭಾ ಚುನಾವಣೆಗೂ ಮುನ್ನವೇ CAA (Citizenship Amendment Act) ಜಾರಿ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. 2019ರಲ್ಲಿ ಈಗಾಗಲೇ ಲೋಕಸಭೆಯಲ್ಲಿ ಪಾಸ್ ಆಗಿರುವ Citizenship Amendment Act ಇನ್ನೂ ಜಾರಿಗೆ ಬಂದಿಲ್ಲ. ಆದರೆ ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿ ಮಾಡಲಾಗುವುದು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇನ್ನು ಮುಸ್ಲಿಂ ಸಮುದಾಯವನ್ನು CAA ವಿರುದ್ಧ ಎತ್ತಿ ಕಟ್ಟಲಾಯ್ತು. CAA ಯಾವುದೇ ಭಾರತೀಯನ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಯಾರೆಲ್ಲಾ ಕಿರುಕುಳಕ್ಕೆ ಒಳಗಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಭಾರತಕ್ಕೆ ಬಂದಿದ್ದಾರೆ ಅವರಿಗೆ ಪೌರತ್ವ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

2014ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ಯಾರೆಲ್ಲಾ ನೆಲೆ ಅರಸಿಕೊಂಡು ಬಂದಿದ್ದಾರೋ ಅವರಿಗೆ ಭಾರತೀಯ ಪೌರತ್ವ ಕೊಡುವುದು ಅಷ್ಟೇ ಕಾಯ್ದೆಯಲ್ಲಿದೆ. ಆದರೆ ಮುಸ್ಲಿಮರ ಪೌರತ್ವ ಹೋಗಲಿದೆ ಎಂದು ಅವರನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲಾಯ್ತು ಎಂದಿದ್ದಾರೆ. Citizenship Amendment Act ಹಿಂದಿನ ಕಥೆಯನ್ನು ಹಂಚಿಕೊಂಡ ಅಮಿತ್ ಶಾ, ನಿಜವಾಗಲೂ ಈ ಭರವಸೆಯನ್ನು ಕೊಟ್ಟಿದ್ದು ಕಾಂಗ್ರೆಸ್, ಯಾರೇ ವಲಸಿಗರು ಪಾಕಿಸ್ತಾನದಿಂದ ಭಾರತಕ್ಕೆ ಬಂದರೆ ಸದಾ ಸ್ವಾಗತ ಮಾಡುತ್ತೇವೆ ಎಂದು ಹೇಳಿತ್ತು. ಭಾರತದ ಪೌರತ್ವ ಕೊಡುತ್ತೇವೆ ಎಂದೂ ಹೇಳಿದ್ದರು. ಆದರೆ ಇತ್ತೀಚಿಗೆ ನಾಗರಿಕ ಕಾಯ್ದೆಗೆ ರಾಜಕೀಯಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ಗೆ ಕುಟುಕಿದ್ದಾರೆ.
2016ರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ Citizenship Amendment Act ವಿಚಾರದಲ್ಲಿ ಹೊತ್ತಿ ಉರಿದಿತ್ತು. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ CAA ಜಾರಿ ಮಾಡಲಾಗ್ತಿದೆ ಎಂದು ಹೇಳಲಾಗಿತ್ತು. ಇಲ್ಲೀವರೆಗೂ Citizenship Amendment Act ನಲ್ಲಿ ಏನೆಲ್ಲಾ ಇದೆ ಎನ್ನುವುದು ಬಹಿರಂಗ ಆಗಿಲ್ಲ. ಇದೀಗ ಲೋಕಸಭಾ ಚುನಾವಣೆಗೂ ಮುನ್ನವೇ CAA ಜಾರಿ ಮಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಭರವಸೆ ನೀಡಿದ್ದಾರೆ. ಆದರೆ ಇದೊಂದು ಕಾಂಗ್ರೆಸ್ ಪಾಲಿಗೆ ದಿವ್ಯಾಸ್ತ್ರ ಆಗುವ ಸಾಧ್ಯತೆಯಿದೆ. INDIA ಒಕ್ಕೂಟ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಬರುತ್ತಿರುವ ಈ ಸಮಯದಲ್ಲಿ ಕಾಂಗ್ರೆಸ್ ಕೈಗೆ ಕೇಸರಿ ಪಾಳಯ ಕೋಲು ಕೊಟ್ಟು ಹೊಡೆಸಿಕೊಳ್ಳುವ ಕೆಲಸ ಮಾಡ್ತಿದ್ಯಾ ಅನ್ನೋ ಅನುಮಾನ ಬರುತ್ತಿದೆ.

ಮುಸ್ಲಿಂ ಸಮುದಾಯ ಈಗಾಗಲೇ CAA ವಿಚಾರದಲ್ಲಿ ಒಮ್ಮೆ ಉಗ್ರ ಹೋರಾಟ ಮಾಡಿದೆ. ಇದೀಗ ಚುನಾವಣೆ ಸಮಯ, ಸರ್ಕಾರ CAA ಜಾರಿ ಮಾಡಿದ ಬಳಿಕ ರಾಜಕಾರಣಕ್ಕಾಗಿಯೇ ಹೋರಾಟ ಹೆಚ್ಚಾಗಬಹುದು. ಅದರಿಂದ ಸಾವು ನೋವು ಸಂಭವಿಸಬಹುದು. ಆಗ ಕೇಂದ್ರದ ಬಿಜೆಪಿ ಸರ್ಕಾರಕ್ಕೇ ಕೆಟ್ಟ ಹೆಸರು. ಇನ್ನು CAA ಕಾಯ್ದೆಯಲ್ಲಿ ಮುಸ್ಲಿಮರು ಪೌರತ್ವ ಉಳಿಸಿಕೊಳ್ಳಲು ಇಂತಿಷ್ಟು ದಾಖಲೆಗಳನ್ನು ನೀಡಬೇಕು ಎನ್ನುವುದು ಸತ್ಯವಾದರೆ ದೇಶದಲ್ಲಿ ಮತ್ತೆ ಅರಾಜಕತೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಆಗೊಂದು ವೇಳೆ ಆದರೆ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಮತಗಳು ವಿಭಜನೆ ಆಗಲಿದೆ. ಅದು ಕಾಂಗ್ರೆಸ್‌ಗೆ ಸಹಕಾರಿ ಆಗುತ್ತಾ..? ಇಲ್ಲಾ ಬಿಜೆಪಿಗೆ ಸಹಕಾರ ಆಗುತ್ತ ಅನ್ನೋದನ್ನು ಚುನಾವಣೆ ಬಳಿಕ ಅಷ್ಟೇ ಕಾದು ನೋಡ್ಬೇಕಿದೆ.
#MPElection #CAA #Congress #AmithShah #NarendraModi