ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಜಾತಿ ರಾಜಕಾರಣ ಈ ಭಾರೀ ಬಿಜೆಪಿಗೆ ಪೆಟ್ಟು ನೀಡುತ್ತದೆ ಎಂದೇ ಹೇಳಲಾಗುತ್ತಿದೆ. ಆರು ಮತ್ತು ಏಳನೇ ಹಂತದ ಮತದಾನ ನಡೆಯಲಿರುವ ಪೂರ್ವ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಬಿಜೆಪಿಗೆ ಕಠಿಣ ಪರಿಸ್ಥಿತಿ ಎದುರಾಗಿದೆ.
ಬಿಜೆಪಿಗೆ ಸುಹೇಲ್ದೇವ್ ಭಾರತೀಯ ಜನತಾ ಪಕ್ಷ (SBSP), ಅಪ್ನಾದಳ (AD) ದಂತಹ ಸಣ್ಣ ಹಾಗೂ ಜಾತಿ ಸಂಘಟಿತ (Caste Based) ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ತೊರೆದು ದೊಡ್ಡ ಶಾಕ್ ನೀಡಿದ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ದಾರಾ ಸಿಂಗ್ ಚೌಹಾಣ್ ಎಂಬ ಪ್ರಭಾವಿ OBC ನಾಯಕರನ್ನು ಬಹುಜನ ಸಮಾಜವಾದಿ ಪಕ್ಷದಿಂದ (BSP) ಯಿಂದ ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿತ್ತು. ಈ ಹಿಂದೆ 2017ರಲ್ಲಿ ನಡೆದಿದ್ದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿಗೆ Obc ಹಾಗೂ ಯಾದವೇತರ Obc ಮತಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಓಂ ಪ್ರಕಾಶ್ ರಾಜ್ಭರ್ ನೇತೃತ್ವದ SBSP ಪಕ್ಷವು ಈ ಪ್ರದೇಶಗಳಲ್ಲಿ ಸುಮಾರು 25 ಕ್ಷೇತ್ರಗಳಲ್ಲಿ ನಿರ್ಣಾಯಕ ಎನಿಸಿದ ʻರಾಜ್ಭರ್ʼ ಸಮುದಾಯದ ಮತಗಳು ಬಿಜೆಪಿಗೆ ತಕ್ಕೆಗೆ ತಂದು ಕೊಟ್ಟಿತ್ತು. ಇತ್ತ ಪ್ರಭಾವಿ ʻಕುರ್ಮಿʼ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಅಪ್ನಾ ದಳ (AD) ಬಿಜೆಪಿಗೆ ತಂದು ಕೊಡುವಲ್ಲಿ ಯಶಸ್ವಿಯಾದವು. ಇದು ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲಲು ಹೆಚ್ಚು ಲಾಭಾಂಶವನ್ನು ತಂದು ಕೊಟ್ಟಿತ್ತು.
ಹಿಂದುಳಿದ ಸಮುದಾಯಗಳ (OBC) ಮತದಾರರ ಮೇಲೆ ತೀವ್ರ ಹಿಡಿತವನ್ನ ಹೊಂದಿದ್ದ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ದಾರಾ ಸಿಂಗ್ ಚೌಹಾಣ್ ನಂತಹ ಹಿಂದುಳಿದ ವರ್ಗಗಳ ಪ್ರಮುಖ ನಾಯಕರು ಬಿಜೆಪಿಗೆ ಮತ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು.
ಆದರೆ, ಈ ಭಾರೀ ಪರಿಸ್ಥಿತಿ ಬದಲಾದಂತೆ ಕಾಣುತ್ತಿದೆ. ಏಕೆಂದರೆ SBSP ಈ ಭಾರೀ ಸಮಾಜವಾದಿ ಪಕ್ಷದ (SP) ಜೊತೆಗೆ ಕೈ ಜೋಡಿಸಿದೆ. ಯೋಗಿ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಮೌರ್ಯ ಹಾಗೂ ಚೌಹಾಣ್ SPಯಿಂದ ಸ್ಪರ್ಧಿಸುತ್ತಿರುವುದು ಬಿಜೆಪಿ ಕಷ್ಟ ಸಾಧ್ಯವಾಗಿದೆ. ಇತ್ತ BSPಯ ಮಾಜಿ ರಾಜ್ಯಾಧ್ಯಕ್ಷ ರಾಮ್ ಅಚಲ್ ರಾಜ್ಭರ್ ಮತ್ತು ಮಾಜಿ ಸಚಿವ ಲಾಲ್ಜಿ ವರ್ಮಾ ಅವರಂತಹ ಪ್ರಭಾವಿ OBC ನಾಯಕರನ್ನು SP ತನ್ನತ್ತ ಸೆಳೆದುಕೊಂಡ ಕಾರಣ ಇದು ಬಿಜೆಪಿಗೆ ಮತ್ತಷ್ಟು ಹೊಡೆತ ನೀಡಲಿದೆ ಎನ್ನುವ ವಿಶ್ಲೇಷಣಗಳು ನಡೆದಿವೆ.
ಆರು ಹಾಗೂ ಏಳನೇ ಹಂತದ ಮತದಾನ ನಡೆಯಲಿರುವ ಕ್ಷೇತ್ರಗಳಾದ ವಾರಾಣಾಸಿ, ಜೌನಪುರ್, ಅಜಮ್ಗಢ, ಜಾನ್ಪುರ್, ಮಿರ್ಜಾಪುರ್, ಅಂಬೇಡ್ಕರ್ ನಗರ, ಗೋರಖ್ಪುರ್, ಡಿಯೋರಿಯಾ, ಕುಶಿನಗರ, ಬಲ್ಲಿಯಾ, ಮೌ ಮತ್ತು ಘಾಜಿಪುರ ಕ್ಷೇತ್ರಗಳನ್ನು ಒಳಗೊಂಡಿದೆ. ರಾಜ್ಭರ್, ಚೌಹಾಣ್ ಹಾಗೂ ಮೌರ್ಯ ಸಮುದಾಯಗಳು ಈ ಭಾಗದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಒಟ್ಟಿನಲ್ಲಿ ಬಿಜೆಪಿಗೆ ಹಿಂದಿನ ಚುನಾವಣೆಯಲ್ಲಿ ಕೈ ಹಿಡಿದ OBC ನಾಯಕರು ಈ ಭಾರೀ ಒಬ್ಬರ ಹಿಂದಂತೆ ಒಬ್ಬರು ಹಾದಿಯಾಗಿ ಕೈ ಕೊಟ್ಟಿದ್ದು ಮಾತ್ರ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಮಾರ್ಚ್ 10ರಂದು ಪ್ರಕಟಗೊಳ್ಳಲಿರುವ ಚುನಾವಣೆ ಪಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.